ರಾಷ್ಟ್ರಪತಿ ಚುನಾವಣೆ: ಮತದಾನಕ್ಕಾಗಿ ವಿಧಾನ ಸೌಧ ಸಜ್ಜು

ಇಂದು ನಡೆಯುವ ರಾಷ್ಟ್ರಪತಿ ಚುನಾವಣೆಗೆ ಮತದಾನಕ್ಕಾಗಿ ವಿಧಾನ ಸೌಧದಲ್ಲಿ ಸಕಲ ಸಿದ್ದತೆ ಕೈಗೊಳ್ಳಲಾಗಿದೆ,...
ವಿಧಾನಸೌಧ
ವಿಧಾನಸೌಧ
Updated on: 
ಬೆಂಗಳೂರು: ಇಂದು ನಡೆಯುವ ರಾಷ್ಟ್ರಪತಿ ಚುನಾವಣೆಗೆ ಮತದಾನಕ್ಕಾಗಿ ವಿಧಾನ ಸೌಧದಲ್ಲಿ ಸಕಲ ಸಿದ್ದತೆ ಕೈಗೊಳ್ಳಲಾಗಿದೆ, 
ಯಾವುದೇ ಸಮಸ್ಯೆಯಿಲ್ಲದಂತೆ ಮತದಾನ ನಡೆಯಬೇಕೆಂಬ ಉದ್ದೇಶದಿಂದ ಸಚಿವಾಲಯದ ಅಧಿಕಾರಿಗಳು ಅಗತ್ಯವಿರುವ ಎಲ್ಲಾ ಸಿದ್ದತೆಗಳನ್ನು ಮಾಡಿದ್ದಾರೆ. ರಾಜ್ಯದ ಎಲ್ಲಾ ಸಂಸದರು ಹಾಗೂ ಶಾಸಕರು ತಮ್ಮ  ಮತ ಚಲಾಯಿಸಲಿದ್ದಾರೆ.
ವಿಧಾನಸೌಧದ 106ನೇ ಕೊಠಡಿಯಲ್ಲಿ ಮತದಾನದ ಪ್ರಕ್ರಿಯೆ ಆರಂಭವಾಗಿದೆ,  ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ,
ರಾಜ್ಯದ 28 ಲೋಕ ಸಭಾ ಸದಸ್ಯರು,  12 ರಾಜ್ಯ ಸಭಾ ಸದಸ್ಯರು, 224 ಶಾಸಕರು  ಮತ ಚಲಾಯಿಸಲಿದ್ದಾರೆ.
ಮೂರು ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಸದಸ್ಯರಿಗೆ ಲಿಖಿತ ಸೂಚನೆ ನೀಡಿವೆ, ಜೆಡಿಎಸ್ ಮೀರಾ ಕುಮಾರ ಗೆ ತನ್ನ ಬೆಂಬಲ ಘೋಷಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com