ಇಂದು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಮಾಜಿ ಪ್ರಧಾನಿ, ಈಗಾಗಲೇ ಸಂಸತ್ತಿನಲ್ಲಿ ವಿರೋಧ ಪಕ್ಷವಿಲ್ಲ. ಹೆಚ್ಚಿನ ಸ್ಥಾನ ಹೊಂದಿರುವ ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆಯವರಿಗೆ ವಿರೋಧ ಪಕ್ಷದ ಮುಖಂಡನ ಗೌರವ ನೀಡಲಾಗಿದೆ ಅಷ್ಟೆ. ಕೆಲವು ಸಂಸ್ಥೆಗಳಿಗೆ ಅಧಿಕಾರಿಗಳನ್ನು, ಮುಖ್ಯಸ್ಥರನ್ನು ನೇಮಕ ಮಾಡುವ ಉನ್ನತ ಮಟ್ಟದ ಸಭೆಯಲ್ಲಿ ಖರ್ಗೆಯವರಿಗೂ ಪಾಲ್ಗೊಳ್ಳಲು ಕರೆಯುತ್ತಾರಷ್ಟೆ. ಇದರಿಂದ ಮುಂದೇನು ಎಂಬ ಆತಂಕ ತಲೆದೋರಿದೆ ಎಂದರು.