ನಿಷೇಧಿಸಿ 2 ದಿನ ಕಳೆದರೂ ಕೆಂಪು ದೀಪ ತೆಗೆಯಲಿಲ್ಲ ಸಚಿವ ಯು.ಟಿ ಖಾದರ್

ವಿಐಪಿ ಸಂಸ್ಕೃತಿಗೆ ಬ್ರೇಕ್ ಹಾಕಲು ಮುಂದಾಗಿರುವ ಕೇಂದ್ರ ಮೇ 1 ರಿಂದ ಸರ್ಕಾರ ಗಣ್ಯರ ವಾಹನಗಳ ಮೇಲಿನ ಕೆಂಪು ದೀಪ ತೆಗೆಯುವಂತೆ ಆದೇಶ ಹೊರಡಿಸಿದೆ, ...
ಯು.ಟಿ ಖಾದರ್ ಅವರ ಕಾರು
ಯು.ಟಿ ಖಾದರ್ ಅವರ ಕಾರು
ಮಂಗಳೂರು: ವಿಐಪಿ ಸಂಸ್ಕೃತಿಗೆ ಬ್ರೇಕ್ ಹಾಕಲು ಮುಂದಾಗಿರುವ ಕೇಂದ್ರ ಮೇ 1 ರಿಂದ ಸರ್ಕಾರ ಗಣ್ಯರ ವಾಹನಗಳ ಮೇಲಿನ ಕೆಂಪು ದೀಪ ತೆಗೆಯುವಂತೆ ಆದೇಶ ಹೊರಡಿಸಿದೆ, ಅದರಂತೆ ಅನೇಕರು ಕೆಂಪು ದೀಪ ತೆಗೆಸಿದ್ದಾರೆ. ಆದರೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ಮಾತ್ರ ತಮ್ಮ ಎರಡು ಎಸ್ ಯುವಿ ಕಾರುಗಳ ಮೇಲಿನ  ಕೆಂಪು ದೀಪ ತೆಗೆಸಿಲ್ಲ.  
ಮಂಗಳವಾರ ಕದ್ರಿಯ ಸರ್ಕ್ಯೂಟ್ ಹೌಸ್ ಬಳಿ  ಖಾದರ್ ಅವರ ಕಾರು ನಿಲ್ಲಿಸಲಾಗಿತ್ತು ಸೋಮವಾರ ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಖಾದರ್ ಸಿಎಂ ಸಿದ್ದರಾಮಯ್ಯ ಆದೇಶ ನೀಡುವ ವರೆಗೂ ತಾವು ಕೆಂಪು ದೀಪ ತೆಗೆಯುವುದಿಲ್ಲ ಎಂದು ಹೇಳಿದ್ದರು. 
ಈ ಸಂಬಂಧ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಿಗಲಿಲ್ಲ, ಖಾದರ್ ಬೆಂಗಳೂರಿಗೆ ತೆರಳಿದ್ದರು. ಮೂಲಗಳ ಪ್ರಕಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಕೃತ ನಿರ್ದೇಶನ ನೀಡಿದ ನಂತರ ಮಾತ್ರ ಖಾದರ್ ಕೆಂಪು ದೀಪ ತೆಗೆಸುತ್ತಾರಂತೆ. 
ನನಗೆ ಕಾರು ನೀಡಿರುವುದು ರಾಜ್ಯ ಸರ್ಕಾರ, ಕೆಂಪು ದೀಪ ಅಳವಡಿಸಿದ್ದು ರಾಜ್ಯ ಸರ್ಕಾರವೇ, ಹೀಗಾಗಿ ನಾನು ಬದಲಿಸಲು ಸಾಧ್ಯವಿಲ್ಲ, ಸಿದ್ದರಾಮಯ್ಯ ಆದೇಶಿಸಿದರೇ ಆಗ ನಾನು ಕೆಂಪು ದೀಪೆ ತೆಗೆಸುತ್ತೇನೆ ಎಂದು ಸೋಮವಾರ ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com