ಚಳಿಗಾಲ ಅಧಿವೇಶನ: ಜಾರ್ಜ್ ರಾಜೀನಾಮೆ ನೀಡುವಂತೆ ಬಿಜೆಪಿ ಪಟ್ಟು

ಡಿವೈಎಸ್'ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಬಂಧ ಸಿಬಿಐ ತನಿಖೆಗೆ ಕೈಗೆತ್ತಿಗೊಂಡಿರುವುದನ್ನು ನಿರೀಕ್ಷೆಯಂತೆಯೇ ಬಿಜೆಪಿ ತನ್ನ ಅಸ್ತ್ರವಾಗಿ ಬಳಸಿಕೊಂಡು ಸಚಿವ ಕೆ.ಜೆ. ಜಾರ್ಜ್ ವಿರುದ್ಧ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೋರಿದ ಪರಿಣಾಮ...
ಚಳಿಗಾಲ ಅಧಿವೇಶನ: ಜಾರ್ಜ್ ರಾಜೀನಾಮೆ ನೀಡುವಂತೆ ಬಿಜೆಪಿ ಪಟ್ಟು
ಚಳಿಗಾಲ ಅಧಿವೇಶನ: ಜಾರ್ಜ್ ರಾಜೀನಾಮೆ ನೀಡುವಂತೆ ಬಿಜೆಪಿ ಪಟ್ಟು
ಬೆಳಗಾವಿ: ಡಿವೈಎಸ್'ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಬಂಧ ಸಿಬಿಐ ತನಿಖೆಗೆ ಕೈಗೆತ್ತಿಗೊಂಡಿರುವುದನ್ನು ನಿರೀಕ್ಷೆಯಂತೆಯೇ ಬಿಜೆಪಿ ತನ್ನ ಅಸ್ತ್ರವಾಗಿ ಬಳಸಿಕೊಂಡು ಸಚಿವ ಕೆ.ಜೆ. ಜಾರ್ಜ್ ವಿರುದ್ಧ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೋರಿದ ಪರಿಣಾಮ ಮೇಲ್ಮನೆಯಲ್ಲಿ ತೀವ್ರ ಕೋಲಾಹಲ, ಆರೋಪ-ಪ್ರತ್ಯಾರೋ, ಧರಣಿ ನಡೆದು ಪರಿಷತ್ತಿನ ಸೋಮವಾರದ ಕಲಾಪ ಬಲಿಯಾಗುವಂತಾಯಿತು. 
ವಿಧಾನಸಭೆಯ ವಿರೋಧ ಪಕ್ಷಗಳ ನಾಯಕ ಕೆ.ಎಸ್.ಈಶ್ವರಪ್ಪ ಅವರು ನಿಲುವಳಿ ಸೂಚನೆಗೆ ಅವಕಾಶ ನೀಡುವಂತೆ ಕೋರಿ ವಿಷಯವನ್ನು ಪ್ರಸ್ತಾಪ ಮಾಡಿದ್ದು ಇದೀ ದಿನ ಜಾರ್ಜ್ ವಿಷಯಕ್ಕೆ ಸೀಮಿತವಾಗುವಂತಾಯಿತು. ಸಚಿವ ಜಾರ್ಜ್ ವಿರುದ್ಧ ಪ್ರತಿಪಕ್ಷ ನಾಯಕ ಗಂಭೀರ ಆರೋಪಗಳನ್ನು ಮಾಡಿದರು. ಇದು ಆಡಳಿತಾರೂಢ ಪಕ್ಷದ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು. ಬಳಿಕ ಜಾರ್ಜ್ ಬೆಂಬಲಕ್ಕೆ ನಿಂತ ಕಾಂಗ್ರೆಸ್ ನಾಯಕರು ಈಶ್ವರಪ್ಪ ಅವರು ಕೂಡಲೇ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದರು. 
ಪ್ರತಿಪಕ್ಷಗಳ ಪ್ರತೀಯೊಂದು ಹೇಳಿಕೆಗೂ ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಕು, ಜಾರ್ಜ್ ಅವರು ರಾಜೀನಾಮೆ ಸಲ್ಲಿಸುವ ಅಗತ್ಯವಿಲ್ಲ. ಕೇವಲ ರಾಜಕೀಯ ಉದ್ದೇಶದಿಂದ ಬಿಜೆಪಿ ಈ ವಿಚಾರವನ್ನು ಪ್ರಸ್ತಾಪ ಮಾಡುವುದೇ ಆದರೆ, ರಾಜಕೀಯವಾಗಿಯೇ ಉತ್ತರ ನೀಡಲು ನಾವೂ ಕೂಡ ಸಿದ್ಧರಿದ್ದೇವೆಂದು ಹೇಳಿದರು. 
ಜಾರ್ಜ್ ವಿರುದ್ಧ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕುರಿತಂತೆ ಮಾತನಾಡಿದ ಅವರು, ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೋರುತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಏಕೆಂದರೆ, ಮೇಲ್ಮನೆಯ ನಿಯಮಗಳು ಇದಕ್ಕೆ ಒಪ್ಪಿಗೆ ನೀಡುವುದಿಲ್ಲ. ಪ್ರಕರಣ ಸಂಬಂಧ ಈ ಹಿಂದೆ ಕೂಡ ನಾನು ಜಾರ್ಜ್ ಅವರು ರಾಜೀನಾಮೆ ನೀಡುವಂತೆ ಕೇಳಿರಲಿಲ್ಲ. ಆದರೆ, ಜಾರ್ಜ್ ಅವರು ಅವರಾಗಿಯೇ ರಾಜೀನಾಮೆಯನ್ನು ನೀಡಿದ್ದರು. ಪ್ರಕರಣ ಸಂಬಂಧ ರಾಜ್ಯ ಸರ್ಕಾರ ನಡೆಸಿದ್ದ ತನಿಖೆ ಕುರಿತಂತೆ ಸುಪ್ರೀಂಕೋರ್ಟ್ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಿರಲಿಲ್ಲ. ಆದೇಶದಲ್ಲಿ ಸಚಿವರ ಹೆಸರನ್ನೂ ಹೇಳಿರಲಿಲ್ಲ. ಹೀಗಾಗಿ ಜಾರ್ಜ್ ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com