ಪ್ರಸ್ತುತ ನಿಮ್ಮ ಹತ್ತಿರ ಅಧಿಕಾರವಿದೆ, ಹಣಬಲವಿದೆ. ಆದರೆ ನಾವು ಬಡವರು. ನೀವು ಕೋರ್ಟ್, ಕಚೇರಿಗೆ ದಿನ ಅಲೆದಾಡಿ ಅಭ್ಯಾಸ ಇದೆ. ಆದರೆ ನಮ್ಮ ಪ್ರಮಾಣಿಕತೆಗೆ ನ್ಯಾಯ ಸಿಕ್ಕೆ ಸಿಗುತ್ತದೆ. ಹೋರಾಡುವ ಹಾಗಿದ್ರೆ ಮುಂದೆಯಿಂದ ಹೋರಾಡಿ, ಪ್ರಾಣ ತೆಗೆಯೋ ಕೆಲಸ ಮಾಡಬೇಡಿ. ಇಂದಿನಿಂದ ಯಾವುದಕ್ಕೂ ಹೆದರಲ್ಲ. ಒಳ್ಳೆಯದು, ಕೆಟ್ಟದನ್ನ ಆ ದೇವರು ನೋಡಿಕೊಳ್ಳುತ್ತಾನೆ. ಇಲ್ಲಿವರೆಗೂ ನಿಮ್ಮ ಬಗ್ಗೆ ರಾಜ್ಯದ ಹೆಣ್ಣುಮಕ್ಕಳಿಗೆ ತಿಳಿದಿರಲಿಲ್ಲ. ಆದರೆ ಇನ್ನು ಮುಂದೇ ನಿಮ್ಮ ಬಗ್ಗೆ ತಿಳಿಯುತ್ತದೆ. ನನ್ನ ಗಂಡನ ಪ್ರಮಾಣಿಕ ಹೋರಾಟದ ಬೆಂಬಲಕ್ಕೆ ನಿಮ್ಮ ಪಕ್ಷದಿಂದ ಯಾರೂ ಬರಲಿಲ್ಲ ಎಂದು ಶೋಭಾ ಆಕ್ರೋಶದಿಂದ ಪತ್ರದಲ್ಲಿ ಬರೆದಿದ್ದಾರೆ.