ಚಿತ್ತಾಪುರ ಕ್ಷೇತ್ರ ಪ್ರಿಯಾಂಕ್ ಗೆ ಕಬ್ಬಿಣದ ಕಡಲೆ: ರಾಜ್ಯ ರಾಜಕೀಯಕ್ಕೆ ಮಲ್ಲಿಕಾರ್ಜುನ ಖರ್ಗೆ?

ರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಚಿತ್ತಾಪುರ ಕ್ಷೇತ್ರದಿಂದ ಸ್ಪರ್ದಿಸುವಂತೆ ಮಾಡಲು ವೇದಿಕೆ ಸಿದ್ಧಪಡಿಸಲಾಗುತ್ತಿದೆ.....
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ: ಸದ್ಯ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಎಲ್ಲಾ ತಂತ್ರಗಳನ್ನು ಅನುಸರಿಸುತ್ತಿದೆ. ಹೀಗಾಗಿ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಚಿತ್ತಾಪುರ ಕ್ಷೇತ್ರದಿಂದ ಸ್ಪರ್ದಿಸುವಂತೆ ಮಾಡಲು ವೇದಿಕೆ ಸಿದ್ಧಪಡಿಸಲಾಗುತ್ತಿದೆ.
ಖರ್ಗೆ ಪುತ್ರ ಪ್ರಿಯಾಂಕ್ ಅವರನ್ನು ಚಿತ್ತಪುರದಿಂದ ಕಲಬುರಗಿ ಗ್ರಾಮಾಂತರಕ್ಕೆ ಶಿಫ್ಟ್ ಮಾಡಲು ತಯಾರಿ ನಡೆಸಲಾಗಿದೆ ಎನ್ನಲಾಗಿದೆ, ಆದರೆ ಈ ಮಾಹಿತಿಯನ್ನು ಸಚಿಪ ಶರಣ ಪ್ರಕಾಶ್ ಪಾಟೀಲ್ ನಿರಾಕರಿಸಿದ್ದಾರೆ, ಆದರೆ ಖರ್ಗೆ ಅವರನ್ನು ಚಿತ್ತಾಪುರದಿಂದ ಕಣಕ್ಕಿಳಿಸಿದರೇ ಕಾಂಗ್ರೆಸ್ ಗೆ ಲಾಭಾವಾಗಲಿದೆ ಎಂದು ಪಕ್ಷ ಚಿಂತನೆ ನಡೆಸುತ್ತಿದೆ.
ಖರ್ಗೆ ಅವರನ್ನು ರಾಜ್ಯ ರಾಜಕೀಯಕ್ಕೆ ಮರಳಿ ತಂದರೇ ಇಡೀ ಕರ್ನಾಟಕದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಮತಗಳನ್ನು ಸಲೀಸಾಗಿ ಪಡೆಯಬಹುದೆಂಬ ಹುನ್ನಾರ ಕಾಂಗ್ರೆಸ್ ನದ್ದಾಗಿದೆ.
ಚಿತ್ತಾಪುರದಲ್ಲಿ ಪ್ರಿಯಾಂಗ್ ಖರ್ಗೆಗೆ ಕಠಿಣ ಸ್ಪರ್ದೆ ಏರ್ಪಡಬಹುದು, ಹಾಗೂ ಗೆಲ್ಲುವುದು ಸ್ವಲ್ಪ ಕಷ್ಟವೇ ಎಂಬುದು ರಾಜಕೀಯರ ವಿಶ್ಲೇಷಕರ ಅಭಿಮತ. ಈಡಿಗ ಸಮುದಾಯದವೇರ ಹೆಚ್ಚಾಗಿರುವ ಚಿತ್ತಾಪುರದಿಂದ ಪ್ರಿಯಾಂಕ್ ಖರ್ಗೆ ಸ್ಪರ್ದಿಸುವುದಕ್ಕೆ ಜಿಲ್ಲೆಯ ಕೆಲವರು ವಿರೋಧ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ,.
ಅಫ್ಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವುದು. ಚಿತ್ತಾಪುರದಲ್ಲಿ ಪ್ರಿಯಾಕ್ ಖರ್ಗೆ ಗೆಲುವಿಗೆ ಸಮಸ್ಯೆಯಾಗಬಹುಗು ಎಂದು ವಿಶ್ಲೇಷಿಸಲಾಗಿದೆ. ಅಪ್ಪ ಮಗನನ್ನು ಸೋಲಿಸಲು ಗುತ್ತೇದಾರೆ ಎಲ್ಲಾ ರೀತಿಯ ತಂತ್ರಗಳನ್ನು ಉಪಯೋಗಿಸಲಿದ್ದಾರೆ,
ಖರ್ಗೆ ಚಿತ್ತಾಪುರದ ಜನರ ಜೊತೆ ಉತ್ತಮ ಸಂಪರ್ಕ ಹೊಂದಿದ್ದಾರೆ, ಅವರ ಕ್ಷೇತ್ರದ ವ್ಯಾಪ್ತಿಗೆ ಬರುವ ಗುಂಡಾಗುರ್ತಿ ಅವರ ಮಾವನ ಗ್ರಾಮವಾಗಿರುವುದರಿಂದ ಖರ್ಗೆ ಸಹಾಯವಾಗಲಿದೆ. ಸಾಮಾನ್ಯ ಕೆಟಗರಿಗೆ ಸೇರಿದ್ದ ಚಿತ್ತಾಪುರ ಕ್ಷೇತ್ರ 2008 ರಲ್ಲಿ ಮೀಸಲು ಕ್ಷೇತ್ರವಾಯಿತು. ಗುರುಮಿಟ್ಕಲ್ ಕ್ಷೇತ್ರದಿಂದ ಖರ್ಗೆ 8 ಬಾರಿ ಗೆದ್ದು ಬಂದಿದ್ದಾರೆ. 2008 ರಲ್ಲಿ ಚಿತ್ತಾಪುರಕ್ಕೆ ಶಿಫ್ಟ್ ಆಗಿದ್ದ ಖರ್ಗೆ 2013ರಲ್ಲಿ ಬಿಜೆಪಿ ಅಭ್ಯರ್ಥಿ ಯನ್ನು 17 ಸಾವಿರ ಮತಗಳಿಂದ ಸೋಲಿಸಿದರು.
ಪ್ರಿಯಾಂಕ್ ಖರ್ಗೆ ಗೆ ಚಿತ್ತಾಪುರ ಕ್ಷೇತ್ರ ಕಬ್ಬಿಣದ ಕಡಲೆ ಎನ್ನುವುದನ್ನು ಅರಿತಿರುವ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ ಆವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.  ಪ್ರಿಯಾಂಕ್ ಖರ್ಗೆ ಅವರನ್ನು ಗುಲ್ಬರ್ಗಾ ಗ್ರಾಮೀಣ ಕ್ಷೇತ್ರಕ್ಕೆ ಬದಲಾಯಸಲು ಹೈಕಮಾಂಡ್ ಒಲವು ತೋರಿದೆ ಎನ್ನಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com