ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಟಿಕೆಟ್ ಬೇಕೆ? ಹಾಗಿದ್ದರೇ ನ್ಯಾಷನಲ್ ಹೆರಾಲ್ಡ್ ಚಂದಾದಾರರಾಗಿ; ಕಾಂಗ್ರೆಸ್ ಫರ್ಮಾನು!

2018ರ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಿಮೆಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಬೇಕೇ? ಹಾಗಿದ್ದರೇ ನೀವು ಖಂಡಿತವಾಗಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: 2018ರ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಿಮೆಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಬೇಕೇ? ಹಾಗಿದ್ದರೇ ನೀವು ಖಂಡಿತವಾಗಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಚಂದಾದಾರಾಗಬೇಕು,  ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಕೆಪಿಸಿಸಿ ವಿಧಿಸಿರುವ ಷರತ್ತು ಇದಾಗಿದೆ. 
ಆಗಸ್ಟ್ 6 ರಂದು ಕರ್ನಾಟಕ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಿರುವ ಕೆಪಿಸಿಸಿ ಈ ಷರತ್ತು ವಿಧಿಸಿದ್ದು , ಇದರ ಪ್ರತಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ದೊರೆತಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಕೆಪಿಸಿಸಿ ಉಪಾಧ್ಯಕ್ಷ ಕೆಇ ರಾಧಾಕೃಷ್ಣ  ನ್ಯಾಷನಲ್ ಹೆರಾಲ್ಡ್ ಚಂದಾದಾರರಾಗುವುದು ಕಡ್ಡಾಯವಾಗಿದೆ, ಪಕ್ಷದ ದೃಷ್ಟಿಕೋನ ತಿಳಿದುಕೊಳ್ಳುವುದು ಕಡ್ಡಾಯವಾಗಿದ್ದು, ನ್ಯಾಷನಲ್ ಹೆರಾಲ್ಡ್ ಪಕ್ಷದ ಮುಖವಾಣಿಯಾಗಿದೆ. ಪ್ರತಿಯೊಬ್ಬ ಅಭ್ಯರ್ಥಿ ಅದನ್ನು ತಿಳಿಗುಕೊಳ್ಳಬೇಕು, ಇದರಿಂದ ಅವರ ಪಕ್ಷವನ್ನು ಅರ್ಥ ಮಾಡಿಕೊಳ್ಳಲಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಚಂದಾದಾರರಾಗಲು 1,900 ರು ಹಣ ನೀಡಬೇಕಿದ್ದು, ಅಭ್ಯರ್ಥಿಯ ಅರ್ಜಿ ಜೊತೆಗೆ ಚಂದಾದಾರಿಕೆ ಅರ್ಜಿಯು ಸಿಗುತ್ತದೆ ಎಂದು ರಾಧಾಕೃಷ್ ತಿಳಿಸಿದ್ದಾರೆ.
2,500  ಕ್ಷೇತ್ರಗಳಿದ್ದು, ಸುಮಾರು 12 ಸಾವಿರ ಅರ್ಜಿಗಳು ಬರುವ ನಿರೀಕ್ಷೆಯಿದೆ, 2,574 ಸ್ಥಾನಗಳಿಗೆ, ಇದರಲ್ಲಿ ನಗರ ಸ್ಥಳೀಯ ಸಂಸ್ಥೆ ಹಾಗೂ ಪಟ್ಟಣ ಪಂಚಾಯಿತಿಗಳು ಸೇರಿವೆ. ವೃತ್ತಪತ್ರಿಕೆ ಚಂದಾದಾರಾಗುವುದನ್ನು ಹೊರತುಪಡಿಸಿ, ಜೊತೆಗೆ ಶಕ್ತಿ ಸ್ಕೀಮ್ ಅನ್ನು ಎಐಸಿಸಿ ಜಾರಿಗೆ ತಂದಿದ್ದು, ಇದೊಂದು ಫೋನ್ ಆಧಾರಿತ ಯೋಜನೆಯಾಗಿದ್ದು, ಎಐಸಿಸಿ ಜೊತೆ ಕಾರ್ಯಕರ್ತರು ಹಾಗೂ ಬೆಂಬಲಿಗರು ನೇರ ಸಂಪರ್ಕ ಹೊಂದಿರಲಿದ್ದಾರೆ.
ಚುನಾವಣೆ ವೇಳೆ ಆಂತರಿಕ ಕಲಹಗಳನ್ನು ಕಡಿಮೆ ಮಾಡಲು  ಎಲ್ಲಾ ಟಿಕೆಟ್ ಆಕಾಂಕ್ಷಿಗಳು ಒಂದು ಪ್ರಮಾಣ ಸ್ವೀಕರಿಸಬೇಕಾಗುತ್ತದೆ, ಎಲ್ಲಾ ಆಕಾಂಕ್ಷಿಗಳು ಪ್ರತಿಜ್ಞೆ ಸ್ವೀಕರಿಸಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com