ಅಟಲ್ ಜೀ ಶಾಂತೀಯತೆ ಕಾಪಾಡಲು ಪ್ರಯತ್ನ ಮಾಡಿದ್ರು. ಜತೆಗೆ ನಮ್ಮ ಸೈನಿಕರ ಸಾಮರ್ಥ್ಯವನ್ನೂ ತೋರಿಸಿಕೊಟ್ಟಿದ್ದಾರೆ. ರಾಜ್ಯ, ರಾಷ್ಟ್ರದ ಆಡಳಿತ ಹೇಗೆ ನಡೆಸಬೇಕು ಎಂದು ಗೋದ್ರಾ ಪ್ರಕರಣ ಆದಾಗ ಅಂದಿನ ಸಿಎಂ ಮೋದಿ ಅವರಿಗೆ ರಾಜಧರ್ಮ ಪಾಲನೆ ಮಾಡಿಲ್ಲ ಎಂದು ಕಠಿಣವಾಗಿ ಹೇಳಿದ್ರು. ತಮ್ಮ ಪಕ್ಷದ ಸಿಎಂ ಆಗಿದ್ರೂ ಅಂತಮಾತು ಹೇಳಿದ್ದು ಅವರ ವ್ಯಕ್ತಿತ್ವ ಎಂತದ್ದು ಎಂದು ತೋರಿಸುತ್ತದೆ ಎಂದು ದೇವೇಗೌಡರು ಹೇಳಿದ್ದಾರೆ.