ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನ ಬಿಡುಗಡೆ ವಿಳಂಬಕ್ಕೆ ಬಿಜೆಪಿ ಆಕ್ರೋಶ!

ಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿ ಹೆಚ್ಚು ಕಮ್ಮಿ 4 ತಿಂಗಳುಗಳೇ ಕಳೆದಿವೆ, ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಎಚ್.ಡಿ ಕುಮಾರ ಸ್ವಾಮಿ....
ಯಡಿಯೂರಪ್ಪ
ಯಡಿಯೂರಪ್ಪ
ಬೆಂಗಳೂರು:  ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿ ಹೆಚ್ಚು ಕಮ್ಮಿ 4 ತಿಂಗಳುಗಳೇ ಕಳೆದಿವೆ,  ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಎಚ್.ಡಿ ಕುಮಾರ ಸ್ವಾಮಿ, ಹೊಸದಾಗಿ ಆಯ್ಕೆಗೊಂಡಿರುವ ಶಾಸಕರಿಗೆ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಹಣವನ್ನು ಇನ್ನೂ ಬಿಡುಗಡೆ ಮಾಡಿಲ್ಲ, 
ಪ್ರತಿ ವರ್ಷ ಈ ಯೋಜನೆಯಡಿ ಶಾಸಕರಿಗೆ 2 ಕೋಟಿ ರು ಅನುದಾನ ನೀಡಲಾಗುತ್ತದೆ. ಎಲ್ಲಾ ಪಕ್ಷದ ಶಾಸಕರು ಈ ಅನುದಾನಕ್ಕಾಗಿ ಕಾಯುತ್ತಿದ್ದರೂ ಸರ್ಕಾರ ಮಾತ್ರ ಅದರ ಬಗ್ಗೆ ಗಮನ ಹರಿಸಿಲ್ಲ, ಜೆಡಿಎಸ್ -ಕಾಂಗ್ರೆಸ್ ಶಾಸಕರು ಕಾಯಲು ಸಿದ್ದರಿದ್ದಾರೆ ಆದರೆ ಅನುದಾನ ಬಿಡುಗಡೆ ವಿಳಂಬವಾಗುತ್ತಿರುವುದನ್ನು ಬಿಜೆಪಿ ಪ್ರಶ್ನಿಸಿದೆ.
ಮಾರ್ಚ್ 31ಕ್ಕೆ ಆರ್ಥಿಕ ವರ್ಷ ಮುಗಿಯುತ್ತದೆ, ಕೊನೆ ಪಕ್ಷ ಜೂನ್ ತಿಂಗಳಲ್ಲಿಯಾದರೂ ಅನುದಾನ ಬಿಡುಗಡೆ ಮಾಡ ಬೇಕಿತ್ತು, ಇದುವರೆಗೂ ಕ್ರಿಯಾ ಯೋಜನೆ ಕೂಡ ಆರಂಭವಾಗಿಲ್ಲ, ಟೆಂಡರ್ ಕೂಡ ಕರೆದಿಲ್ಲ ಎಂದು ಬಿಜೆಪಿ ಶಾಸಕ ಸಿ.ಟಿ ರವಿ ಆರೋಪಿಸಿದ್ದಾರೆ, ಕೂಡಲೇ ಶಾಸಕರ ಅನುದಾನದ ನಿಧಿಯ 2 ಕೋಟಿ ಹಣವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.
ಮುಂಗಾರಿಗೂ ಮುನ್ನವೇ ನಾವು ಕೆಲಸ ಆರಂಭಿಬೇಕಿತ್ತು,  ಜಿಲ್ಲಾ ಪಂಚಾಯತ್ ಮತ್ತು ಲೋಕೋಪಯೋಗಿ ಇಉಲಾಖೆ ಅಡಿಯಲ್ಲಿ ನಡೆಯುತ್ತಿರುವ ಕುಡಿಯುವ ನೀರು, ಸಣ್ಣ ನೀರಾವರಿ ಮುಂತಾದ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲು ಕುಮಾರ ಸ್ವಾಮಿ ಸರ್ಕಾರಕ್ಕೆ ಇಷ್ಟವಿಲ್ಲ ಎಂದು ಕಾಣಿಸುತ್ತದೆ ಎಂದು ಆರೋಪಿಸಿದ್ದಾರೆ,
ಈ ವಾರ್ಷಿಕ ಅನುದಾನ ಬಿಡುಗಡೆ ಮಾಡಲು ಅವರಿಗೆ ಸಮಯವಿಲ್ಲ, ಆರ್ಥಿಕ ವರ್ಷ ಆರಂಭವಾದ 2-3 ತಿಂಗಳಲ್ಲಿಯೇ ಅನುದಾನ ಬಿಡುಗಡೆ ಮಾಡಬೇಕು. ಸರ್ಕಾರ ಅನಾವಶ್ಯಕವಾಗಿ ಅನುದಾನ ನೀಡದೇ ಉದ್ದೇಶ ಪೂರ್ವಕವಾಗಿ ನಿಧಿ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್,  ನಮಗೆ ಇನ್ನೂ ಅನುದಾನ ಹಣ ನೀಡಿಲ್ಲ, ಈ ಹಣ ಅತಿ ಸಣ್ಣ ಮೊತ್ತದ್ದು, ಅಭಿವೃದ್ಧಿ ಕೆಲಸಗಳಿಗೆ  ಅಡ್ಡಿಯಾಗುವುದಿಲ್ಲ, ಅನುದಾನಿ ಬಿಡುಗಡೆ ವಿಳಂಬವಾಗುತ್ತಿರುವುದನ್ನು ಬೇಕಂತಲೇ ರಾಜಕೀಯ ಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ, ತಮ್ಮ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿರುವ ಹ್ಯಾರಿಸ್, ಸರ್ಕಾರ ಹಣವನ್ನು ಬಿಡುಗಡೆ ಮಾಡುತ್ತೆದ ಎಂದು ಭರವಸೆ ವ್ಯಕ್ತ ಪಡಿಸಿದ್ದಾರೆ.
ಇನ್ನೂ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಅನುದಾನದ ಹಣ ಅತಿ ಕಡಿಮೆಯಾಯಿತು, ಇದರಿಂದ ಯಾವುದೇ  ಅಭಿವೃದ್ಧಿ ಕೆಲಸಗಳಿಗೂ ಸಾಕಾಗುವುದಿಲ್ಲ, 2 ಕೋಟಿಗೆ ಬದಲಾಗಿ 5 ಕೋಟಿ ನೀಡಬೇಕು ಎಂದು ಹೇಳಿದ್ದಾರೆ.
ಎಚ್.ಡಿ ಕುಮಾರ ಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಉದ್ದೇಶ ಪೂರ್ವಕವಾಗಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಹಣ ರಿಲೀಸ್ ಮಾಡುತ್ತಿಲ್ಲ ಎಂದು ಬಿಜೆಪಿ ವಿರೋಧ ಪಕ್ಷದ ನಾಯಕ ಯಡಿಯಬರಪ್ಪ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com