ಬರೀ ಸದ್ದು ಮಾಡೋದಷ್ಟೆ ಬಿಜೆಪಿ ಕೆಲಸ: ಜಾವಡೇಕರ್ ಹೇಳಿಕೆಗೆ ಸಿಎಂ ತಿರುಗೇಟು; ಸರ್ಕಾರ ಗಟ್ಟಿ ಎಂದ ಡಿಕೆಶಿ

ಕರ್ನಾಟಕ ರಾಜಕೀಯದಲ್ಲಿ ಡಿಸೆಂಬರ್​ನಲ್ಲಿ ಧಮಾಕಾ ಆಗಲಿದೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್​ ಜಾವಡೇಕರ್​ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಕೆಲವು ಸಚಿವರು ತಿರುಗೇಟು ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಡಿಸೆಂಬರ್​ನಲ್ಲಿ ಧಮಾಕಾ ಆಗಲಿದೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವ  ಪ್ರಕಾಶ್​ ಜಾವಡೇಕರ್​ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ  ಕೆಲವು ಸಚಿವರು ತಿರುಗೇಟು ನೀಡಿದ್ದಾರೆ.

ಕರ್ನಾಟಕದ ಜನ ಬಿಜೆಪಿ ಸರ್ಕಾರವನ್ನು ಅಪೇಕ್ಷೆ ಪಡುತ್ತಿದ್ದಾರೆ.  ಜೆಡಿಎಸ್ ಅವಕಾಶವಾದಿ ರಾಜಕಾರಣ ಮಾಡಿದ್ದಾರೆ ಎಂದು ಪ್ರಕಾಶ್​ ಜಾವಡೇಕರ್​ ಹೇಳಿದ್ದರು.  ಇದಕ್ಕೆ  ತೀವ್ರವಾಗಿ  ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಆರು ತಿಂಗಳಿಂದ ಬಿಜೆಪಿಯವರು ಇದನ್ನೇ ಹೇಳುತ್ತಿದ್ದಾರೆ. ಬರೀ ಸದ್ದು ಮಾಡೋದಷ್ಟೇ. ಸರ್ಕಾರ ಕಲ್ಲುಬಂಡೆಯ ಹಾಗೇ ಇದೆ. ಆ ವಿಷಯ ಸತ್ತು ಹೋಗಿದೆ ಎಂದಿದ್ದಾರೆ.

ಪ್ರಕಾಶ್​ ಜಾವಡೇಕರ್​ ಹೇಳಿಕೆ ಬಗ್ಗೆ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್​, ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸರ್ಕಾರ ಗಟ್ಟಿಯಾಗಿರುತ್ತದೆ. ನಮ್ಮದೆ ಇಲ್ಲದೆ ಆಪರೇಶನ್​ ಕಮಲ ಮಾಡಿದ್ದಾರೆ. ನಾವು ಅವರಷ್ಟು ಬುದ್ಧಿವಂತರು ಅಲ್ಲದೆ ಇರಬಹುದು. ಆದರೆ ಅವರಿಂತ ನಾವು 1% ಹೆಚ್ಚು ಯೋಚನೆ ಮಾಡುತ್ತೇವೆ ಎಂದು  ಹೇಳಿದ್ದಾರೆ.
ಸಚಿವರಾದ ಆರ್. ವಿ. ದೇಶಪಾಂಡೆ, ಪ್ರಿಯಾಂಕ್ ಖರ್ಗೆ, ಸಾರಾ ಮಹೇಶ್ ಕೂಡಾ ಪ್ರಕಾಶ್ ಜಾವಡೇಕರ್ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com