ಅಪ್ಪನಿಗೆ ಸಿಗದ ಸಚಿವ ಸ್ಥಾನ: ಸಂಸದೀಯ ಕಾರ್ಯದರ್ಶಿ ಹುದ್ದೆ ತಿರಸ್ಕರಿಸಿದ ಸೌಮ್ಯಾ ರೆಡ್ಡಿ

ಸಚಿವ ಸಂಪುಟ ವಿಸ್ತರಣೆಯಲ್ಲಿ ತಮ್ಮ ತಂದೆ, ಮಾಜಿ ಸಚಿವ ರಾಮಲಿಂಗಾ ರೆಡ್ಡಿಯವರಿಗೆ ಸಚಿವ ಹುದ್ದೆ ಕೈತಪ್ಪಿದ ಬೆನ್ನಲ್ಲೇ, ಪುತ್ರಿ ಸೌಮ್ಯಾ ರೆಡ್ಡಿಯವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ...
ಸೌಮ್ಯಾ ರೆಡ್ಡಿ
ಸೌಮ್ಯಾ ರೆಡ್ಡಿ
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಲ್ಲಿ ತಮ್ಮ ತಂದೆ, ಮಾಜಿ ಸಚಿವ ರಾಮಲಿಂಗಾ ರೆಡ್ಡಿಯವರಿಗೆ ಸಚಿವ ಹುದ್ದೆ ಕೈತಪ್ಪಿದ ಬೆನ್ನಲ್ಲೇ, ಪುತ್ರಿ ಸೌಮ್ಯಾ ರೆಡ್ಡಿಯವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
7 ಬಾರಿ ಶಾಸಕರಾಗಿರುವ ತಮ್ಮ ತಂದೆ ರಾಮಲಿಂಗಾ ರೆಡ್ಡಿಯವರನ್ನು ಸಚಿವರಾಗಿ ನೋಡಲು ಇಷ್ಟಪಡುತ್ತೇನೆ ಎಂದಿರುವ ಜಯನಗರ ಶಾಸಕಿ ಸೌಮ್ಯಾ ರೆಡ್ಡಿಯವರು, ತಮಗೆ ನೀಡಲಾಗಿರುವ ಸಂಸದೀಯ ಕಾರ್ಯದರ್ಶಿ ಹುದ್ದೆಯನ್ನು ತಿರಸ್ಕರಿಸಿದ್ದಾರೆ. 
ನಾನು ಮೊದಲನೇ ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದೇನೆ. ನನ್ನ ಕ್ಷೇತ್ರದ ಹಲವಾರು ಕೆಲಸಗಳನ್ನು ಮಾಡಲು ನನಗೆ ಇನ್ನೂ ಬಹಳ ಸಮಯಬೇಕಿದೆ. ಹೀಗಾಗಿ ನನಗೆ ನೀಡಿರುವ ಸಂಸದೀಯ ಕಾರ್ಯದರ್ಶಿ ಹುದ್ದೆ ಸದ್ಯಕ್ಕೆ ಬೇಡ. ಅದು ಯಾರಿಗೆ ಅವಶ್ಯಕತೆ ಇದೆ ಅವರಿಗೆ ಪಕ್ಷ ಕೊಡಲಿ. ನಾನು ನನ್ನ ಕ್ಷೇತ್ರದ ಜನರಿಗಾಗಿ ಕೆಲಸ ಮಾಡಿ ಅವರ ಋಣವನ್ನು ತೀರಿಸಬೇಕಿದೆ. ನನ್ನ ತಂದೆ ಎರಡು ಬಾರಿ ಡಿಸಿಸಿ ಅಧ್ಯಕ್ಷರಾಗಿ, 7 ಬಾರಿ ಶಾಸಕರಾಗಿ, ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ. ಕೇವಲ ಒಂದು ಶಾಸಕರಿಂದ ಈಗ 15ಕ್ಕೂ ಹೆಚ್ಚು ಶಾಸಕರು ಆಯ್ಕೆಯಾಗಲು ಶ್ರಮಿಸಿದ್ದಾರೆ. ಅವರನ್ನು ಮಂತ್ರಿಯಾಗಿ ನೋಡಲು ಇಷ್ಟಪಡುತ್ತೇನೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com