ದಕ್ಷಿಣ ಕನ್ನಡ ಜಿಲ್ಲೆ 'ಭಯೋತ್ಪಾದಕರ ಕಾರ್ಖಾನೆ', ಸದನದಲ್ಲಿ ಕೋಲಾಹಲಕ್ಕೆ ಕಾರಣವಾದ ಗೃಹ ಸಚಿವರ ಹೇಳಿಕೆ

ದಕ್ಷೀಣ ಕನ್ನಡ ಜಿಲ್ಲೆ 'ಭಯೋತ್ಪಾದಕರ ಕಾರ್ಖಾನೆ' ಎನ್ನುವ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ ವಿಧಾನ ಸಭೆ ಅಧಿವೇಶನದಲ್ಲಿ ದೊಡ್ಡ ಗದ್ದಲಕ್ಕೆ ಕಾರಣವಾಗಿತ್ತು.
ರಾಮಲಿಂಗಾ ರೆಡ್ಡಿ,
ರಾಮಲಿಂಗಾ ರೆಡ್ಡಿ,
Updated on: 
ಬೆಂಗಳೂರು: ದಕ್ಷೀಣ ಕನ್ನಡ ಜಿಲ್ಲೆ 'ಭಯೋತ್ಪಾದಕರ ಕಾರ್ಖಾನೆ' ಎನ್ನುವ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ ವಿಧಾನ ಸಭೆ ಅಧಿವೇಶನದಲ್ಲಿ ದೊಡ್ಡ ಗದ್ದಲಕ್ಕೆ ಕಾರಣವಾಗಿತ್ತು. 
ಬುಧವಾರ ಶಾಸನ ಸಭೆಯಲ್ಲಿ ಮಾತನಾಡುತ್ತಾ  ರೆಡ್ಡಿ "ನಾನು ಯಾವುದೇ ಪಕ್ಷದ ಅಥವಾ ಧರ್ಮದ ಬಗ್ಗೆ ಹೇಳುತ್ತಿಲ್ಲ, ಯಾವುದೇ ಪಕ್ಷ ಅಥವಾ ಧರ್ಮದವರೂ'ಹರಿಶ್ಚಂದ್ರ' ಅಲ್ಲ. ಆದರೆ ನಾನು ಎರಡು ವರ್ಷಗಳ ಹಿಂದೆಯೇ ಗೃಹ ಸಚಿವರಾಗಿದ್ದರೆ, ದಕ್ಷಿಣ ಕನ್ನಡದ ಚಿತ್ರಣವನ್ನು ಬದಲಾಯಿಸುವವನಿದ್ದೆ, ಭಯೋತ್ಪಾದಕರ ಕಾರ್ಖಾನೆ ಇಷ್ಟರಲ್ಲಿ ಮುಚ್ಚಲ್ಪಡುತ್ತಿತ್ತು" ಎಂದಿದ್ದಾರೆ. ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ಇತ್ತೀಚೆಗೆ  ನಡೆದ ಹತ್ಯೆಗಳನ್ನು ಉದ್ದೇಶಿಸಿ ಅವರು ಈ ಮಾತನಾಡಿದರು.
ರಾಮಲಿಂಗಾ ರೆಡ್ಡಿ ಕಳೆದ ಸಪ್ಟೆಂಬರ್ ನಲ್ಲಿ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು ಇದಕ್ಕೂ ಮುನ್ನ ಸಿದ್ದರಾಮಯ್ಯ ಸರ್ಕಾರದಲ್ಲಿ ಜಿ. ಪರಮೇಶ್ವರ ಹಾಗೂ ಕೆ.ಜೆ. ಜಾರ್ಜ್ ಗೃಹ ಸಚಿವ ಸ್ಥಾನವನ್ನು ನಿರ್ವಹಿಸಿದ್ದರು.
ಆದರೆ ಗೃಹ ಸಚಿವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ನಾಯಕ ಈಶ್ವರಪ್ಪ "ನೀವು ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸುವ ಮುನ್ನ ಯಾವುದೇ ರಾಜ್ಯ ಸರ್ಕಾರ ಇರಲಿಲ್ಲ ಎಂದು ಹೇಳುತ್ತಿದ್ದೀರಾ? ಅಥವಾ ಈ ಹಿಂದೆ ಗೃಹಸಚಿವರಾಗಿದ್ದವರು ಹುದ್ದೆ ನಿರ್ವಹಿಸಲು 'ನಾಲಾಯಕ್' ಆಗಿದ್ದರೆ? ನಿಮ್ಮ ಮಾತಿನ ಅರ್ಥವೇನು?" ಎಂದು ನೇರವಾಗಿ ಪ್ರಶ್ನಿಸಿದ್ದರು.
ಇದಕ್ಕೆ ಮುನ್ನ ಗೃಹ ಸಚಿವರು ಬಶೀರ್ ಹಾಗೂ ದೀಪಕ್ ಸಾವಿನ ಕುರಿತಂತೆ ಮಾತನಾಡಿ ದೀಪಕ್ ಹಾಗೂ ಬಶೀರ್ ಇಬ್ಬರ ಮೇಲೆಯೂ ದಾಳಿಗಳಾಗಿತ್ತು. ದೀಪಕ್ ಶವವಿರಿಸಿದ್ದ ಅದೇ ಆಸ್ಪತ್ರೆಯಲ್ಲಿ ಬಶೀರ್ ಚಿಕಿತ್ಸೆ ಪಡೆಯುತ್ತಿದ್ದರು. ಬಿಜೆಪಿ ನಾಯಕರು ದೀಪಕ್ ಮೃತದೇಹವನ್ನು ಕಾಣಲು ಹೋಗಿದ್ದಾರೆ, ಬಶೀರ್ ಆರೋಗ್ಯದ ಬಗ್ಗೆ ಅವರು ಕಾಳಜಿ ತೆಗೆದುಕೊಳ್ಳಲಿಲ್ಲ" ಎಂದು ಆರೋಪಿಸಿದ್ದರು. 
ಇದಕ್ಕೆ ಮುಂಚಿತವಾಗಿ   ಪಿಎಫ್ಐ ನಂತಹಾ ಮುಸ್ಲಿಂ ಸಂಸ್ಥೆಗಳ ಮೇಲೆ ನಿಷೇಧ ಹೇರಬೇಕೆಂದು ಬಿಜೆಪಿ ಒತ್ತಾಯಿಸಿತ್ತು..
ಇದಕ್ಕೆ ಉತ್ತರ ನೀಡಿದ ಗೃಹ ಸಚಿವರು "ನೀವು (ಬಿಜೆಪಿ)  23 ಬಿಜೆಪಿ ಕಾರ್ಯಕರ್ತರ ಕೊಲೆಯಾಗಿರುವ ಬಗ್ಗೆ ಆರೋಪಿಸಿದ್ದೀರಿ. ಅದೇ ಅವಧಿಯಲ್ಲಿ, 13 ಮುಸ್ಲಿಮರನ್ನು ವಿಶ್ವ ಹಿಂದೂ ಪರಿಷತ್, ಭಜರಂಗದಳ ಮತ್ತು ಇತರೆ ಹಿಂದೂ ಸಂಘಟನೆಗಳು ಹತ್ಯೆ ಮಾಡಿದ್ದಾರೆ. ಪಿಎಫ್ಐ ಅನ್ನು ನಿಷೇಧಿಸುವುದಾದರೆ, ವಿಎಚ್ ಪಿ ಮತ್ತು ಇತರ ಹಿಂದೂ ಸಂಘಟನೆಗಳನ್ನು ಸಹ ನಿಷೇಧಿಸಬೇಕು" ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com