ವಿಧಾನಸಭೆಯಲ್ಲಿ ವಿನಯ್ ಕುಲಕರ್ಣಿಯವರ ಬೆದರಿಕೆ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ಡಿಯರ್ 10 ಪರ್ಸೆಂಟ್ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಮ್ಮ ಸಚಿವ ವಿನಯ್ ಕುಲಕರ್ಣಿ ಅವರು ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಅಂತಹವರು, ಸಿಟಿ ರವಿ ಅವರಿಗೆ ಪ್ರಜಾಪ್ರಭುತ್ವದ ದೇವರ ಮಂದಿರ ವಿಧಾನಸಭೆಯಲ್ಲಿಯೇ ಬೆದರಿಕೆ ಹಾಕುತ್ತಾರೆ. ಈ ರೌಡಿ ಮಂತ್ರಿ ವಿರುದ್ದ ಕ್ರಮ ಕೈಗೊಳ್ಳುವ ಧೈರ್ಯ ಇದೆಯಾ ಎಂದು ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಹಾಕಿದ್ದಾರೆ.