ರಾಜ್ಯ ವಿಧಾನಸಭೆ ಚುನಾವಣೆ: 123 ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ನಗರದಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ 130 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವುದಾಗಿ ಈ ಹಿಂದೆ ಘೋಷಿಸಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು ಹೇಳಿದಂತೆಯೇ ನಡೆದಿದ್ದು...
ರಾಜ್ಯ ವಿಧಾನಸಭೆ ಚುನಾವಣೆ: 123 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಜೆಡಿಎಸ್
ರಾಜ್ಯ ವಿಧಾನಸಭೆ ಚುನಾವಣೆ: 123 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಜೆಡಿಎಸ್
Updated on
ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ನಗರದಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ 130 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವುದಾಗಿ ಈ ಹಿಂದೆ ಘೋಷಿಸಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು ಹೇಳಿದಂತೆಯೇ ನಡೆದಿದ್ದು, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 126 ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದ್ದಾರೆ. 
ಬಸವಕಲ್ಯಾಣದ ಹಾಲಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರೊಬ್ಬರನ್ನು ಹೊರತಪಡಿಸಿ ಉಳಿದ ಎಲ್ಲಾ ಶಾಸಕರಿಗೂ ಜೆಡಿಎಸ್ ಟಿಕೆಟ್ ನೀಡಿದೆ. ಜೊತೆಗೆ ಮಂಡ್ಯ ಸಂಸದ ಸಿ.ಎಸ್ ಪುಟ್ಟರಾಜು ಅವರು ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೊಡಲಾಗಿದೆ. 
ಪಕ್ಷದ ಒಟ್ಟು ಶಾಸಕರ ಸಂಖ್ಯೆ 40. ಈ ಪೈಕಿ 7 ಬಂಡಾಯ ಶಾಸಕರನ್ನು ಹೊರತುಪಡಿಸಿ ಉಳಿಯುವ ಸಂಖ್ಯೆ 33 ಆಗಿದ್ದು. ಇದರಲ್ಲಿ 2 ಶಾಸಕರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಗಂಡಿದ್ದಾರೆ. ಓರ್ವ ಶಾಸಕರಾಗಿದ್ದವರು ನಿಧನ ಹೊಂದಿದ್ದಾರೆ. ಅಲ್ಲಿಗೆ ಉಳಿದವರು 31 ಶಾಸಕರಾಗಿದ್ದಾರೆ. ಆದರೆ, ಶಾಸಕ ಖೂಬಾ ಅವರಿಗೆ ಯಾವ ಕಾರಣಕ್ಕೆ ಟಿಕೆಟ್ ನೀಡಿಲ್ಲ ಎಂಬುದು ಈ ವರೆಗೂ ಸ್ಪಷ್ಟವಾಗಿಲ್ಲ. ಖೂಬಾ ಅವರು ಜೆಡಿಎಸ್ ತೊರೆಯುವ ಸಾಧ್ಯತೆಗಳಿದ್ದು, ಬಿಜೆಪಿಗೆ ವಲಸೆ ಹೋಗುವ ಸಂಭವವೂ ಇದೆ ಎಂಬ ಮಾತುಗಳು ಕೇಳಿಬರತೊಡಗಿವೆ. 
ನಿನ್ನೆ ನಗರದ ಯಲಹಂಕ ಬಳಿ ನಡೆದ ಜೆಡಿಎಸ್ ಪಕ್ಷತ ವಿಕಾಸ ಪರ್ವ ಸಮಾವೇಶದಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. ಜೊತೆಗೆ ಅವರನ್ನು ಸಾಲಾಗಿ ನಿಲ್ಲಿಸಿ ನಾಡಿನ ಸಂಪತ್ತು ರಕ್ಷಿಸುವ ಕುರಿತು ಪ್ರಮಾಣ ವಚನವನ್ನೂ ಬೋಧಿಸುವ ಮೂಲಕ ವಿಭಿನ್ನತೆಯನ್ನು ಸಾರಿದರು. 
ಯಾದಗಿರಿ, ತುಮಕೂರು ಜಿಲ್ಲೆಗಳ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದೆ. ಹಲವೆಡೆ ಮಾಜಿ ಶಾಸಕರಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಇನ್ನು ಕಾಂಗ್ರೆಸ್ ತೊರೆದು ಬಂದಿರುವ ಎ.ಎಸ್.ಪಾಟೀಲ್ ನಡಹಳ್ಳಿ ಮುದ್ದೇಬಿಹಾಳದಿಂದಲೇ ಸ್ಪರ್ಧೆಗಿಳಿಯಲಿದ್ದಾರೆ. 
ಬಿಜೆಪಿ ತೊರೆದಿರುವ ಆನಂತ್ ಅಸ್ನೋಟಿಕರ್ ಕಾರವಾರದಲ್ಲಿ, ಶೃಂಗೇರಿಯಲ್ಲಿ ಮಾಜಿ ಸಚಿವ ಗೋವಿಂದೇಗೌಡ ಅವರ ಪುತ್ರ ವೆಂಕಟೇಶ್, ಬಾಗೇಪಲ್ಲಿಯಿಂದ ಹಾಲಿ ವಿಧಾನಪರಿಷತ್ ಸದಸ್ಯ ಸಿ.ಆರ್. ಮನೋಹರ್ ಕಣಕ್ಕಿಳಿಯಲಿದ್ದಾರೆ. 
ಬಂಡಾಯ ಶಾಸಕರ ಕ್ಷೇತ್ರಗಳಾದ ಮಾಗಡಿಯಲ್ಲಿ ಮಂಜು, ನಾಗಮಂಗಲದಲ್ಲಿ ಸುರೇಶ್ ಗೌಡ, ಶ್ರೀರಂಗಪಟ್ಟಣದಲ್ಲಿ ರವೀಂದ್ರ ಶ್ರೀಕಂಠಯ್ಯ ಕಣಕ್ಕಿಳಿಯಲಿದ್ದಾರೆ. 
ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿ ಕೆ.ಎಸ್.ರಂಗಪ್ಪ ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯುತ್ತಿದ್ದರೆ, ಎ.ಹೆಚ್ ವಿಶ್ವನಾಥ್, ಹುಣಸೂರು, ಜಿ.ಟಿ. ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರ, ಚಿಕ್ಕಣ್ಣ ಹೆಚ್.ಡಿ ಕೋಟೆ, ಹೆಚ್.ಎಸ್. ಪ್ರಕಾಶ್ ಹಾಸನ, ಮಧು ಬಂಗಾರಪ್ಪ ಸೊರಬ್ ಮತ್ತು ಹೆ ಬಾಳಿಗಾರ್ ಶಿಕಾರಿಪುರದಲ್ಲಿ ಸ್ಪರ್ಧೆಗಿಳಿಯುತ್ತಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com