ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ 'ಮೇಡ್ ಇನ್ ಚೀನಾ'ದ್ದೇ ಆರ್ಭಟ: 'ಮೇಕ್ ಇನ್ ಇಂಡಿಯಾ' ಕುರಿತು ರಾಹುಲ್ ವ್ಯಂಗ್ಯ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು 'ಮೇಕ್ ಇನ್ ಇಂಡಿಯಾ' ಆರಂಭಿಸಿದ್ದರು. ಆದರೆ, ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಪ್ರತೀಯೊಂದು ವಸ್ತುವೂ ಮೇಡ್ ಇನ್ ಚೀನಾ ಇರುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಭಾನುವಾರ ವ್ಯಂಗ್ಯವಾಡಿದ್ದಾರೆ...
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ಬಿಜಾಪುರ; ಪ್ರಧಾನಮಂತ್ರಿ ನರೇಂದ್ರ ಮೋದಿಯವರು 'ಮೇಕ್ ಇನ್ ಇಂಡಿಯಾ' ಆರಂಭಿಸಿದ್ದರು. ಆದರೆ, ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಪ್ರತೀಯೊಂದು ವಸ್ತುವೂ ಮೇಡ್ ಇನ್ ಚೀನಾ ಇರುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಭಾನುವಾರ ವ್ಯಂಗ್ಯವಾಡಿದ್ದಾರೆ. 
ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಬಿಜಾಪುರದಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಮಾತನಾಡಿರುವ ಅವರು, ಗುಜರಾಜ್ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು. 
ಗುಜರಾತ್ ರಾಜ್ಯದಲ್ಲಿ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಜನರೊಂದಿಗೆ ಮಾತುಕತೆ ನಡೆಸಿದ್ದೆ. ಈ ವೇಳೆ ಜನರು ರಾಜ್ಯದಲ್ಲಿ ಶಿಕ್ಷಣ ಪಡೆಯುವುದು ಅತ್ಯಂತ ದುಬಾರಿಯಾಗಿದೆ ಎಂದು ಹೇಳಿದ್ದರು. ಅಲ್ಲಿನ ರಾಜ್ಯದ ಹಲವು ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳು ಖಾಸಗಿ ವಲಯಗಳಿಗೆ ಬೆಂಬಲವನ್ನು ವ್ಯಕ್ತಪಡಿಸಿವೆ ಎಂದು ಹೇಳಿದ್ದಾರೆ. 
ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಮೇಕ್ ಇನ್ ಇಂಡಿಯಾ ಕುರಿತು ವ್ಯಂಗ್ಯವಾಡಿರುವ ಅವರು, ಮೋದಿಯವರು ಮೇಕ್ ಇನ್ ಇಂಡಿಯಾ ಆರಂಭಿಸಿದ್ದರು. ಸಿಟ್ ಡೌನ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ, ಸೀ ರೈಟ್ ಇಂಡಿಯಾ ಆರಂಭಿಸಿದ್ದರು. ಆದರೆ, ಮಾರುಕಟ್ಟೆಯಲ್ಲಿ ಎಲ್ಲಿಯೇ ನೋಡಿದರು ಮೇಡ್ ಇನ್ ಚೀನಾದ ವಸ್ತುಗಳೇ ಹೆಚ್ಚಾಗಿವೆ ಎಂದು ವ್ಯಂಗ್ಯವಾಡಿದ್ದಾರೆ. 
ರೈತರ ಸಾಲಗಳನ್ನು ಮನ್ನಾ ಮಾಡುವ ಕುರಿತು ಮೋದಿಯವರು ಯಾವುದೇ ಉತ್ತರಗಳನ್ನು ನೀಡಿಲ್ಲ. ಈ ಹಿಂದೆ ನಾನು ಮೋದಿಯವರನ್ನು ಭೇಟಿ ಮಾಡಿ, ಉದ್ಯಮಿಗಳ ಸಾಲಗಳನ್ನು ಮನ್ನಾ ಮಾಡಿದಂತೆ, ರೈತರ ಸಾಲ ಮನ್ನಾ ಮಾಡುವಂತೆ ಮನವಿ ಮಾಡಿಕೊಂಡಿದ್ದೆ. ಆದರೆ, ಮೋದಿಯವರು ನನ್ನ ಪ್ರಶ್ನೆಗೆ ಯಾವುದೇ ಉತ್ತರವನ್ನೂ ನೀಡಲಿಲ್ಲ ಎಂದು ತಿಳಿಸಿದ್ದಾರೆ. 
ಇದೇ ವೇಳೆ ರೂ.8000 ಕೋಟಿಯಷ್ಟು ರೈತರ ಸಾಲ ಮನ್ನಾ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೊಂಡಾಡಿದ್ದಾರೆ. 
ಮೋದಿಯವರಿಗೆ ಕೇಳಿದ ಪ್ರಶ್ನೆಯನ್ನೇ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಕೇಳಿದ್ದೆ. ಕೂಡಲೇ ಸಿದ್ದರಾಮಯ್ಯ ಅವರು ರೂ.8000ಕೋಟಿಯಷ್ಟು ರೈತರ ಸಾಲ ಮನ್ನಾ ಮಾಡವುದಾಗಿ ತಿಳಿಸಿದ್ದರು. ಕೇವಲ ಮಾತುಗಳಿಂದಷ್ಟೇ ಅಲ್ಲದೇ, ಕೂಡಲೇ ರೈತರ ಸಾಲ ಮನ್ನಾ ಮಾಡಿದ್ದರು. ಕರ್ನಾಟಕ ಸರ್ಕಾರ ಅನುದಾನಿತ ಶಿಕ್ಷಣವನ್ನು ನೀಡುತ್ತಿದ್ದು, ಬಾಲಕಿಯರಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದೆ ಎಂದಿದ್ದಾರೆ. 
ಬಡ ರೈತರ ಜೈಬುಗಳಿಂದ ಹಣವನ್ನು ಕಿತ್ತುಕೊಂಡು ಕೇಂದ್ರ ಸರ್ಕಾರ ಉದ್ಯಮಿಗಳ ಜೈಬನ್ನು ತುಂಬಿಸುತ್ತಿದೆ. ಉದ್ಯಮಿಗಳ ಸಾಲವನ್ನು ಮನ್ನಾ ಮಾಡಿದ್ದ, ಮೋದಿಯವರೇ ಹಿಂದೂಸ್ತಾನ ರೈತರ ಸಾಲವನ್ನೂ ಮನ್ನಾ ಮಾಡುವಿರಾ? ಪ್ರತೀಯೊಬ್ಬ ಭಾರತೀಯರ ಬ್ಯಾಂಕ್ ಖಾತೆಗಳಿಗೆ ರೂ.15 ಲಕ್ಷ ಜಮಾವಣೆ ಮಾಡುವುದಾಗಿ ಹೇಳಿದ್ದ ಮೋದಿಯವರು ಕನಿಷ್ಟ ರೂ. 10 ಗಳನ್ನೂ ಹಾಕಿಲ್ಲ. ಮುಂದಿನ ಬಾರಿ ರಾಜ್ಯಕ್ಕೆ ಮೋದಿಯವರು ಆಗಮಿಸಿದ ಸಂದರ್ಭದಲ್ಲಿ, ಬಸವಣ್ಣ ಅವರ ಕುರಿತು ಹೇಳಿಕೆ ನೀಿ ಮೋದಿಯವರು ದೀರ್ಘಕಾಲಿಕ ಭಾಷಣವನ್ನು ಮಾಡುತ್ತಾರೆ. ಹೇಳಿದಂತೆಯೇ ಬಸವಣ್ಣ ಅವರ ತತ್ತ್ವಗಳನ್ನು ಪಾಲಿಸುವಿರಾ ಎಂದು ಪ್ರಶ್ನಿಸಿದ ಎಂದು ಜನರಿಗೆ ಹೇಳಿದ್ದಾರೆ. 
ಸಂಸತ್ತಿನ ಕಟ್ಟಡ ರಾಜಧಾನಿ ದೆಹಲಿಯಲ್ಲಿದೆ. ಆದರೆ, ಇದರ ಅಡಿಗಲ್ಲು ಹಾಗೂ ಆಲೋಚನೆಗಳು ಕರ್ನಾಟದ ಬಸವಣ್ಣ ಅವರು ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರ್ಕಾರ ಬಸವಣ್ಣ ಅವರ ತತ್ತ್ವಗಳನ್ನು ಪಾಲಿಸುತ್ತಿರುವುದಕ್ಕೆ ನನಗೆ ಸಂತಸವಿದೆ ಎಂದಿದ್ದಾರೆ. 
ಜಾತಿ, ಜನಾಂಗ, ಲಿಂಗ ತಾರತಮ್ಯ ಹಾಗೂ ಆರ್ಥಿಕತೆಯ ತಾರತಮ್ಯವಿಲ್ಲದೆ ಪ್ರತೀಯೊಬ್ಬರನ್ನೂ ಮುಂದಕ್ಕೆ ತರಲು ಕಾಂಗ್ರೆಸ್ ಚಿಂತಿಸುತ್ತದೆ. ಕೆಲ ಆಯ್ದ ಉದ್ಯಮಿಗಳ ಪರವಾಗಿ ಬಿಜೆಪಿಯಿದ್ದು, ನಮ್ಮ ಹಾಗೂ ಬಿಜೆಪಿಯವರ ನಡುವಿನ ವ್ಯತ್ಯಾಸ ಇದೇ ಆಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com