ಮತದಾರರ ಸೆಳೆಯಲು ಬಿಜೆಪಿಯಿಂದ ಕಮಲ ಜಾತ್ರೆ

ಚಾಯ್ ಪೇ ಚರ್ಚಾ, ತ್ರಿಡಿ ರ್ಯಾಲಿ ಯಶಸ್ಸಿನ ನಂತರ, ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಮಲ ಜಾತ್ರೆ ನಡೆಸಲು ನಿರ್ಧರಿಸಿದೆ..
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ಚಾಯ್ ಪೇ ಚರ್ಚಾ, ತ್ರಿಡಿ ರ್ಯಾಲಿ ಯಶಸ್ಸಿನ ನಂತರ, ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಮಲ ಜಾತ್ರೆ ನಡೆಸಲು ನಿರ್ಧರಿಸಿದೆ. 
ಗ್ರಾಮೀಣ ಮತದಾರರನ್ನು ಪಕ್ಷದ ಕಡೆಗೆ ಸೆಳೆಯುವ ಉದ್ದೇಶದಿಂದ 30ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ದಿನ ‘ಕಮಲ ಜಾತ್ರೆ’ ನಡೆಸಲಿದೆ.
15 ಲಕ್ಷ ಮತದಾರರನ್ನು ನೇರವಾಗಿ ತಲುಪುವ ಆಶಯದಿಂದ ಗ್ರಾಮೀಣ ಪ್ರದೇಶಗಳಲ್ಲಿ ಮಾರ್ಚ್‌ 2ರಿಂದ 4ವರೆಗೆ ಜಾತ್ರೆ ಏರ್ಪಡಿಸಲಾಗಿದೆ.
ಮಲ್ಲಕಂಬ ಸ್ಪರ್ಧೆ, ಮ್ಯೂಸಿಕಲ್ ಚೇರ್‌, ಗಾಯನ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಜಾತ್ರೆ ಅಂಗವಾಗಿ ಏರ್ಪಡಿಸಲಾಗುತ್ತದೆ. ಬಿಜೆಪಿ ಬಗ್ಗೆ ಹೆಮ್ಮೆ ಮೂಡಿಸುವಂತೆ ಟ್ಯಾಟೂ ಮತ್ತು ಮೆಹಂದಿ ಹಚ್ಚುವ ಕಾರ್ಯಕ್ರಮ, ಮಕ್ಕಳ ಆಕರ್ಷಣೆಗೆ ಕಿಡ್ಸ್‌ ಝೋನ್‌, ಮೋದಿ ಮತ್ತು ಯಡಿಯೂರಪ್ಪ ಸಾಧನೆಗಳ ಕುರಿತ ಲೇಸರ್ ಶೋ ವ್ಯವಸ್ಥೆ ಮಾಡಲಾಗುವುದು. 
ಭಾಲ್ಕಿ, ಯಾದಗಿರಿ, ರಾಯಚೂರು ಗ್ರಾಮೀಣ, ಗಂಗಾವತಿ, ಹಗರಿಬೊಮ್ಮನಹಳ್ಳಿ, ನಂಜನಗೂಡು, ತುಮಕೂರು ಗ್ರಾಮೀಣ, ದೊಡ್ಡಬಳ್ಳಾಪುರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಈ ಜಾತ್ರೆ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com