ಜನರಿಂದ ಸಂಗ್ರಹಿಸಿದ ಇಟ್ಟಿಗೆ ತಿಪ್ಪೆಗೆಸೆದು, ಹಣ ಜೇಬಿಗಿಳಿಸಿದ್ರಿ: ಬಿಜೆಪಿ ವಿರುದ್ದ ಎಚ್ ಡಿಕೆ ವಾಗ್ದಾಳಿ

ರಾಮ ಮಂದಿರ ನಿರ್ಮಾಣಕ್ಕಾಗಿ ರಥಯಾತ್ರೆ ನಡೆಸಿ ಜನರಿಂದ ಸಂಗ್ರಹಿಸಿದ ಇಟ್ಟಿಗೆ ತಿಪ್ಪೆಗೆಸೆದು, ಆ ಹಣ ಜೇಬಿಗಿಳಿಸಿಕೊಂಡಿರಿ, 25 ವರ್ಷವಾದರೂ ರಾಮಮಂದಿರ ...
ಎಚ್,ಡಿ ಕುಮಾರ ಸ್ವಾಮಿ
ಎಚ್,ಡಿ ಕುಮಾರ ಸ್ವಾಮಿ
Updated on: 
ಬೆಂಗಳೂರು: ರಾಮ ಮಂದಿರ ನಿರ್ಮಾಣಕ್ಕಾಗಿ ರಥಯಾತ್ರೆ ನಡೆಸಿ ಜನರಿಂದ ಸಂಗ್ರಹಿಸಿದ ಇಟ್ಟಿಗೆ ತಿಪ್ಪೆಗೆಸೆದು, ಆ ಹಣ ಜೇಬಿಗಿಳಿಸಿಕೊಂಡಿರಿ, 25 ವರ್ಷವಾದರೂ ರಾಮಮಂದಿರ ಕಟ್ಟಲಿಲ್ಲ ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಪ್ರತಿಪಕ್ಷ ಬಿಜೆಪಿ ವಿರುದ್ಧ ಹರಿಹಾಯ್ದರು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಗೌರವ ಸಲ್ಲಿಸುವ ವಿಷಯದ ಮೇಲೆ ನಡೆದ ಚರ್ಚೆಯ ಅಂತಿಮ ಹಂತದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಮ್ಮಿಶ್ರ ಸರಕಾರ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಬಜೆಟ್‌ನಲ್ಲಿ ತಮ್ಮ ಬೇಡಿಕೆ ಈಡೇರದಿದ್ದಲ್ಲಿ ವಿಷಯ ಮುಂದಿಟ್ಟುಕೊಂಡು ಜನರ ಬಳಿ ತೆರಳಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. 
ಬಿಜೆಪಿಯವರ ಈ ಹೇಳಿಕೆಗೆ ಗರಂ ಆದ ಸಿಎಂ ಕುಮಾರ ಸ್ವಾಮಿ ಉತ್ತರ ನೀಡುವಾಗ ರಾಮಮಂದಿರ ವಿಷಯ ಪ್ರಸ್ತಾಪಿಸಿದರು, ನಿಮ್ಮಿಂದ ಬುದ್ದಿ ಹೇಳಿಸಿಕೊಂಡು ಅಥವಾ ಒತ್ತಡಕ್ಕೆ ಮಣಿದು ಸಾಲ ಮನ್ನಾ ಮಾಡುವಂತಹ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಸಾಲ ಮನ್ನಾ ಘೋಷಣೆಯಲ್ಲೂ ರಾಜಕೀಯ ಲಾಭ ಪಡೆಯಲು ಬಿಜೆಪಿ ಹೊರಟಿದೆ ಎಂದು ತಿರುಗೇಟು ನೀಡಿದರು.
ಮುಖ್ಯಮಂತ್ರಿ ಕುಮಾರ ಸ್ವಾಮಿ ತಮ್ಮ ಹೇಳಿಕೆ ವಾಪಸ್‌ ಪಡೆಯುವಂತೆ ಒತ್ತಾಯಿಸಿ ಬಿಜೆಪಿ ಸದಸ್ಯರು ಸಭಾಪತಿ ಪೀಠದ ಬಳಿ ಧಾವಿಸಿ ಧರಣಿ ನಡೆಸಿದರೆ, ಕೊನೆಗೆ ಪ್ರತಿಪಕ್ಷದ ಒತ್ತಡಕ್ಕೆ ಮಣಿದ ಸಿಎಂ ಕುಮಾರಸ್ವಾಮಿ ತಮ್ಮ ಹೇಳಿಕೆ ವಾಪಸ್‌ ಪಡೆದರು.  ಕೊನೇ ಪಕ್ಷ ಬಿಜೆಪಿ ಮುಂದಿನ 15 20 ವರ್ಷಗಳಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಶಂಕು ಸ್ಥಾಪನೆ ಮಾಡಲಿ ಎಂದು ಎಚ್ಡಿಕೆ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com