ಎತ್ತ ನೋಡಿದರತ್ತ ದಿನೇಶ್ ಗುಂಡೂರಾವ್: ಸಾರ್ವಜನಿಕರಿಗೆ ಇಲ್ಲವಾಯ್ತು ಫುಟ್ ಪಾತ್!

ಸಿಲಿಕಾನ್ ಸಿಟಿಯ ತುಂಬೆಲ್ಲಾ ಕೆಪಿಸಿಸಿ ನೂತನ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೇ ತುಂಬಿ ಹೋಗಿದ್ದಾರೆ, ಎತ್ತ ಕಣ್ಣಾಡಿಸಿದರೂ ಅಲ್ಲೆಲ್ಲಾ ದಿನೇಶ್ ...
ದಿನೇಶ್ ಗುಂಡುರಾವ್ ಹೋರ್ಡಿಂಗ್ಸ್
ದಿನೇಶ್ ಗುಂಡುರಾವ್ ಹೋರ್ಡಿಂಗ್ಸ್
ಬೆಂಗಳೂರು: ಸಿಲಿಕಾನ್ ಸಿಟಿಯ ತುಂಬೆಲ್ಲಾ ಕೆಪಿಸಿಸಿ ನೂತನ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೇ ತುಂಬಿ ಹೋಗಿದ್ದಾರೆ, ಎತ್ತ ಕಣ್ಣಾಡಿಸಿದರೂ ಅಲ್ಲೆಲ್ಲಾ ದಿನೇಶ್ ಗುಂಡೂರಾವ್ ಕಾಣುತಿದ್ದಾರೆ. ಅಯ್ಯೋ ಇದೇನಪ್ಪ ಅಂತೀರಾ ಇಲ್ಲಿದೆ ನೋಡಿ ಡಿಟೈಲ್ಸ್.
ದಿನೇಶ್ ಗುಂಡೂರಾವ್  ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ನಂತರ ನಗರದ ಮರ, ಎಲೆಕ್ಟ್ಕಿಕಲ್ ಪೋಲ್, ಫುಟ್ ಪಾತ್ ಸೇರಿದಂತೆ ಎಲ್ಲೆಡೆ ದಿನೇಶ್ ಗುಂಡೂರಾವ್ ಪೋಸ್ಟರ್ ಗಳೇ ತುಂಬಿ ತುಳುಕುತ್ತಿವೆ. 
ಪಕ್ಷದ ಕಚೇರಿಯಿರುವ ಕ್ವೀನ್ಸ್ ರೋಡ್ ನಲ್ಲಿ ಸುಮಾರು 100ರಿಂದ 150 ದ ಹೋರ್ಡಿಂಗ್ ಫುಟ್ ಪಾತ್ ಮೇಲೆ ನಿಂತಿವೆ. ಇವುಗಳ ನಡುವೆ ದಾರಿಹೋಕರು ಬಲವಂತವಾಗಿ ನಡೆದುಕೊಂಡು ಹೋಗಬೇಕಾಗಿದೆ.
ನೋ ಪಾರ್ಕಿಂಗ್ ಪ್ರದೇಶಗಳಲ್ಲಿ ಫ್ಲೆಕ್ಸ್ ಗಳು ನೇತಾಡುತ್ತಿವೆ, ಈ ಸಂಬಂದ ಪ್ರತಿಕ್ರಿಯೆ ಕೇಳಲು ಹಲವು ಬಾರಿ ಪ್ರಯತ್ನಿಸಿದರೂ ರಾವ್ ಸಂಪರ್ಕಕ್ಕೆ ಸಿಗಲಿಲ್ಲ.
ರಾಜಕಾರಣಿಗಳು ಹೆಚ್ಚು ಜವಾಬ್ದಾರಿಯುತವಾಗಿರಬೇಕು ಎಂದು ಜನ ಬಯಸುತ್ತಾರೆ, ಇದೊಂದು ರೀತಿಯ ಉಪದ್ರವವಾಗಿದೆ, ಬಿಬಿಎಂಪಿ ರಾಜಕಾರಣಿಗಳ ಅಧೀನದಲ್ಲಿದೆ, ಹೀಗಿರುವಾಗ ಅವರ ವಿರುದ್ದ ಹೇಗೆ ಇವರು ಕೆಲಸ ಮಾಡುತ್ತಾರೆ ಎಂದು ಡಾ. ಸೈಯ್ಯದ್ ನೋವಾಮನ್ ಎಂಬ ಎನ್ ಆರ್ ಐ ಹೇಳಿದ್ದಾರೆ. 
ಫ್ಲೆಕ್ಸ್ ಮತ್ತು ಹೋರ್ಡಿಂಗ್ಸ್ ಗಳಿಂದಾಗಿ ಬಹುತೇಕ ಕಡೆ ಬ್ಯಾರಿಕೇಡ್ ಕಾಣುವುದಿಲ್ಲ, ಕೆಲವು ಕಡೆ ಫ್ಲೆಕ್ಸ್ ಇರುವುದರಿಂದ ನೋ ಪಾರ್ಕಿಂಗ್ ಬೋರ್ಡ್ ಕಾಣಿಸುವುದಿಲ್ಲ, ಹೀಗಾಗಿ ತಮ್ಮದಲ್ಲದ ತಪ್ಪಿಗೆ ದಂಡ ತೆರಬೇಕಾಗುತ್ತದೆ ಎಂದು ಖಾಸಗಿ ಕಂಪನಿ ಅಧಿಕಾರಿ ಸೈಯ್ಯದ್ ಹಸನ್ ಹೇಳಿದ್ದಾರೆ,
ಈ ಸಂಬಂಧ ಪ್ರತಿಕ್ರಿಯಿಸಿರುವ ಪೊಲೀಸೊಬ್ಬರು, ಈ ಸಂಬಂಧ ಹಲವು ದೂರುಗಳು ಕೇಳಿ ಬರುತ್ತವೆ, ಹೋರ್ಡಿಂಗ್ ವಿಷಯದಲ್ಲಿ ನಾವು ಏನು ಮಾಡಲಾಗದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು, ಈ ವಿಷಯದಲ್ಲಿ ನಾವು ಅಸಹಾಯಕರಾಗಿದ್ದೇವೆ.
ಪಕ್ಷದ ಕಾರ್ಯಕರ್ತರು ಪ್ರತಿಯೊಂದು ಸಣ್ಣ ಪುಟ್ಟ ಸಮಾರಂಭಗಳಿಗೂ ದೊಡ್ಡ ದೊಡ್ಡ ಹೋರ್ಡಿಂಗ್ ಹಾಕುತ್ತಾರೆ,  ಹೋರ್ಡಿಂಗ್ಸ್ ಗಳನ್ನು ಹಾಕಲು ಬೆಂಬಲಿಗರು ಧನ ಸಹಾಯ ಮಾಡುತ್ತಾರೆ, ಇದು ನಮ್ಮ ಪ್ರೀತಿಯನ್ನು ತೋರಿಸುವ ವಿಧಾನ, ಇದುವರೆಗೂ ನಾನು 25 ಹೋರ್ಡಿಂಗ್ ಹಾಕಿದ್ದೇನೆ ಎಂದು ಎಐಸಿಸಿ ಕಾರ್ಯದರ್ಶಿ ಸಲೀಮ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com