ನಿಗಮ ಮತ್ತು ಮಂಡಳಿ ನೇಮಕ ಇನ್ನಷ್ಟು ವಿಳಂಬ ಸಾಧ್ಯತೆ: ಭಿನ್ನಮತೀಯರಲ್ಲಿ ಹೆಚ್ಚಿದ ಬೇಗುದಿ!

: ರಾಜ್ಯ ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ಸಚಿವ ಸ್ಥಾನ ಸಿಗದೇ ಬಂಡಾಯದ ಬಾವುಟ ಹಾರಿಸಿದ್ದ ಹಲವು ಶಾಸಕರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ಸಚಿವ ಸ್ಥಾನ ಸಿಗದೇ ಬಂಡಾಯದ ಬಾವುಟ ಹಾರಿಸಿದ್ದ  ಹಲವು ಶಾಸಕರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನ ನೀಡುವುದಾಗಿ ಕೊಟ್ಟಿದ್ದ ಭರವಸೆ ಕೇವಲ ಭರವಸೆಯಾಗಿಯೇ ಉಳಿದಿದೆ.
ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ 30 ನಿಗಮ ಮಂಡಳಿಗಳಿಗೆ ಒಂದು ವಾರದಲ್ಲೇ ನೇಮಕಾತಿ ಮಾಡುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಒಂದು ವಾರದ ಗಡುವು ಕಳೆದರೂ ಯಾವುದೇ ಸುಳಿವಿಲ್ಲ.
ನಿಗಮ ಮಂಡಳಿಗೆ ನೇಮಕ ಮಾಡುವ ಆತುರ ಎರಡು ಪಕ್ಷದ ನಾಯಕರಗಳಿಗೂ ಇಲ್ಲದಿರುವುದು ಶಾಸಕರನ್ನು ಮತ್ತಷ್ಟು ನಿರಾಸೆಗೊಳಿಸಿದೆ ಎಂದು ಮೂರು ಬಾರಿ ಆಯ್ಕೆಯಾಗಿರುವ ಶಾಸಕರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸೆಗಾಗಿ  ಧರ್ಮಸ್ಥಳ ಸಮೀಪದ ಉಜಿರೆಗೆ ತೆರಳಿದ್ದಾರೆ, ಅಲ್ಲಿ ಸಿದ್ದರಾಮಯ್ಯ 12 ದಿನಗಳ ಕಾಲ ಠಿಕಾಣಿ ಹೂಡಲಿದ್ದಾರೆ.  ಹೀಗಾಗಿ ಈ ತಿಂಗಳು ಮತ್ತೆ ಸಮನ್ವಯ ಸಮಿತಿ ಸಭೆ ನಡೆಸುವ ಸಾಧ್ಯತೆಯಿಲ್ಲ, 2 ಪಕ್ಷಗಳ ಶಾಸಕರು  ಸಾಮಾನ್ಯ ಕನಿಷ್ಠ ಕಾರ್ಯಕ್ರಮ ನಿರ್ಮಿಸುವಲ್ಲಿ ನಿರತರಾಗಿದ್ದಾರೆ,. ಇನ್ನೂ ಸಿಎಂ ಕುಮಾರ ಸ್ವಾಮಿ, ಬಜೆಟ್ ತಯಾರಿಯಲ್ಲಿದ್ದಾರೆ.
ಸಮನ್ವಯ ಸಮಿತಿ ಸಭೆ  ಜುಲೈ ತಿಂಗಳ ಮೊದಲ ವಾರದಲ್ಲಿ ನಡೆಯಲಿದೆ, ಬಜೆಟ್ ಅಧಿವೇಶನದ  ನಂತರ  ನಿಗಮ -ಮಂಡಳಿ ನೇಮಕವಾಗಲಿದೆ ಎಂದು ಕಾಂಗ್ರೆಸ್ ಶಾಸಕರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com