ಸಚಿವ ಡಿ.ಕೆ. ಶಿವಕುಮಾರ್
ರಾಜಕೀಯ
ಜೆಡಿಎಸ್-ಕಾಂಗ್ರೆಸ್ ಮೈತ್ರಿ; ನಾವೆಲ್ಲರೂ ಒಟ್ಟಿಗೆ ಸಾಗಬೇಕಿದ್ದು, ಹೊಂದಾಣಿಕೆ ಮಾಡಿಕೊಳ್ಳಲೇಬೇಕಿದೆ; ಡಿಕೆ. ಶಿವಕುಮಾರ್
ನಾವೆಲ್ಲರೂ ಒಟ್ಟಿಗೆ ಸಾಗಬೇಕಿದ್ದು, ಹೊಂದಾಣಿಕೆ ಮಾಡಿಕೊಳ್ಳಲೇಬೇಕಿದೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ...
ಬೆಂಗಳೂರು: ನಾವೆಲ್ಲರೂ ಒಟ್ಟಿಗೆ ಸಾಗಬೇಕಿದ್ದು, ಹೊಂದಾಣಿಕೆ ಮಾಡಿಕೊಳ್ಳಲೇಬೇಕಿದೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಡ ಸರ್ಕಾರದ ಬಾಳಿಕೆ ಕುರಿತು ಪರ-ವಿರುದ್ಧ ಹೇಳಿಕೆಗಳು ಹೊರ ಬೀಳುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನಾವೆಲ್ಲರೂ ಒಟ್ಟಿಗೆ ಸಾಗಬೇಕಿದ್ದು, ಹೊಂದಾಣಿಕೆ ಮಾಡಿಕೊಳ್ಳಲೇಬೇಕಿದೆ ಎಂದು ಹೇಳಿದ್ದಾರೆ.
ಪರಿಸ್ಥಿತಿಗಳು ನಮಗೆ ಗೊತ್ತಿದೆ. ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ಎರಡೂ ರಾಜಕೀಯ ಪಕ್ಷಗಳು ರಾಜ್ಯದಲ್ಲಿ ಆಡಳಿತ ನಡೆಸಲಿದೆ ಎಂದು ತಿಳಿಸಿದ್ದಾರೆ.
ಸರ್ಕಾರ ಬಾಳುವಿಕೆ ಬಗ್ಗೆ ಸಿದ್ದರಾಮಯ್ಯ ಅವರ ವಿಡಿಯೋಗಳು ಬಿಡುಗಡೆಯಾದ ಬಳಿಕ ಮೈತ್ರಿ ಕೂಡ ಸರ್ಕಾರದಲ್ಲಿ ತೀವ್ರ ಗೊಂದಲಗಳುಂಟಾಗಿವೆ. ಈ ನಡುವಲ್ಲೇ ಭಾನುವಾರ ಸಮನ್ವಯ ಸಮಿತಿ ನಡೆಯುವ ಸಾಧ್ಯೆಗಳಿದ್ದು, ಈ ಸಭೆ ಅಂಗಪಕ್ಷಗಳ ನಡುವೆ ಸಮನ್ವಯತೆ ಸಾಧನೆಗೆ ನೆರವಾಗಲಿದೆಯೇ ಎಂಬ ಕುತೂಹಲಗಳು ಮೂಡತೊಡಗಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ