ಚುನಾವಣೆ ಹಿನ್ನಲೆ ಲಿಂಗಾಯತ ವಿಚಾರದಲ್ಲಿ ಕಾಂಗ್ರೆಸ್ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿಲ್ಲ: ಜಿ.ಪರಮೇಶ್ವರ್

ಲಿಂಗಾಯಕ ಮತ್ತು ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಯಾವುದೇ ರೀತಿಯ ರಾಜಕೀಯ ಮಾಡುತ್ತಿಲ್ಲ. ಈ ವಿಚಾರದಲ್ಲಿ ಚುನಾವಣಾ ಲಾಭ ಕುರಿತು ಹೆಚ್ಚಿನ ನಿರೀಕ್ಷೆಗಳನ್ನೂ ಇಟ್ಟುಕೊಂಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್...
ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್
ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್
Updated on
ಬೆಂಗಳೂರು: ಲಿಂಗಾಯಕ ಮತ್ತು ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಯಾವುದೇ ರೀತಿಯ ರಾಜಕೀಯ ಮಾಡುತ್ತಿಲ್ಲ. ಈ ವಿಚಾರದಲ್ಲಿ ಚುನಾವಣಾ ಲಾಭ ಕುರಿತು ಹೆಚ್ಚಿನ ನಿರೀಕ್ಷೆಗಳನ್ನೂ ಇಟ್ಟುಕೊಂಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಮಂಗಳವಾರ ಹೇಳಿದ್ದಾರೆ. 
ಈ ಕುರಿತಂತೆ ಸ್ಪಷ್ಟನೆ ನೀಡಿರುವ ಅವರು, ಚುನಾವಣಾ ಲಾಭಕ್ಕಾಗಿ ಲಿಂಗಾಯತ ವಿಚಾರವನ್ನು ಸಿದ್ದರಾಮಯ್ಯ ಸರ್ಕಾರ ಬಳಸಿಕೊಳ್ಳುತ್ತಿದೆ ಎಂದು ಹೇಳುತ್ತಿರುವುತು ತಪ್ಪು ಎಂದು ಹೇಳಿದ್ದಾರೆ. 
2013ರಲ್ಲಿಯೇ ಈ ವಿಚಾರ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ, ಅಂದು ಸರ್ಕಾರ ತಿರಸ್ಕರಿಸಿತ್ತು. ಸಮುದಾಯಗ ಆಗ್ರಹ ಹಿನ್ನಲೆಯಲ್ಲಿ ಈ ಬಾರಿ ಕೂಡ ಮತ್ತೆ ಕೇಂದ್ರಕ್ಕೆ ಕಳುಹಿಸಲಾಗಿದೆ. ಅಷ್ಟೇ ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ತಿಳಿಸಿದ್ದಾರೆ. 
ಲಿಂಗಾಯತ ವಿಚಾರದಲ್ಲಿ ಚುನಾವಣಾ ಲಾಭ ಪಡೆಯಲು ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿಲ್ಲ. ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಹಾಗೂ ಅಲ್ಪಸಂಖ್ಯಾತ ಸ್ಥಾನ ನೀಡಬೇಕೆಂದು ಮೊದಲು ಆಗ್ರಹಿಸಿದ್ದು ಕಾಂಗ್ರೆಸ್. ಹೀಗಾಗಿ ಅಲ್ಪಸ್ವಲ್ಪ ಲಾಭಗಳನ್ನು ಬಯಸುತ್ತೇವೆಂದಿದ್ದಾರೆ. 
ಇದೇ ವೇಳೆ ಅಮಿತ್ ಶಾ ಅವರ ಮಠಗಳ ಭೇಟಿ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಮಠಾಧೀಶರು ಯಾವುದೇ ರಾಜಕೀಯ ಸಂಬಂಧಗಳನ್ನು ಹೊಂದಿಲ್ಲ. ಹೀಗಾಗಿ ಅವರು ಯಾವುದೇ ಪಕ್ಷಕ್ಕೂ ಮತ ಚಲಾಯಿಸುವಂತೆ ತಮ್ಮ ಅನುಯಾಯಿಗಳಿಗೆ ತಿಳಿಸುವುದಿಲ್ಲ ಎಂದು ಹೇಳಿದ್ದಾರೆ.
ಅಧಿಕಾರ ವಿರೋಧಿ ವಿಚಾರ ಕುರಿತು ನನಗೆ ಹಾಗೂ ಸಿದ್ದರಾಮಯ್ಯ ಅವರಿಗೆ ಮಾಹಿತಿ ತಿಳಿದಿದೆ. ಆದರೆ, ಕಾಂಗ್ರೆಸ್ ಸರ್ಕಾರ ಮೇ.12 ರಂದು ನಡೆಯಲಿರುವ ಚುನಾವಣೆಯಲ್ಲಿ ಗೆಲವು ಸಾಧಿಸುವ ವಿಶ್ವಾಸವಿದೆ. 
ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಗಳು ಆಗದೇ ಇರುವುದಕ್ಕೆ ಕೆಲವರಲ್ಲಿ ವ್ಯಕ್ತಿಗತವಾಗಿ ಅಥವಾ ಶಾಸಕರಲ್ಲಿ ಅಸಮಾಧಾನಗಳಿರಬಹುದು. ಆದರೆ, ಸಿದ್ದರಾಮಯ್ಯ ಸರ್ಕಾರದ ವಿರುದ್ದ ಯಾರೊಬ್ಬರಲ್ಲೂ ಅಸಮಾಧಾನಗಳಿಲ್ಲ. ಬಿಜೆಪಿ-ಬಿಎಸ್'ಪಿ ಮೈತ್ರಿಗಳಿಂಗ ಕಾಂಗ್ರೆಸ್ ಮೇಲೆ ಯಾವುದೇ ರೀತಿಯ ಪರಿಣಾಮಗಳು ಬೀರುವುದಿಲ್ಲ ಎಂದು ಹೇಳಿದ್ದಾರೆ. 
ಬಳಿಕ ಪ್ರಸ್ತುತ ಇರುವ ಎಲ್ಲಾ ಶಾಸಕರಿಗು ಟಿಕೆಟ್'ಗಳನ್ನು ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಸಂಬಂಧ ಪಕ್ಷದ ನಾಯಕರು ಹಾಗೂ ಸಚಿವರೊಂದಿಗಿನ ಸಂಬಂಧಗಳನ್ನು ಹೊರತಪಡಿಸಿ, ಗೆಲವು ಸಾಧಿಸುವ ಅಭ್ಯರ್ಥಿಗಳ ಕುರಿತು ಪಕ್ಷದ ಹೈ ಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com