ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ: ಗೌಡ ವ್ಯಂಗ್ಯ ಹೇಳಿಕೆ ಅಪಾರ್ಥವಾಗಿ ರಾದ್ಧಾಂತ

ಬಿಜೆಪಿ ಕುರಿತಂತೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರ ಖಾರವಾಗಿ ಕೇಳಿದ ಪ್ರಶ್ನೆ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿತ್ತು...
ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ
ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ
ಬೆಂಗಳೂರು: ಬಿಜೆಪಿ ಕುರಿತಂತೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರ ಖಾರವಾಗಿ ಕೇಳಿದ ಪ್ರಶ್ನೆ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. 
ತಮ್ಮನ್ನು ಭೇಟಿ ಮಾಡಲು ಬಂದಿದ್ದ ಸಂವಿಧಾನ ಉಳಿವಿಗಾಗಿ ಕರ್ನಾಟಕ ಸಂಘಟನೆ ಸದಸ್ಯರಿಗೆ ಪ್ರಶ್ನೆ ಕೇಳಿದ್ದ ದೇವೇಗೌಡರು, ಬಿಜೆಪಿಯನ್ನು ದೂರ ಇಡಲು ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವಂತೆ ಮಾಡುತ್ತಿರುವ ಮನವಿ ಪರಿಶೀಲನೆ ನಡೆಸಬಹುದು. ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂದಿಯವರ ಜೆಡಿಎಸ್ ಕುರಿತ ಮಾತುಗಳಿಗೆ ಏನು ಹೇಳುತ್ತೀರಿ ಎಂದು ಕೇಳಿದ್ದರು. 
ದೇವೇಗೌಡ ಅವರ ಈ ಹೇಳಿಕೆ ಕಾಂಗ್ರೆಸ್ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ ಎಂಬ ಅರ್ಧದಲ್ಲಿ ವದಂತಿಗಳು ಹರಡಲು ಆರಂಭಿಸಿದ್ದವು. ಬಳಿಕ ಎಚ್ಚೆತ್ತ ದೇವೇಗೌಡರು ಕೂಡಲೇ ತುರ್ತು ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಈಗಾಗಲೇ ಬಿಎಸ್'ಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಬಿಎಸ್'ಪಿ ಹೊರತುಪಡಿಸಿ ಇನ್ನಾವುದೇ ಪಕ್ಷದೊಂದಿಗೆ ಕೈ ಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
ಸಮಾಜವಾದಿ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಸಂಬಂಧ ಅವರಾಗಿಯೇ ಮುಂದೆ ಬಂದರೆ ಪರಿಶೀಲನೆ ನಡೆಸಲಾಗುವುದು. ಇದಕ್ಕಿಂತ ಮುಂದೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು. 
ಕಾಂಗ್ರೆಸ್ ಜೊತೆಗಿನ ಮೈತ್ರಿ ಪ್ರಸ್ತಾಪವನ್ನು ಸರಾಸಗಟಾಗಿ ತಳ್ಳಿ ಹಾಕಿದ ಅವರು, ಬೆಳಿಗ್ಗೆ ಸಂಘಟನೆಯ ಮುಖಂಡರು ನನ್ನನ್ನು ಭೇಟಿಯಾಗಿ ರಾಜ್ಯದಲ್ಲಿ ಬಿಜೆಪಿಯನ್ನು ದೂರವಿಡಲು ಕಾಂಗ್ರೆಸ್ ಜೊತೆಗೆ ಕೈ ಜೋಡಿಸಬೇಕು ಹಾಗೂ ಬಿಜೆಪಿಗೆ ನಷ್ಟವಾಗುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಮನವಿ ಪತ್ರವನ್ನು ಓದಿದ್ದೇನೆ. ಅಷ್ಟೇ ಹೊರತು ಮೈತ್ರಿಯ ಭರವಸೆ ನೀಡಲಿಲ್ಲ. ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಸಮಯದ ಎಲ್ಲಿದೆ? ಕಾಂಗ್ರೆಸ್'ನವರೇ ಸೀಟು ಹೊಂದಾಣಿಕೆ ಕುರಿತು ಮೊದಲು ಚರ್ಚೆ ಮಾಡಲಿ. ಅವರದ್ದು ದೊಡ್ಡ ಪಕ್ಷ ಎಂದು ವ್ಯಂಗ್ಯವಾಗಿ ಹೇಳಿದ್ದೆ. ಅದನ್ನೇ ಕೆಲ ಮಾಧ್ಯಮಗಳು ತಪ್ಪಾಸಿ ಅರ್ಥೈಸಿವೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com