ವಿಧಾನಸಭೆ ಚುನಾವಣೆ: ಯದುವೀರ್ ಒಡೆಯರ್ ಸೆಳೆಯಲು ಅಮಿತ್ ಶಾ ಯತ್ನ

ಮೈಸೂರು ರಾಜಮನೆತನದವರನ್ನು ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷದತ್ತ ಸೆಳೆಯಲು ...
ಅಮಿತ್ ಶಾ
ಅಮಿತ್ ಶಾ
Updated on: 

ಬೆಂಗಳೂರು: ಮೈಸೂರು ರಾಜಮನೆತನದವರನ್ನು ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷದತ್ತ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಊಹಾಪೋಹಗಳಿಗೆ ಇದೀಗ ಪುಷ್ಟಿ ಸಿಕ್ಕಿದೆ.

ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಭೇಟಿ ಮಾಡುವ ಕಾರ್ಯಕ್ರಮವಿದೆ, ಅವರು ನಾಳೆ ಮತ್ತು ನಾಡಿದ್ದು ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ನಾಳೆ ಅಮಿತ್ ಶಾ ಅವರು ಮೈಸೂರಿನ ಒಡೆಯರ್ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎಂದು ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ ಹೇಳಿದ್ದಾರೆ.

ರಾಜಸ್ತಾನದ ರಾಜ್ ಕೋಟ್ ನಲ್ಲಿ ಯದುವೀರ್ ಅವರ ಮಾವನ ಮೂಲಕ ಮೈಸೂರು ಒಡೆಯರ್ ಅವರನ್ನು ಪಕ್ಷದತ್ತ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಮೂಲಗಳು ಹೇಳುತ್ತವೆ.

ಆದರೆ ಯದುವೀರ್ ಇನ್ನೂ ಕೂಡ ಪಕ್ಷಕ್ಕೆ ಸೇರುವ ಒಲವು ತೋರಿಸಿಲ್ಲ ಎನ್ನಲಾಗುತ್ತಿದೆ. ಅವರು ನಾಳೆ ಬೆಂಗಳೂರಿನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ. ಮೈಸೂರು, ಮಂಡ್ಯಗಳಲ್ಲಿ ಅಮಿತ್ ಶಾ ಮಠ, ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com