ಬೆಂಗಳೂರು; ನಕಲಿ ಮತದಾರರ ಚೀಟಿ ಸೃಷ್ಟಿಸುವುದೇ ಕಾಂಗ್ರೆಸ್ ತತ್ವ ಎಂದು ಕೇಂದ್ರ ಸಚಿವ ಪ್ರಕಾಶ್ ಜವಡೇಕರ್ ಅವರು ಬುಧವಾರ ಆರೋಪ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನಿಜವಾದ ಮತದಾರರು ತಮಗೆ ಮತ ಹಾಕದಿದ್ದರೆ, ನಕಲಿ ಮತದಾರರನ್ನು ಸೃಷ್ಟಿಸುವುದು ಕಾಂಗ್ರೆಸ್ ಪಕ್ಷದ ತತ್ವ. ಮಂಗಳವಾರ ರಾತ್ರಿ ದೊರಕಿರುವುದು ಬೃಹತ್ ಸಮುದ್ರದಲ್ಲಿನ ಚಿಟಿಕೆಯಷ್ಟು ಉಪ್ಪು ಮಾತ್ರ ಎಂದು ಹೇಳಿದ್ದಾರೆ.
ರಾಜರಾಜೇಶ್ವರಿನಗರ ಕ್ಷೇತ್ರ ಚುನಾವಣೆಯನ್ನು ಚುನಾವಣಾ ಆಯೋಗ ಮುಂದೂಡಬೇಕು. ಸೈಬರ್ ಭದ್ರತಾ ದಳದಿಂದ ಕೂಡಲೇ ತೀವ್ರವಾದ ತನಿಖೆ ಆರಂಭಿಸಬೇಕು ಮತ್ತು ಫ್ಲಾಟ್ ಮಾಲೀಕೆ ಮಂಜುಳಾ ಅವರನ್ನು ಕೂಡಲೇ ಬಂಧನಕ್ಕೊಳಪಡಿಸಿ ಈ ಮೂರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುತ್ತಿದ್ದೇವೆಂದು ತಿಳಿಸಿದ್ದಾರೆ.