ಚುನಾವಣೆ: ಮದುವೆ ಉಡುಪಿನಲ್ಲಿಯೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು!

ಮದುವೆಗಾಗಿ ಸಾಂಪ್ರದಾಯಿಕ ಉಡುಗೆ ತೊಟ್ಟು ಶೃಂಗಾರಗೊಂಡಿದ್ದ ವಧು ಹಾಗೆಯೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ.
ವಧು ಹಾಗೂ ದಿವ್ಯಾಂಗ
ವಧು ಹಾಗೂ ದಿವ್ಯಾಂಗ

ಬೆಂಗಳೂರು: ಪ್ರಜಾಸತ್ತೆಯ ಮಹಾಹಬ್ಬ ಹಲವು ವಿಶೇಷತೆಗಳಿಂದಲೂ ಗಮನ ಸೆಳೆಯಿತು. ಮದುವೆಗಾಗಿ ಸಾಂಪ್ರದಾಯಿಕ ಉಡುಗೆ ತೊಟ್ಟು ಶೃಂಗಾರಗೊಂಡಿದ್ದ ವಧು ಹಾಗೆಯೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ.

 ಮದುವೆಗೂ ಮುನ್ನ ಮಡಿಕೇರಿಯ ಮತಗಟ್ಟೆ ಸಂಖ್ಯೆ 131ಕ್ಕೆ ತನ್ನ ಕುಟುಂಬ ಸಮೇತ ಆಗಮಿಸಿದ  ವಧು  ಮತ ಚಲಾಯಿಸಿ ಸಂಭ್ರಮಿಸಿದರು.   ಬದಾಮಿಯಲ್ಲಿ  ನಿಲ್ಲಲು ಶಕ್ತರಲ್ಲದ ದಿವ್ಯಾಂಗರೊಬ್ಬರು ಮತ ಚಲಾಯಿಸುವ ಮೂಲಕ ಇತರರಿಗೆ ಮಾದರಿಯಾದರು.

 ವೀಲ್ ಚೇರ್ ನಲ್ಲಿ  ಕುಟುಂಬ ಸದಸ್ಯರು ಕರೆತಂದಿದ್ದ ದಿವ್ಯಾಂಗರು ಮತ ಚಲಾಯಿಸಲು ಚುನಾವಣಾ ಅಧಿಕಾರಿಗಳು ನೆರವು ನೀಡಿದರು. ಆತ ಹುಟ್ಟಿನಿಂದಲೂ ದಿವ್ಯಾಂಗರಾಗಿದ್ದಾರೆ. ಮಾತನಾಡಲು ಹಾಗೂ ನಡೆಯಲೂ ಆಗುವುದಿಲ್ಲ. ಹಾಗಾಗೀ ಮತಗಟ್ಟೆಗೆ ಕರೆ ತಂದು ಮತ ಚಲಾಯಿಸುತ್ತಿರುವುದಾಗಿ ಅವರ ಸಹೋದರ ಸುದ್ದಿಸಂಸ್ಥೆಗೆ ತಿಳಿಸಿದರು.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಲ್ಲಿ ಚುನಾವಣೆ  ನಡೆಯುತ್ತಿದ್ದು, ಸಂಜೆ 5 ಗಂಟೆಯವರೆಗೂ ಶೇ. 64 ರಷ್ಟು ಮತದಾನವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com