ಚುನಾವಣೆ: ಧಾರವಾಡದ ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಚುನಾವಣಾ ಕಾರ್ಯಕ್ಕೆ ನಿಯೋಜಿತರಾಗಿರುವ ಸಿಬ್ಬಂದಿಗಳು ಮತದಾರರಿಗೆ ಹೇಳುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಧಾರವಾಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನಾನಿರತರು
ಪ್ರತಿಭಟನಾನಿರತರು

ಧಾರವಾಡ : ಕಾಂಗ್ರೆಸ್  ಅಭ್ಯರ್ಥಿ ವಿನಯ್ ಕುಲಕರ್ಣೀ ಅವರಿಗೆ ಮತ ನೀಡುವಂತೆ ಚುನಾವಣಾ ಕಾರ್ಯಕ್ಕೆ ನಿಯೋಜಿತರಾಗಿರುವ ಸಿಬ್ಬಂದಿಗಳು ಮತದಾರರಿಗೆ ಹೇಳುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಧಾರವಾಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ  ಪ್ರತಿಭಟನೆ ನಡೆಸಿದ್ದಾರೆ.

ಕರಡಿಗುಡ್ಡ ಗ್ರಾಮದ ಮತಗಟ್ಟೆ ಸಂಖ್ಯೆಯ 58ರ ಹೊರಭಾಗದಲ್ಲಿ ಈ ಘಟನೆ ನಡೆದಿದ್ದು, ಚುನಾವಣಾ ಆಯೋಗದ  ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿನಯ್ ಕುಲಕರ್ಣೀ ಲಿಂಗಾಯಿತ ಸಮುದಾಯದ ಮುಖಂಡರಾಗಿದ್ದು, ಧಾರವಾಡದ ಶಾಸಕರೂ ಆಗಿದ್ದಾರೆ. ಈ  ಕ್ಷೇತ್ರದಲ್ಲಿ  ಮರು ಮತದಾನ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ.

ಮಾಜಿ ಶಾಸಕ ಅಯ್ಯಪ್ಪ ದೇಸಾಯಿ ಅವರ ಪುತ್ರ ಅಮೃತ ದೇಸಾಯಿ ಬಿಜೆಪಿ ಅಭ್ಯರ್ಥಿಯಾಗಿದ್ದು, ವಿನಯ್ ಕುಲಕರ್ಣೀಗೆ ಪ್ರಬಲ ಪೈಪೋಟಿ ನೀಡಿದ್ದಾರೆ.  2013ರ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ದೇಸಾಯಿ  ಕುಲಕರ್ಣೀ ವಿರುದ್ಧ ಸೋತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com