ಸೇವೆ ಮಾಡಲು ಅಧಿಕಾರ ಬೇಕಿಲ್ಲ, ಶಾಸಕ ಸ್ಥಾನವೇ ಸಾಕು: ಹೆಚ್ ವಿಶ್ವನಾಥ್ ಪುತ್ರ ತೀವ್ರ ಗರಂ

ವಿಶ್ವಾಸಮತ ಯಾಚನೆಗೆ ಸುಪ್ರೀಂ ಕೋರ್ಟ ಆದೇಶ ನೀಡಿದ ಬೆನ್ನಲ್ಲೇ ಕರ್ನಾಟಕದಲ್ಲಿ ಶಾಸಕರ ಕುದುರೆ ವ್ಯಾಪರ ತೀವ್ರವಾಗಿದ್ದು, ಇದಕ್ಕೆ ಇಂಬು ನೀಡುವಂತೆ ಜೆಡಿಎಸ್ ಮುಖಂಡ ವಿಶ್ವನಾಥ್ ಪುತ್ರ ಪೂರ್ವಜ್ ವಿಶ್ವನಾಥ್ ಫೇಸ್ ಬುಕ್ ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮೈಸೂರು: ವಿಶ್ವಾಸಮತ ಯಾಚನೆಗೆ ಸುಪ್ರೀಂ ಕೋರ್ಟ ಆದೇಶ ನೀಡಿದ ಬೆನ್ನಲ್ಲೇ ಕರ್ನಾಟಕದಲ್ಲಿ ಶಾಸಕರ ಕುದುರೆ ವ್ಯಾಪರ ತೀವ್ರವಾಗಿದ್ದು, ಇದಕ್ಕೆ ಇಂಬು ನೀಡುವಂತೆ ಜೆಡಿಎಸ್ ಮುಖಂಡ ವಿಶ್ವನಾಥ್ ಪುತ್ರ ಪೂರ್ವಜ್ ವಿಶ್ವನಾಥ್ ಫೇಸ್ ಬುಕ್ ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕರ ಕುದುರೆ ವ್ಯಾಪರ ಸಂಬಂಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹುಣಸೂರು ಜೆಡಿಎಸ್​ ಶಾಸಕ ಎಚ್ ವಿಶ್ವನಾಥ್ ಪುತ್ರ ಪೂರ್ವಜ್ ವಿಶ್ವನಾಥ್, ಇದೆಲ್ಲವೂ ನಮ್ಮ ಬಳಿ ನಡೆಯುವುದಿಲ್ಲ ಎಂದು ಫೇಸ್​ಬುಕ್​ನಲ್ಲಿ ಸ್ಟೇಟಸ್​ ಪ್ರಕಟಿಸಿದ್ದಾರೆ.
ಕುದುರೆ ವ್ಯಾಪಾರವೆಲ್ಲ ಎಚ್​.ವಿಶ್ವನಾಥ್​ ಅವರ ಬಳಿ ನಡೆಯುವುದಿಲ್ಲ. ನಾವು ಪಕ್ಷ ನಿಷ್ಠರು. ಅವಕಾಶವಾದಿಗಳಲ್ಲ. ನಮ್ಮ ತಂದೆಯನ್ನು ಸೆಳೆಯಲು ನನ್ನ ಮೂಲಕ ಪ್ರಯತ್ನ ನಡೆಸುತ್ತಿರುವವರು ಇದನ್ನೆಲ್ಲ ನಿಲ್ಲಿಸಿ. ಅಧಿಕಾರವಿಲ್ಲದಿದ್ದರೂ ಸರಿಯೇ, ಮತ ನೀಡಿದ ಜನರ ಪರ ಶಾಸಕನಾಗಿ ನಿಲ್ಲುವುದೇ ಸರಿ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ವಿಶ್ವಾಸಮತ ಯಾಚನೆಗೆ ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಪೂರ್ವಜ್ ವಿಶ್ವನಾಥ್ ಅವರ ಈ ಸ್ಟೇಟಸ್ ಇದೀಗ ವೈರಲ್ ಆಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com