ಬೆಂಗಳೂರು: ಸಂಜೆ 4.30ರವರೆಗೂ ಕಾದು ನೋಡಿ, ರಾಜ್ಯ ಮುಖ್ಯಮಂತ್ರಿಯಾಗುವುದು ಬಿ.ಎಸ್.ಯಡಿಯೂರಪ್ಪ ಅವರೇ ಎಂದು ಬಿಜೆಪಿ ಶನಿವಾರ ಹೇಳಿದೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು, ಸಂಜೆ 4.30ರವರೆಗೆ ಕಾದು ನೋಡಿ. ರಾಜ್ಯದ ಮುಂದಿನ 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗುವುದು ಯಡಿಯೂರಪ್ಪ ಅವರೇ ಎಂದು ಹೇಳಿದ್ದಾರೆ.
ಇದರಂತೆ ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಮಾತನಾಡಿ, ಅಧಿಕಾರಕ್ಕಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಅಪವಿತ್ರ ಮೈತ್ರಿ ಮಾಡಿಕೊಂಡಿದೆ. ಇಂತಹ ಪಕ್ಷವನ್ನು ಜನರು ತಿರಸ್ಕರಿಸುತ್ತಾರೆಂದು ತಿಳಿಸಿದ್ದಾರೆ.