ನಾಮಪತ್ರ ಸಲ್ಲಿಸಿದ ಬಿ,ವೈ ರಾಘವೇಂದ್ರ
ನಾಮಪತ್ರ ಸಲ್ಲಿಸಿದ ಬಿ,ವೈ ರಾಘವೇಂದ್ರ

ರಂಗೇರಿದ ಉಪಚುನಾವಣಾ ಕಣ: ಶಿವಮೊಗ್ಗದಲ್ಲಿ ರಾಘವೇಂದ್ರ, ರಾಮನಗರದಿಂದ ಚಂದ್ರಶೇಖರ್ ನಾಮಪತ್ರ ಸಲ್ಲಿಕೆ

ನವೆಂಬರ್ 3 ರಂದು ನಡೆಯುವ ಉಪ ಚುನಾವಣೆಗೆ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪುತ್ರ ಬಿ.ವೈ ರಾಘವೇಂದ್ರ ...
Published on
ಶಿವಮೊಗ್ಗ/ ರಾಮನಗರ: ನವೆಂಬರ್ 3 ರಂದು ನಡೆಯುವ ಉಪ ಚುನಾವಣೆಗೆ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪುತ್ರ ಬಿ.ವೈ ರಾಘವೇಂದ್ರ  ಇಂದು ನಾಮ ಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮೊದಲು ಬಿಎಸ್​ವೈ ಕುಟುಂಬಸ್ಥರು ಟೆಂಪಲ್​ ರನ್​ ನಡೆಸಿದರು. ಕುಟುಂಬಸ್ಥರು ರಾಘವೇಂದ್ರ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಇದಕ್ಕೂ ಮೊದಲು ರಾಘವೇಂದ್ರ ಅವರು ಪತ್ನಿ ಸಹಿತ ಈಶ್ವರನ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸದರು. ನಂತರ ರವೀಂದ್ರ ನಗರದ ಗಣಪತಿ ದೇಗುಲಕ್ಕೆ ಭೇಟಿ ನೀಡಿದರು.
ಅಭ್ಯರ್ಥಿ ರಾಘವೇಂದ್ರ ಅವರೊಂದಿಗೆ  ಕ್ಷೇತ್ರ ಉಸ್ತುವಾರಿ ಕೆ.ಎಸ್.ಈಶ್ವರಪ್ಪ, ಶಾಸಕ ಹರತಾಳು ಹಾಲಪ್ಪ, ಎಂ.ಬಿ.ಭಾನುಪ್ರಕಾಶ್, ರಾಘವೇಂದ್ರ ಪತ್ನಿ ತೇಜಸ್ವಿನಿ ಸೇರಿದಂತೆ ಕುಟುಂಬ ಸದಸ್ಯರು ಇದ್ದರು..
ಇನ್ನೂ ರಾಮನಗರ ವಿಧಾನಸಭೆ ಉಪ ಚುನಾವಣೆಗೆ ಬಿಜೆಪಿಯಿಂದ ಚಂದ್ರಶೇಖರ್ ಲಿಂಗಪ್ಪ ಇಂದು ರಾಮನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. 
ಈ ವೇಳೆ ಮಾಜಿ ಡಿಸಿಎಂ ಆರ್ ಅಶೋಕ, ಮಾಜಿ ಸಚಿವ ಸಿ,ಪಿ ಯೋಗೇಶ್ವರ್ ಸಂಸದ ಪಿ,ಸಿ ಮೋಹನ್ ಮತ್ತಿತರರು ಸಾಥ್ ನೀಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com