ಬಳ್ಳಾರಿ: ಕಾಂಗ್ರೆಸ್ ದಂಡನಾಯಕರ ವಿರುದ್ಧ ಶ್ರೀರಾಮುಲು ಏಕಾಂಗಿ ಹೋರಾಟ!

ಬಳ್ಳಾರಿ ಲೋಕಸಭಾ ಕ್ಷೇತ್ರ ಸಚಿವ ಡಿ.ಕೆ ಶಿವಕುಮಾರ್ ಮತ್ತು ಶ್ರೀರಾಮುಲು ನಡುವಿನ ಪ್ರತಿಷ್ಠೆಯ ಕದನವಾಗಿತ್ತು, ಆದರೆ ಈಗ ಇಡೀ ರಾಜ್ಯ ಕಾಂಗ್ರೆಸ್ ಗಣಿನಾಡಿನಲ್ಲಿ ...
ಶ್ರೀರಾಮುಲು
ಶ್ರೀರಾಮುಲು
Updated on: 
ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರ ಸಚಿವ ಡಿ.ಕೆ ಶಿವಕುಮಾರ್ ಮತ್ತು ಶ್ರೀರಾಮುಲು ನಡುವಿನ ಪ್ರತಿಷ್ಠೆಯ ಕದನವಾಗಿತ್ತು, ಆದರೆ ಈಗ ಇಡೀ ರಾಜ್ಯ ಕಾಂಗ್ರೆಸ್ ಗಣಿನಾಡಿನಲ್ಲಿ ಬೀಡು ಬಿಟ್ಟಿದೆ. 
ಕಾಂಗ್ರೆಸ್ ನ ಪ್ರಮುಖ ನಾಯಕರುಗಳಾದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್,  ಸೇರಿದಂತೆ ಹಲವು ಸಚಿವರು ಬಳ್ಳಾರಿ ಕ್ಷೇತ್ರದ ಮೇಲೆ ತಮ್ಮ ಗಮನ ಹರಿಸಿದ್ದಾರೆ,
ಮತ್ತೊಂದೆಡೆ ಬಿಜೆಪಿ ಬಳ್ಳಾರಿಯ ಇಡೀ ಜವಾಬ್ದಾರಿಯನ್ನು ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಹೆಗಲಿಗೆ ನೀಡಿದೆ, ಶ್ರೀರಾಮುಲು ರಾಜೀನಾಮೆಯಿಂದ ತೆರವಾಗಿದ್ದ ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ, ಬಳ್ಳಾರಿ ಲೋಕಸಭೆ ಕ್ಷೇತ್ರವನ್ನು ಗೆಲ್ಲಲು ಪಣತೊಟ್ಟಿರುವ  ಕಾಂಗ್ರೆಸ್ ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಹಲವು ಸಚಿವರನ್ನು ಬಳ್ಳಾರಿಗೆ ನಿಯೋಜಿಸಿದೆ, ನಮಗೆ ಯಾವುದೇ ಸಂದೇಹವಿಲ್ಲ, ನಾವು ಚುನಾವಣೆಯಲ್ಲಿ ಗೆಲ್ಲುತ್ತೇವೆ, ಇದು 2019ರ ಲೋಕಸಭೆ ಚುನಾವಣೆಯ ದಿಕ್ಸೂಚಿ ಎಂದು ಕಾಂಗ್ರೆಸ್ ನಾಯಕರ ಅಭಿಪ್ರಾಯ. 
ಜಿಲ್ಲೆಗೆ ಬಂದಿರುವ ಕಾಂಗ್ರೆಸ್ ಸಚಿವರಿಗೆ ಒಂದೊಂದು ಕ್ಷೇತ್ರದ ಹೊಣೆಗಾರಿಕೆ ನೀಡಲಾಗಿದೆ, ಬಳ್ಳಾರಿ ಗ್ರಾಮೀಣ- ಕೃಷ್ಣ ಬೈರೇಗೌಡ, ಬಳ್ಳಾರಿ ನಗರ- ಯು.ಟಿ ಖಾದರ್, ಕೂಡ್ಲಿಗಿ ರಮೇಶ್ ಜಾರಕಿಹೊಳಿ, ಹೂವಿನ ಹಡಗಲಿ ಸತೀಶ್ ಜಾರಕಿಹೊಳಿ ಅವರಿಗೆ ನೀಡಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೊಹಮದ್ ರಫಿ ಹೇಳಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಬಳ್ಳಾರಿಗೆ ಭೇಟಿ ನೀಡಿ ತಮ್ಮ ಪಕ್ಷದ ಅಭ್ಯರ್ಥಿ ವಿ,ಎಸ್ ಉಗ್ರಪ್ಪ ಪರ ಪ್ರಚಾರ ನಡೆಸಿದ್ದಾರೆ, ಡಿಕೆ ಶಿವಕುಮಾರ್ ಮತ್ತು ದಿನೇಶ್ ಗುಂಡೂರಾವ್ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ,ಬಿಜೆಪಿಗಿಂತ ಶ್ರೀರಾಮುಲು ಕಾಂಗ್ರೆಸ್ ನ ಟಾರ್ಗೆಟ್ ಆಗಿದ್ದಾರೆ,
ಶ್ರೀರಾಮುಲುಗೆ ಸಂವಿಧಾನದ ಬಗ್ಗೆ ಹೆಚ್ಚಿನ ಅರಿವು ಇಲ್ಲ, ಸಾಂವಿಧಾನಿಕ ಚರ್ಚೆಗಳಲ್ಲಿ ಅವರು ಪಾಲ್ಗೋಳ್ಳುವುದಿಲ್ಲ, ಸಂವಿಧಾನ 371 ವಿಧಿಯ ಅರ್ಥ ಗೊತ್ತಿಲ್ಲ, ಅವರಿಗೆ ಸೆಕ್ಷನ್ 420 ಬಗ್ಗೆ ಮಾತ್ರ ಚೆನ್ನಾಗಿ ತಿಳಿದಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ, ಕಾಂಗ್ರೆಸ್ ಹೆಚ್ಚಿನ ನಾಯಕರನ್ನು ಬಳ್ಳಾರಿಗೆ ಕಳುಹಿಸಿದೆ, ಆದರೆ ಶ್ರೀರಾಮುಲು ತಮ್ಮ ಸಹೋದರಿ ಹಾಗೂ ಬಿಜೆಪಿ ಅಭ್ಯರ್ಥಿ ಶಾಂತಾ ಪರ ಪ್ರಚಾರಕ್ಕೆ ಸ್ಥಳೀಯ ನಾಯಕರನ್ನೇ ಅವಲಂಬಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ,ಎಸ್ ಯಡಿಯೂರಪ್ಪ ತಮ್ಮ ಪುತ್ರ ರಾಘವೇಂದ್ರ ಪರ ಶಿವಮೊಗ್ಗದಲ್ಲಿ ಪ್ರಚಾರ ಕಾರ್ಯದಲ್ಲಿ ಮಗ್ನರಾಗಿದ್ದಾರೆ, ಹೀಗಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್,ಕೆ,ಎಸ್ ಈಶ್ವರಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರು ಶಿವಮೊಗ್ಗದಲ್ಲಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com