ಚುನಾವಣೆ ಸ್ಥಳೀಯ ಅಭ್ಯರ್ಥಿಗಳ ಮೇಲೆ ಆಧಾರಿತ, ಫಲಿತಾಂಶಕ್ಕೆ ಹೆಚ್ಚಿನ ಮಹತ್ವವೇನಿಲ್ಲ: ಖರ್ಗೆ

ಸ್ಥಳೀಯ ಸಂಸ್ಥೆ ಚುನಾವಣೆ ಸಣ್ಣಪುಟ್ಟ ವಿಚಾರಗಳು ಹಾಗೂ ಸ್ಥಳೀಯ ಅಭ್ಯರ್ಥಿಗಳ ಮೇಲೆ ಆಧಾರಿತವಾಗಿದ್ದು, ಚುನಾವಣಾ ಫಲಿತಾಂಶವು ಅಂತಹ ದೊಡ್ಡ ಮಹತ್ವವೇನಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಸೋಮವಾರ ಹೇಳಿದ್ದಾರೆ...
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆ ಸಣ್ಣಪುಟ್ಟ ವಿಚಾರಗಳು ಹಾಗೂ ಸ್ಥಳೀಯ ಅಭ್ಯರ್ಥಿಗಳ ಮೇಲೆ ಆಧಾರಿತವಾಗಿದ್ದು, ಚುನಾವಣಾ ಫಲಿತಾಂಶವು ಅಂತಹ ದೊಡ್ಡ ಮಹತ್ವವೇನಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಸೋಮವಾರ ಹೇಳಿದ್ದಾರೆ. 
ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಪ್ರಕಟಗೊಂಡಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕಾಂಗ್ರೆಸ್ ಹಿಂದುಳಿದಿಲ್ಲ, ಜಾತ್ಯಾತೀತ ಮತಗಳನ್ನು ಸಂಯೋಜಿಸಿದರೆ ನೇರ-ನೇರ ಹಣಾಹಣಿ ಇದೆ. ಈ ಚುನಾವಣೆ ಸಣ್ಣಪುಟ್ಟ ವಿಚಾರಗಳು ಹಾಗೂ ಸ್ಥಳೀಯ ಅಭ್ಯರ್ಥಿಗಳ ಮೇಲೆ ಆಧಾರಿತವಾಗಿದ್ದು, ಚುನಾವಣಾ ಫಲಿತಾಂಶವು ಅಂತಹ ದೊಡ್ಡ ಮಹತ್ವವನಲ್ಲ ಎಂದು ಹೇಳಿದ್ದಾರೆ. 
ರಾಜ್ಯ ಸ್ಥಳೀಯ ಸಂಸ್ಥೆ ಚುನಾವಣಾ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಇದುವರೆಗೂ ಬಂದಿರುವ ಫಲಿತಾಂಶದಂತೆ ಕಾಂಗ್ರೆಸ್ 846 ಸ್ಥಾನಗಳಲ್ಲಿ ಗೆಲುವು ದಾಖಲಿಸುವುದರೊಂದಿಗೆ ಮುನ್ನಡೆ ಕಾಯ್ದುಕೊಂಡಿದೆ.
2664 ಸ್ಥಾನಗಳ ಪೈಕಿ  2267 ಸ್ಥಾನಗಳ ಫಲಿತಾಂಶ ಈಗಾಗಲೇ ಪ್ರಕಟಗೊಂಡಿದ್ದು,  ಕಾಂಗ್ರೆಸ್ 846 ಸ್ಥಾನಗಳಲ್ಲಿ ವಿಜಯ ಸಾಧಿಸಿದೆ. ಬಿಜೆಪಿ 788 ಹಾಗೂ ಜೆಡಿಎಸ್ 307 ಸ್ಥಾನಗಳಲ್ಲಿ ಜಯ ಗಳಿಸಿದ್ದರೆ ಉಳಿದ  ಸ್ಥಾನಗಳಲ್ಲಿ ಸ್ವತಂತ್ರ  ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com