ಮೂರು ಸಲ ನಿಮ್ಮವರೇ ಬಿಬಿಎಂಪಿ ಮೇಯರ್, ಒಂದು ವರ್ಷ ನಮಗೂ ಕೊಡಿ: 15 ಸೀಟು ಹೊಂದಿರುವ ಜೆಡಿಎಸ್ ಪಟ್ಟು!

: 224 ವಿಧಾನಸಭೆ ಕ್ಷೇತ್ರಗಳ ಪೈಕಿ ಕೇವಲ 36 ಸೀಟುಗಳನ್ನು ಗೆದ್ದಿದ್ದ ಜೆಡಿಎಸ್ ಸರ್ಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಸದ್ಯ. 198 ಬಿಬಿಎಂಪಿ ...
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ
ಬೆಂಗಳೂರು: 224 ವಿಧಾನಸಭೆ ಕ್ಷೇತ್ರಗಳ ಪೈಕಿ ಕೇವಲ 36 ಸೀಟುಗಳನ್ನು ಗೆದ್ದಿದ್ದ ಜೆಡಿಎಸ್ ಸರ್ಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಸದ್ಯ. 198  ಬಿಬಿಎಂಪಿ ಸದಸ್ಯರಲ್ಲಿ ಕೇವಲ 15 ಸದಸ್ಯರನ್ನು ಹೊಂದಿರುವ ಜೆಡಿಎಸ್ ಮೇಯರ್ ಹುದ್ದೆಗಾಗಿ ಹವಣಿಸುತ್ತಿದೆ.
ಮೇಯರ್ ಸಂಪತ್ ರಾಜ್ ಅಧಿಕಾರ ಸೆಪ್ಟಂಬರ್ ಗೆ ಅಂತ್ಯಗೊಳ್ಳಲಿದ್ದು, ಈ ಬಾರಿ ತನಗೆ ಮೇಯರ್ ಪಟ್ಟ ನೀಡಬೇಕೆಂದು ಜೆಡಿಎಸ್ ಪಣ ತೊಟ್ಟಿದೆ, ಕಳೆದ ಮೂರು ವರ್ಷಗಳಿಂದ ಜೆಡಿಎಸ್ ಕಾಂಗ್ರೆಸ್ ಗೆ ಬೆಂಬಲ ನೀಡಿದೆ, ಕೇವಲ ಒಂದೇ ಒಂದು ವರ್ಷ ಮಾತ್ರ ನಾವು ಕೇಳುತ್ತಿದ್ದೇವೆ, ಕಾಂಗ್ರೆಸ್ ಉಪಮೇಯರ್ ಹುದ್ದೆ ಇಟ್ಟುಕೊಳ್ಳಲಿ. ಈ ಸಂಬಂಧ ಶೀಘ್ರವೇ ಚರ್ಚೆ ನಡೆಸಲಾಗುವುದು ಎಂದು ಜೆಡಿಎಸ್ ಶಾಸಕ ಕೆ,ಗೋಪಾಲಯ್ಯ ಹೇಳಿದ್ದಾರೆ.
ಜೆಡಿಎಸ್ ನಿಂದ 7 ಮಂದಿ ಕಾರ್ಪೋರೇಟರ್ ಗಳಿದ್ದಾರೆ, ಅದರಲ್ಲಿ ಮಾಜಿ ಉಪ ಮೇಯರ್ ಹೇಮಲತಾ ಪ್ರಬಲ ಆಕಾಂಕ್ಷಿಯಾಗಿದ್ದಾರೆ, 
ಕಾಂಗ್ರೆಸ್ ನಿಂದ ಮಹಿಳಾ ಕಾರ್ಪೋರೇಟರ್ ಗಳಿದ್ದು, ಶಾಂತಿನಗರದ ಸೌಮ್ಯ ಶಾಂತಕುಮಾರ್,  ಮತ್ತು ಜಯನಗರ ವಾರ್ಡ್ ನ ಗಂಗಾಂಬಿಕೆ ಪ್ರಮುಖರಾಗಿದ್ದಾರೆ,ಇಬ್ಬರು ಲಿಂಗಾಯತ ಸಮುದಾಯಕ್ಕ ಸೇರಿದವರಾಗಿದ್ದಾರೆ, ಕಳೆದ 20 ವರ್ಷಗಳಿಂದ ಬಿಬಿಎಂಪಿಯಲ್ಲಿ ಈ ಸಮುದಾಯಕ್ಕೆ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ.
ಜೆಡಿಎಸ್ ಗೆ ಮೇಯರ್ ಹುದ್ದೆ ನೀಡುವ ಸಂಬಂಧ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಎಂ ಶಿವರಾಜ್, ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ 259 ಮಂದಿ ಮತದಾನ ಮಾಡಬೇಕು, ಜೆಡಿಎಸ್ ಮತ್ತು ಸ್ವತಂತ್ರ್ಯ ಅಭ್ಯರ್ಥಿಗಳೆಲ್ಲಾ ಒಗ್ಗೂಡಿದರೇ ನಮಗೆ 137 ಮತಗಳಾಗುತ್ತವೆ. ಬಿಜೆಪಿ 122 ಮತಗಳನ್ನು ಹೊಂದಿದೆ, 
ಮತ್ತೊಂದೆಡೆ ಬಿಜೆಪಿ ಕೂಡ ತನ್ನ ಅದೃಷ್ಟ ಪರೀಕ್ಷೆಗಿಳಿಯಲಿದೆ, ಕಾಂಗ್ರೆಸ್ ನಲ್ಲಿ ಎಷ್ಟು ಮೌಲ್ಯಯುತ ಮತಗಳಿವೆ ಎಂಬುದು ಗೊತ್ತಿಲ್ಲ, ನಾವು ಕೂಡ ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ಬಿಜೆಪಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com