ಸಿಎಂ ರಾಮನಿದ್ದಂತೆ, ರೇವಣ್ಣ ಆಂಜನೇಯ, ಸೀತೆ ಮಾತ್ರ ಬರಬೇಕಾಗಿದೆ; ಸಚಿವ ಜಿಟಿ ದೇವೇಗೌಡ

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ರಾಮನಿದ್ದ ಹಾಗೆ, ಸಚಿವ ಹೆಚ್ ಡಿ ರೇವಣ್ಣ ಆಂಜನೇಯ ....
ಅನಿತಾ ಕುಮಾರಸ್ವಾಮಿ, ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಜಿ ಟಿ ದೇವೇಗೌಡ(ಸಂಗ್ರಹ ಚಿತ್ರ)
ಅನಿತಾ ಕುಮಾರಸ್ವಾಮಿ, ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಜಿ ಟಿ ದೇವೇಗೌಡ(ಸಂಗ್ರಹ ಚಿತ್ರ)
Updated on: 

ರಾಮನಗರ: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ರಾಮನಿದ್ದ ಹಾಗೆ, ಸಚಿವ ಹೆಚ್ ಡಿ ರೇವಣ್ಣ ಆಂಜನೇಯ ಇದ್ದಂತೆ, ಇಲ್ಲಿಗೆ ಸೀತಾಮಾತೆ ಬರಬೇಕಾಗಿದೆ ಎಂದು ಸಚಿವ ಜಿ ಟಿ ದೇವೇಗೌಡ ಹೇಳಿದ್ದಾರೆ.

ಅವರು ನಿನ್ನೆ ರಾಮನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ  ರಾಮನಿದ್ದ ಹಾಗೇ, ಸಚಿವ ರೇವಣ್ಣ ಆಂಜನೇಯನಿದ್ದ ಹಾಗೇ. ರಾಮನಗರ ಕ್ಷೇತ್ರದಲ್ಲಿ ಈಗ ಸೀತೆ ಮಾತ್ರ ಬರಬೇಕಾಗಿದೆ, ಸೀತೆಯನ್ನು ತರುವ ಜವಾಬ್ದಾರಿ ರಾಮನಗರ ಜಿಲ್ಲೆಯ ಜನತೆ ಮೇಲಿದೆ ಎಂದು ಪರೋಕ್ಷವಾಗಿ ಅನಿತಾ ಕುಮಾರಸ್ವಾಮಿಯವರನ್ನು ಗೆಲ್ಲಿಸಿ ಎಂದು ಕರೆ ನೀಡಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ. ಅವರು ರಾಮನಿದ್ದಂತೆ. ಲಕ್ಷ್ಮಣ ಮೂರ್ಛೆ ಹೋದಾಗ ಯಾರಿಂದಲೂ ಬದುಕಿಸಲು ಸಾಧ್ಯವಾಗಲಿಲ್ಲ. ಆಗ ಆಂಜನೇಯ ಮೇರು ಪರ್ವತಕ್ಕೆ ಹೋಗಿ ಸಂಜೀವಿನಿಯನ್ನು ತಂದು ಲಕ್ಷ್ಮಣನ ಮೇಲೆ ಪ್ರೋಕ್ಷಿಸಿದಾಗ ಮತ್ತೆ ಪ್ರಜ್ಞೆ ಬಂದು ಬದುಕಿದರು. ಇಲ್ಲಿ ರೇವಣ್ಣ ಅವರು ಆಂಜನೇಯ ಇದ್ದಂತೆ, ರಾಮನಗರ ಜನತೆ ಸುಭಿಕ್ಷವಾಗಿ ಇರಬೇಕಾದರೆ ಒಂದು ಕಡೆ ರಾಮ ಇನ್ನೊಂದು ಕಡೆ ಆಂಜನೇಯ, ಇನ್ನು ಸೀತಾಮಾತೆ ಬರಲು ಮಾತ್ರ ಬಾಕಿ ಇರುವುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com