ಕೇಂದ್ರದ ಹಾಡಹಗಲ ದರೋಡೆ ವಿರುದ್ಧ ಭಾರತ್ ಬಂದ್: ಕಾಂಗ್ರೆಸ್

ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಮಾಡಿ ಹಾಡಹಗಲು ದರೋಡೆ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಭಾರತ್ ಬಂದ್ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ...
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
ಬೆಂಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಮಾಡಿ ಹಾಡಹಗಲು ದರೋಡೆ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಭಾರತ್ ಬಂದ್ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ. 
ಭಾರತ್ ಬಂದ್ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಬಂದ್'ಗೆ ಜೆಡಿಎಸ್, ಎಡಪಕ್ಷಗಳು ಕೂಡ ಬೆಂಬಲಿಸಿವೆ. ರಾಜ್ಯದಲ್ಲಿ ಹಲವು ಸಂಘಟನೆಗಳು ನಮಗೆ ಬೆಂಬಲಿಸಿವೆ. ವಾಟಾಳ್ ಪಕ್ಷ, ಕನ್ನಡಪರ ಸಂಘಟನೆಗಳು, ರೈತ ಸಂಘಟನೆ, ರಾಜ್ ಕುಮಾರ್ ಸಂಘ, ಓಲಾ, ಉಬರ್, ಸಾರಿಗೆ ಯೂನಿಯನ್, ಖಾಸಗಿ ಟ್ಯಾಕ್ಸಿ, ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಸೇರಿದಂತೆ ಹಲವು ಸಂಘಟನೆಗಳು ಬಂದ್'ಗೆ ಬೆಂಬಲ ವ್ಯಕ್ತಪಡಿಸಿವೆ ಎಂದು ಹೇಳಿದ್ದಾರೆ. 
ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿರುವ ಮೋದಿ ಸರ್ಕಾರ, ಜನರಿಂದ ರೂ.11 ಲಕ್ಷ ಕೋಟಿ ತೆರಿಗೆ ವಸೂಲಿ ಮಾಡಿದೆ. ಆ ಹಣ ಏನಾಯಿತು? ಕೇಂದ್ರ ಸರ್ಕಾರ ಹಾಡಹಗಲ ದರೋಡೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ. 
ನಮ್ಮದು ಅಷ್ಟೊಂದು ಕೆಟ್ಟ ಆರ್ಥಿಕತೆ ಹೊಂದಿರುವ ದೇಶವೇ. ಇಂತಹ ತೆರಿಗೆ ಮೇಲೆ ಅವಲಂಬಿತರಾಗಿ ಜನರಿಗೆ ಸಂಕಷ್ಟ ಕೊಡುವುದನ್ನು ನಾವು ಮುಂದುವರೆಸಬೇಕೇ? ದೇಶದ ಆರ್ಥಿಕತೆಯಲ್ಲಿ ಕೆಟ್ಟ ಪರಿಸ್ಥಿತಿ ಇಲ್ಲ ಎಂದಾದರೆ, ಸರ್ಕಾರವೇಕೆ ಪೆಟ್ರೋಲ್-ಡೀಸೆಲ್ ಬೆಲೆ ಕಡಿಮೆ ಮಾಡುತ್ತಿಲ್ಲ. 
ಉತ್ತಮ ಆಡಳಿತ ನೀಡುವ ಭರವಸೆ ನೀಡುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ಮೊದಲಿಗೆ ನೋಟು ನಿಷೇಧ ನಂತರ ಜಿಎಸ್'ಟಿ ಇದೀಗ ಪೆಟ್ರೋಲ್ ಬೆಲೆ. ಇವೆಲ್ಲವೂ ಸರ್ಕಾರ ವಿಫಲತೆಗೆ ಕಾರಣಗಳಾಗಿವೆ. ಇಂತಹ ವಿಚಾರಗಳ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡದೇ ಇರುವುದು ದುರಾದೃಷ್ಟಕರ ಸಂಗತಿ ಎಂದಿದ್ದಾರೆ. 
ಇದೇ ವೇಳೆ ರೈತರ ಸಾಲ ಮನ್ನಾ ಮಾಡುವುದಕ್ಕಾಗಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಾಡಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ರೈತರಿಗೆ ಸಹಾಯ ಮಾಡುವ ಪ್ರಮುಖ ಉದ್ದೇಶಗಳಿಗೆ ಬೆಲೆ ಏರಿಕೆ ಮಾಡಲಾಗುತ್ತಿದೆ. ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯ ತೆರಿಗೆ ಹೆಚ್ಚಿಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com