ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದ ರಕ್ಷಕ: ಅವರ ಬೆಂಬಲದೊಂದಿಗೆ 5 ವರ್ಷ ಪೂರ್ಣ: ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಜೆಡಿಎಸ್‌-ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರದ ರಕ್ಷಕರು. ಅವರ ಸಹಕಾರ-ಬೆಂಬಲದೊಂದಿಗೆ ಸರ್ಕಾರ...
ಎಚ್.ಡಿ ಕುಮಾರ ಸ್ವಾಮಿ ಮತ್ತು ಸಿದ್ದರಾಮಯ್ಯ
ಎಚ್.ಡಿ ಕುಮಾರ ಸ್ವಾಮಿ ಮತ್ತು ಸಿದ್ದರಾಮಯ್ಯ
ಕಲಬುರಗಿ: ಮಾಜಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಲವರು ವಿಲನ್ ತರ ಬಿಂಬಿಸುತ್ತಿದ್ದಾರೆ, ಆದರೆ ಸಿದ್ದರಾಮಯ್ಯ ಅವರೇ ಸಮ್ಮಿಶ್ರ ಸರ್ಕಾರದ ರಕ್ಷಕರು. ಅವರ ಸಹಕಾರ-ಬೆಂಬಲದೊಂದಿಗೆ ಸರ್ಕಾರ ಐದು ವರ್ಷ ಮುನ್ನಡೆಯಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಸುಭದ್ರವಾಗಲು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಪಾತ್ರ ದೊಡ್ಡದಿದೆ. ಸ್ವತಃ ಅವರೇ ಸರ್ಕಾರದ ರಕ್ಷಕರಾಗಿದ್ದಾರೆ. ಹೀಗಿದ್ದರೂ ಪ್ರಸಕ್ತ ರಾಜಕೀಯ ಬೆಳವಣಿಗೆಯಲ್ಲಿ ಅನಾವಶ್ಯಕವಾಗಿ ಅವರ ಹೆಸರು ಎಳೆಯಲಾಗುತ್ತಿದೆ ಎಂದರು.
ಸರ್ಕಾರವನ್ನು ಅಸ್ಥಿರಗೊಳಿಸಲು ಯಾರು ಯತ್ನಿಸುತ್ತಿದ್ದಾರೆ ಎಂಬುದು ನಾಡಿಗೆ ಗೊತ್ತಿದೆ. ಬಿಜೆಪಿ ಈ ನಿಟ್ಟಿನಲ್ಲಿ ವ್ಯರ್ಥ ಕಸರತ್ತು ಮಾಡುತ್ತಿದೆ. ಆದರೆ ಸರ್ಕಾರ ರಕ್ಷಣೆ ಮಾಡಿಕೊಳ್ಳುವುದು ಹೇಗೆ ಎಂಬುದು ಗೊತ್ತಿದೆ. ಅಕ್ಟೋಬರ್ 2 ರೊಳಗೆ ಸಮ್ಮಿಶ್ರ ಸರ್ಕಾರ ಬೀಳುತ್ತದೆ ಎಂದು ಕೆಲವು ಮಾಧ್ಯಮಗಳಲ್ಲಿ ಹೈಲೈಟ್ ಮಾಡಲಾಗುತ್ತಿದೆ, ನಂತರ ದಸರಾವರೆಗೆ ಅವರು ಡೆಡ್ ಲೈನ್ ವಿಸ್ತರಿಸುತ್ತಾರೆ ಎಂಬುದು ನನದೆ ತಿಳಿದಿದೆ ಎಂದು ಹೇಳಿದ್ದಾರೆ,.
ಸಚಿವ ರಮೇಶ ಜಾರಕಿಹೊಳಿ ನಿರಂತರವಾಗಿ ತಮ್ಮ ಸಂಪರ್ಕದಲ್ಲಿದ್ದಾರೆ, ಅವರು ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com