ವಿಷ್ಣುದಾದ ಹುಟ್ಟುಹಬ್ಬದ ದಿನ ಹೊಸ ರಾಜಕೀಯ ಪಕ್ಷ ಘೋಷಿಸಿದ ಉಪೇಂದ್ರ!

ಸ್ಯಾಂಡಲ್ವುಡ್ ನ ರಿಯಲ್ ಸ್ಟಾರ್ ಕಂ ರಾಜಕಾರಣಿ ಉಪೇಂದ್ರ ಅವರು ಸಾಹಸಸಿಂಹ ವಿಷ್ಣುವರ್ಧನ ಹುಟ್ಟುಹಬ್ಬದ ದಿನವೇ ತಮ್ಮ ಹೊಸ ರಾಜಕೀಯ ಪಕ್ಷ ಉತ್ತಮ...
ಉಪೇಂದ್ರ
ಉಪೇಂದ್ರ
Updated on
ಬೆಂಗಳೂರು: ಸ್ಯಾಂಡಲ್ವುಡ್ ನ ರಿಯಲ್ ಸ್ಟಾರ್ ಕಂ ರಾಜಕಾರಣಿ ಉಪೇಂದ್ರ ಅವರು ಸಾಹಸಸಿಂಹ ವಿಷ್ಣುವರ್ಧನ ಹುಟ್ಟುಹಬ್ಬದ ದಿನವೇ ತಮ್ಮ ಹೊಸ ರಾಜಕೀಯ ಪಕ್ಷ ಉತ್ತಮ ಪ್ರಜಾಕೀಯ ಪಕ್ಷವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. 
ವಿಷ್ಣುವರ್ದನ್ ಹಾಗೂ ಉಪೇಂದ್ರ ಅವರ ಹುಟ್ಟಿದ ದಿನ ಒಂದೇ ಆಗಿದ್ದು ತಮ್ಮ ಹುಟ್ಟುಹಬ್ಬದ ಕಾರ್ಯಕ್ರಮದ ಜೊತೆಗೆ ಉಪೇಂದ್ರ ಹೊಸ ಪಕ್ಷವನ್ನು ಘೋಷಿಸಿದ್ದಾರೆ. 
ಹೊಸ ಪಕ್ಷ ಘೋಷಣೆ ಬಳಿಕ ಮಾತನಾಡಿದ ಉಪೇಂದ್ರ, ನಾವೆಲ್ಲರೂ ಪೇಪರ್ ಯುಗದಲ್ಲಿದ್ದು ಡಿಜಿಟಲ್ ಯುಗಕ್ಕೆ ಹೆಜ್ಜೆಯಿಡಬೇಕಾಗಿದೆ. ನನ್ನ ಎಲ್ಲ ಕಲ್ಪನೆಗಳು ಕಾರ್ಯರೂಪಕ್ಕೆ ಬರುತ್ತವೆ ಎಂದು ಹೇಳುತ್ತಿಲ್ಲ. ಹಾಗಂತ ನಾವು ಪಯತ್ನಿಸದೇ ಇರೋಕೆ ಆಗುವುದಿಲ್ಲ ಎಂದು ಹೇಳಿದರು. 
ಯುಪಿಪಿ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಉಪೇಂದ್ರ ಪಿಪಿಟಿ ಸ್ಲೈಡ್ ಗಳ ಮೂಲಕ ವಿವರಿಸಿದರು. ಪಕ್ಷಕ್ಕೆ ಸೇರ ಬಯಸುವವರು ತಮ್ಮ ಕ್ಷೇತ್ರಗಳ ಸಮಸ್ಯೆಗಳು ಅವುಗಳನ್ನು ಬಗೆಹರಿಸುವ ವಿಧಗಳು, ತಗಲುವ ವೆಚ್ಚದ ಬಗ್ಗೆ ವಿಡಿಯೋ ಮಾಡಿ ಯುಪಿಪಿ ವೆಬ್ ಸೈಟ್ ಗೆ ಕಳುಹಿಸಬೇಕು. ಹೀಗೆ ಬಂದ ಮಾಹಿತಿಗಳನ್ನು ಪಕ್ಷದ ವಾಲೆಂಟರ್ಸ್ ಜತೆ ಚರ್ಚಿಸಿ, ಆಯ್ದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com