ರಾಜ್ಯ ರಾಜಕೀಯದಲ್ಲಿ ಆಪರೇಷನ್ ಕಮಲದ ಕಾರ್ಮೋಡ ಕವಿದಿರುವ ನಡುವಲ್ಲೇ ಶೃಂಗೇರಿ ಮಠಕ್ಕೆ ಶನಿವಾರ ಭೇಟಿ ನೀಡಿದ ಹೆಚ್.ಡಿ.ದೇವೇಗೌಡ ಕುಟುಂಬ ಶಾರದಾಂಬೆಯ ದರ್ಶನ ಪಡೆದು ಹೋಮ ನಡೆಸಿ ವಿಶೇಷ ಪೂಜೆ ಸಲ್ಲಿಸಿದರು...
ಚಿಕ್ಕಮಗಳೂರು: ರಾಜ್ಯ ರಾಜಕೀಯದಲ್ಲಿ ಆಪರೇಷನ್ ಕಮಲದ ಕಾರ್ಮೋಡ ಕವಿದಿರುವ ನಡುವಲ್ಲೇ ಶೃಂಗೇರಿ ಮಠಕ್ಕೆ ಶನಿವಾರ ಭೇಟಿ ನೀಡಿದ ಹೆಚ್.ಡಿ.ದೇವೇಗೌಡ ಕುಟುಂಬ ಶಾರದಾಂಬೆಯ ದರ್ಶನ ಪಡೆದು ಹೋಮ ನಡೆಸಿ ವಿಶೇಷ ಪೂಜೆ ಸಲ್ಲಿಸಿದರು.
ಬೆಳಿಗ್ಗೆ 8.30ಕ್ಕೆ ತಂದೆ ಹೆಚ್.ಡಿ.ದೇವೇಗೌಡ, ತಾಯಿ ಚೆನ್ನಮ್ಮ, ಸಹೋದರ ಹೆಚ್.ಡಿ.ರೇವಣ್ಣ ಹಾಗೂ ಪತ್ನಿ ಅನಿತಾ ಅವರೊಂದಿಗೆ ಮಠದ ಚಂದ್ರಸೇಖರ ಭಾರತೀ ಸಭಾಂಗಣದಲ್ಲಿ ಆಯೋಜಿಸಿದ್ದ ಮೃತ್ಯುಂಜಯ ಹೋಮ, ಪ್ರತಿಕ್ರಿಯಾ ಶೂಲಿನಿ ಯಾಗದಲ್ಲಿ ಕುಮಾರಸ್ವಾಮಿಯವರು ಪಾಲ್ಗೊಂಡರು.
ನಂತರ ಮಠದ ನರಸಿಂಹವನದ ಗುರು ನಿವಾಸಕ್ಕೆ ತೆರಳಿ ಜಗದ್ಗುರು ಭಾರತೀ ತೀರ್ಥರು ಹಾಗೂ ಕಿರಿತ ಜಗದ್ಗುರು ವಿಧುಶೇಖರ ಭಾರತೀ ತೀರ್ಥರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಬಳಿಕ ಶಾರದಾಂಬೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಶಂಕರಾಚಾರ್ಯ, ತೋರಣಗಣಪತಿ, ವಿದ್ಯಾಶಂಕರ ದೇಗುಲಗಳಿಗೆ ತೆರಳಿ ದರ್ಶನ ಪಡೆದರು. ಚುನಾವಣೆಗೂ ಮೊದಲು ಜನವರಿಯಲ್ಲಿ ಶೃಂಗೇರಿ ಮಠದಲ್ಲಿ ದೇವೇಗೌಡರ ಕುಟುಂಬ ಅತಿರುದ್ಧ ಮಹಾಯಾ ಕೈಗೊಂಡಿತ್ತು.