ಹಾಸನಕ್ಕೆ ತೆರಳುವ ಮುನ್ನ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಇಂತಹ ಗೂಂಡಾಗಿರಿ ಜೆಡಿಎಸ್ಗೆ ಶೋಭೆ ತರುವಂತಹದ್ದಲ್ಲ. ಈ ಘಟನೆಯನ್ನು ನಾವು ಖಂಡಿಸುತ್ತೇವೆ. ನಾವು ಇಂದು ಎಲ್ಲ ಸದಸ್ಯರು ಈಗಲೇ ಹಾಸನಕ್ಕೆ ತೆರಳುತ್ತಿದ್ದೇವೆ. ಪ್ರೀತಂಗೌಡ ಕುಟುಂಬ ಸದಸ್ಯರು, ಘಟನೆಯಲ್ಲಿ ಗಾಯಗೊಂಡ ಕಾರ್ಯಕರ್ತನನ್ನು ಮಾತನಾಡಿಸುತ್ತೇವೆ. ನಂತರ ಬೃಹತ್ ಪ್ರತಿಭಟನೆಯನ್ನು ಮಾಡಲಿದ್ದೇವೆ. ಈ ವಿಚಾರವನ್ನು ನಾವು ಇಲ್ಲಿಗೆ ಬಿಡುವುದಿಲ್ಲ. ಇದರ ಪ್ರತಿಫಲವನ್ನು ಜೆಡಿಎಸ್ ಅನುಭವಿಸಲೇಬೇಕು ಎಂದು ಎಚ್ಚರಿಕೆ ನೀಡಿದರು.