ತೇಜಸ್ವಿನಿ ಅನಂತ್ ಕುಮಾರ್
ರಾಜಕೀಯ
ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಲು ಸಿದ್ದ: ಮನ್ ಕಿ ಬಾತ್ ನಲ್ಲಿ ತೇಜಸ್ವಿನಿ ಅನಂತ್ ಕುಮಾರ್ ನುಡಿ
ಕೇಂದ್ರ ಸಚಿವ ಎಚ್.ಎನ್. ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸುವ ಸೂಚನೆ ನೀಡಿದ್ದಾರೆ.
ಬೆಂಗಳೂರು: ಕೇಂದ್ರ ಸಚಿವ ಎಚ್.ಎನ್. ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸುವ ಸೂಚನೆ ನೀಡಿದ್ದಾರೆ. ಅವರು ಭಾನುವಾರ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ.
ಬೆಂಗಳೂರು ದಕ್ಷೀಣ ಕ್ಷೇತ್ರದಲ್ಲಿ ಬಿಜೆಪಿ ಸಧ್ಯ ಯಾವುದೇ ದೊಡ್ಡ ನಾಯಕನ ಕೊರತೆಯನ್ನೆದುರಿಸುತ್ತಿದೆ. 1996ರಿಂದ ಈ ಕ್ಷೇತ್ರವನ್ನು ಅನಂತ್ ಕುಮಾರ್ ಪ್ರತಿನಿಧಿಸುತ್ತಿದ್ದರು.ಕೆಲ ತಿಂಗಳ ಹಿಂದೆ ಅವರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಲೋಕಸಭೆಯಲ್ಲಿ ನೀವು ಸ್ಪರ್ಧಿಸಲು ಸಿದ್ದರಿದ್ದೀರಾ ಎಂದು ತೇಜಸ್ವಿನಿಯವರನ್ನು ಕೇಳಲಾಗಿ "ನಾನೆಂದೂ ಇಲ್ಲ ಎಂದಿಲ್ಲ" ಅವರು ಹೇಳಿದ್ದಾರೆ.
ಬೃಹತ್ ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕರು ಹಾಗೂ ಕಾರ್ಪೋರೇಟರ್ ಗಳೊಡನೆ ಅವರು ಉತ್ತಮ ಸಂಬಂಧ ಹೊಂದಿದ್ದಾರೆ.ಕಳೆದ ಐದು ಚುನಾವಣೆಗಳಲ್ಲಿ ನಾನು ಪ್ರಚಾರ ನಡೆಸಿದ್ದೇನೆ.ಅನಂತ್ ಕುಮಾರ್ ಗೆ ಬೆಂಬಲವಾಗಿ ನಿಂತಿದ್ದೇನೆ. ಅವರು ಸದಾ ಕಾಲಾ ಕೆ;ಲಸದಲ್ಲಿ ನಿರತರಾಗಿದ್ದಾಗಲೂ ನಾನು ಅವರೊಡನೆ ಇದ್ದೆ. ವಿ ಸೋಮಣ್ಣ (ಗೋವಿಂದರಾಜನಗರ)), ರವಿ ಸುಬ್ರಹ್ಮಣ್ಯ (ಬಸವಂಗುಡಿ), ಉದಯ್ ಗರುಡಚಾರ್ (ಚಿಕ್ಕಪೇಟೆ), ಸತೀಶ್ ರೆಡ್ಡಿ (ಬೊಮ್ಮನಹಳ್ಳಿ) ಮತ್ತು ಆರ್ ಅಶೋಕ (ಪದ್ಮನಾಭನಗರ್) ಮತ್ತು ಕ್ಷೇತ್ರದ 40ಕ್ಕೆ ಹೆಚ್ಚು ಕಾರ್ಪೋರೇಟರ್ ಗಳೊಡನೆ ನನಗೆ ಉತ್ತಮ ಒಡನಾಟವಿದೆ."
"ನಾನೊಂದು ವೇಳೆ ಅಧಿಕೃತ ಅಭ್ಯರ್ಥಿಯಾಗಿದ್ದರೆ ನನಗೆ "ತಂತ್ರಜ್ಞಾನ, ಸಂಸ್ಕೃತಿ ಮತ್ತು ಪ್ರಕೃತಿ." ಪ್ರಮುಖ ಆದ್ಯತೆಗಳಾಗಿರಲಿದೆ" ತೇಜಸ್ವಿನಿ ಹೇಳಿದ್ದಾರೆ.
ಬೆಂಗಳೂರು ಐಟಿ ರಾಜಧಾನಿ ಮಾತ್ರವಲ್ಲ, ಸಂಸ್ಕೃತಿಯ ರಾಜಧಾನಿಯಾಗಬೇಕು.ನಮ್ಮ ಪ್ರಕೃತಿಯನ್ನು ನಾವು ಪ್ರೀತಿಯಿಂದ ಕಾಪಾಡಿಕೊಳ್ಳಬೇಕಿದೆ. ನಾನು ಬೆಂಗಳೂರು ದಕ್ಷಿಣದಲ್ಲಿರುವ 60 ಬಿಬಿಎಂಪಿ ವಾರ್ಡ್ ಗಳಲ್ಲಿ 165 ಗಿಂತ ಹೆಚ್ಚು ಮರ, ಗಿಡಗಳ ನೇಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ನಾವು ಸುಮಾರು 50,000 ಜನರಿಗೆ ಆಹಾರವನ್ನು ಒದಗಿಸುವ ಅದಮ್ಯ ಚೇತನ ಝೀರೋ ವೇಸ್ಟೇಜ್ ಕಿಚನ್ ನಿರ್ವಹಿಸಿದ್ದೇನೆ. ಎಂದು ಅವರು ಹೇಳಿದ್ದಾರೆ.
ಇನ್ನು ಪ್ರಚಾರದ ಕುರಿತು ಮಾತನಾಡಿದ ಅವರು "ನಾನೀಗಾಗಲೇ ಮೋದಿ ಪರ ಪ್ರಚಾರ ಪ್ರಾರಂಭಿಸಿದ್ದೇನೆ" ಎಂದರು.
ಮನ್ ಕಿ ಬಾತ್ ನಲ್ಲಿ ಭಾಗವಹಿಸಿದ ಮೇಲೆ, "ನಾನು ಈ ಕಾರ್ಯಕ್ರಮದ ಉತ್ತಮ ಕೇಳುಗಳಾಗಿದ್ದೇನೆ.ನನ್ನನ್ನು ಡಿವಿ ಸದಾನಂದ ಗೌಡ ಅವರು ಆಹ್ವಾನಿಸಿದ್ದಾರೆ." ಎಂದು ಅವರು ಹೇಳಿದ್ದಾರೆ.

