ಫೆ.6ರಿಂದ ಬಜೆಟ್ ಅಧಿವೇಶನ: ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಬಿಜೆಪಿ ಸಜ್ಜು

ಫೆಬ್ರವರಿ 6ರಿಂದ ಪ್ರಾರಂಭವಾಗುವ ರಾಜ್ಯ ಶಾಸನ ಸಭೆಯ ಬಜೆಟ್ ಅಧಿವೇಶ ಹಲವಾರು ಬಗೆಯ ಬೆಳವಣಿಗೆಗಳಿಗೆ ಸಾಕ್ಷಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಫೆಬ್ರವರಿ 6ರಿಂದ ಪ್ರಾರಂಭವಾಗುವ ರಾಜ್ಯ ಶಾಸನ ಸಭೆಯ ಬಜೆಟ್ ಅಧಿವೇಶ ಹಲವಾರು ಬಗೆಯ ಬೆಳವಣಿಗೆಗಳಿಗೆ ಸಾಕ್ಷಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ರಾಜ್ಯ ಕಾಂಗ್ರೆಸ್ ನ ಆಂತರಿಕ ಜಗಳ ಸೇರಿದಂತೆ ಹಲವಾರು ವಿಚಾರಗಳನ್ನಿಟ್ಟು ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಮುಜುಗರಕ್ಕೀಡುಮಾಡುವ ಸಾಧ್ಯತೆ ಇದೆ. 
ಬಳ್ಳಾರಿ ಜಿಲ್ಲೆ ಕಂಪ್ಲಿ ಶಾಸಕರಾದ ಜೆ.ಎನ್. ಗಣೇಶ್ ತಮ್ಮ ಪಕ್ಷದ ಶಾಸಕರಾದ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದು ಅವರ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದ ಬೆನ್ನಲ್ಲೇ ತಲೆಮರೆಸಿಕೊಂಡಿದ್ದಾರೆ. ಕಾಂಗ್ರೆಸ್ ಇದಾಗಲೇ ಗಣೇಶ್ ಅವರನ್ನು ಪಕ್ಷದಿಂದ ಅಮಾನತು ಮಾಡಿದೆ. ಆನಂದ್ ಸಿಂಗ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಹೊಂದುತ್ತಿದ್ದಾರೆ.ಕಾಂಗ್ರೆಸ್ ಪಕ್ಷ ತಮ್ಮ ಶಾಸಕರನ್ನು ರೆಸಾರ್ಟ್ ನಲ್ಲಿರಿಸಿದ್ದ ವೇಳೆ ನಡೆದ ಈ ಘಟನೆ ಸಂಬಂಧ ಸದನದಲ್ಲಿ ಸರ್ಕಾರ ವಿವರಣೆ ನಿಡಬೇಕೆಂದು ಪ್ರತಿಪಕ್ಷ ಬಿಜೆಪಿ ಒತ್ತಾಯಿಸಲಿದೆ ಎಂದು ಹೇಳಲಾಗಿದೆ.
"ಕಾಂಗ್ರೆಸ್ ಎಂಎಲ್ಎಗಳ ಹೊಡೆದಾಟ, ಬರ ನಿರ್ವಹಣೆಗೆ ವಿಫಲವಾಗಿರುವ ಸರ್ಕಾರ, ಸಿದ್ದಗಂಗಾ ಶ್ರೀಗಳ ನಿಧನದ ಬಳಿಕ ಸರ್ಕಾರ ಶೋಕಾಚರಣೆ ಘೋಷಿಸಿದ್ದರೂ ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮ ಆಯ್ಯೋಜಿಸಿದ್ದು, ವಿಧಾನಸೌಧದಲ್ಲಿ ವಶಪಡಿಸಿಕೊಳ್ಳಲ್ಆಗಿರುವ ಹಣ ಸೇರಿ ಹಲವಾರು ವಿಚಾರಗಳನ್ನೆತ್ತಿ ಸಮ್ಮಿಶ್ರ ಸರ್ಕಾರದಿಂದ ಉತ್ತರಗಳನ್ನು ಪಡೆಯುವ ಉದ್ದೇಶವಿದೆ" ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಎಂಎಲ್ಸಿ ಎನ್ ರವಿ ಕುಮಾರ್ ಹೇಳಿದ್ದಾರೆ.
ಕಳೆದ ಕೆಲವು ವಾರಗಳಲ್ಲಿನ ಬೆಳವಣಿಗೆಗಳು ಸಮ್ಮಿಶ್ರ ಸರ್ಕಾರದ ಅಂಗಪಕ್ಷಗಳಲ್ಲಿ ವಿಶೇಷವಾಗಿ ಕಾಂಗ್ರೆಸ್ ಗೆ ಮುಜುಗರ ತಂದಿದೆ.ಬಿಜೆಪಿ ತಮ್ಮ ಶಾಸಕರನ್ನು ಆಪರೇಷನ್ ಕಮಲ ಮಾಡುವ ಮೂಲಕ ಹೈಜಾಕ್ ಮಾಡುತ್ತದೆ ಎನ್ನುವ ಭೀತಿಯಿಂದ ಕಾಂಗ್ರೆಸ್ ತಮ್ಮ ಶಾಸಕರನ್ನು ರೆಸಾರ್ಟ್ ನಲ್ಲಿಟ್ಟಿತ್ತು. ಇದಕ್ಕೆ ಮುನ್ನ ಕಾಂಗ್ರೆಸ್ ಕರೆದಿದ್ದ ಸಿಎಲ್ ಪಿ ಸಭೆಗೆ ನಾಲ್ವರು ಶಾಸಕರು ಗೈರಾಗಿದ್ದರು. ಇದಾದ ಬಳಿಕ ಆನಂದ್ ಸಿಂಗ್, ಗಣೇಶ್ ನಡುವೆ ರೆಸಾರ್ಟ್ ನಲ್ಲಿ ಹೊಡೆದಾಟ ನಡೆದು ಗಣೇಶ್ ಸಿಂಗ್ ಅವರ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದರು.ಇದರಿಂದಾಗಿ ಸಮ್ಮಿಶ್ರ ಸರ್ಕಾರದ ಅಂಗಪಕ್ಷಗಳಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಬಹಿರಂಗವಾಗಿತ್ತು.
ಇನ್ನು ಅಧಿವೇಶನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ  ಪುಟ್ಟರಂಗಶೆಟ್ಟಿ ಅವರ ರಾಜೀನಾಮೆಗೆ ಒತ್ತಾಯಿಸಲು ಕೇಸರಿ ಪಕ್ಷ ತೀರ್ಮಾನಿಸಿದೆ.ಶನಿವಾರ, ಪಕ್ಷದ ಕಾರ್ಯಕರ್ತರು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.ಸಚಿವರ ಕೆಛೇರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ 25 ಲಕ್ಷ ಪಡೆದು ಸಿಕ್ಕಿಹಾಕಿಕೊಂಡಿದ್ದು ವಿಧಾನಸೌಧದಲ್ಲೇ ಸಿಕ್ಕ ಲಂಚದ ಹಣದ ತನಿಖೆಯನ್ನು ಭ್ರಷ್ಟಾಚಾರ ವಿರೋಧಿ  ದಳ ತನಿಖೆ ನಡೆಸಿದೆ.
ಅಧಿವೇಶನದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಬಗ್ಗೆ ಕಾರ್ಯತಂತ್ರವನ್ನು ಪಕ್ಷಶೀಘ್ರದಲ್ಲೇ ನಿರ್ಧರಿಸಲಿದೆ.ಎಂದು ಹಿರಿಯ ಬಿಜೆಪಿ ನಾಯಕ  ಹೇಳಿದ್ದಾರೆ.ಆದಾಗ್ಯೂ, ಸರಕಾರದ ವಿರುದ್ಧ ಯಾವುದೇ ಪ್ರತಿಭಟನೆಗಿಳಿಯಲುಇ ಪಕ್ಷ ನಿರ್ಧರಿಸುವುದಿಲ್ಲ ಎನ್ನಲಾಗಿದೆ.ಇಬ್ಬರು ಸ್ವತಂತ್ರ ಶಾಸಕರು ಇತ್ತೀಚೆಗೆ ಸಮ್ಮಿಶ್ರ ಸರ್ಕಾರಕ್ಕೆ ತಾವು ನೀಡಿದ್ದ ಬೆಂಬಲವನ್ನು ಹಿಂಪಡೆಇದ್ದಾರೆ.ಮತ್ತು ಆ ಶಾಸಕರು ತಾವು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com