ಕಾಂಗ್ರೆಸ್‌ನ ಎಲ್ಲ 78 ಶಾಸಕರೂ ನನಗೆ ಆಪ್ತರಾಗಿದ್ದಾರೆ: ಮಾಧ್ಯಮಗಳ ವಿರುದ್ಧ ಸಿದ್ದರಾಮಯ್ಯ ಕಿಡಿ

ರಾಜೀನಾಮೆ ನೀಡಿದ ಶಾಸಕರು ಸಿದ್ದರಾಮಯ್ಯ ಆಪ್ತರು ಎಂದು ಸುದ್ದಿ ಮಾಡುತ್ತಿರುವುದು ಸರಿಯಲ್ಲ ...
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on: 
ಬೆಂಗಳೂರು: ರಾಜೀನಾಮೆ ನೀಡಿದ ಶಾಸಕರು ಸಿದ್ದರಾಮಯ್ಯ ಆಪ್ತರು ಎಂದು ಸುದ್ದಿ ಮಾಡುತ್ತಿರುವುದು ಸರಿಯಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿಲ್ಲ, ನಮಗೆ ಈ ಸರ್ಕಾರದಲ್ಲಿ ವಿಶ್ವಾಸವಿಲ್ಲ, ಹಾಗಾಗಿ ಮುಂದುವರಿಯಲು ಇಷ್ಟವಿಲ್ಲ ಎಂದು ಹೇಳಿ ಕಾಂಗ್ರೆಸ್ ಮತ್ತು ಜೆಡಿಎಸ್ ನ 17 ಶಾಸಕರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಇವರಲ್ಲಿ ರಾಮಲಿಂಗಾ ರೆಡ್ಡಿ, ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ ಸಿದ್ದರಾಮಯ್ಯನವರ ಆಪ್ತರು, ಅವರ ಆಣತಿ ಮೇರೆಗೆ ರಾಜೀನಾಮೆ ನೀಡಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದರು. 
ಸಿದ್ದರಾಮಯ್ಯ ಆಪ್ತ ಶಾಸಕರು ರಾಜೀನಾಮೆ ಎಂದು ಸುದ್ದಿ ಮಾಧ್ಯಮಗಳು ಸಹ ಸುದ್ದಿ ಬಿತ್ತರಿಸಿದ್ದವು. ಇದಕ್ಕೆ  ಸಿದ್ದರಾಮಯ್ಯ ಟ್ವೀಟರ್​ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com