ಬಳಿಕ ಮಾತನಾಡಿದ ಸಭಾಧ್ಯಕ್ಷರು, ಅತೃಪ್ತ ಶಾಸಕರು ಸಲ್ಲಿಸಿದ ರಾಜೀನಾಮೆ ಪತ್ರಗಳೆಲ್ಲ ಕ್ರಮಬದ್ಧವಾಗಿವೆ. ಅವಸರದಲ್ಲಿ ಅವುಗಳನ್ನು ಇತ್ಯರ್ಥ ಮಾಡುವುದಿಲ್ಲ. ನನಗೆ ಮನವರಿಕೆ ಆದ ಬಳಿಕವಷ್ಟೇ ಅವುಗಳನ್ನು ಅಂಗೀಕರಿಸುವೆ. ಶಾಸಕರ ಸಹಕಾರ ದೊರೆತರೆ ವಾರದಲ್ಲೇ ವಿಚಾರಣೆ ಮುಗಿಯಬಹುದು. ಇಲ್ಲದಿದ್ದರೆ ಒಂದು ತಿಂಗಳೂ ಆಗಬಹುದು. ನಾನು ಯಾರ ಹಂಗಿನಲ್ಲೂ ಇಲ್ಲ. ಸಂವಿಧಾನ ಮತ್ತು ಜನರ ಪರ ಎಂದು ಹೇಳಿದ್ದರು.