20 ವರ್ಷ, ಐದು ಚುನಾವಣೆ, ಹತ್ತು ಮುಖ್ಯಮಂತ್ರಿಗಳು: ಕರ್ನಾಟಕದ ರಾಜಕೀಯ ಅಸ್ಥಿರತೆಯ ಕಥೆ-ವ್ಯಥೆ!

ಕಳೆದ ಎರಡು ವಾರಗಳಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಬೀಸಿರುವ ಅಸ್ಥಿರತೆಯ ಚಂಡಮಾರುತ ಇಡೀ ದೇಶದ ಗಮನ ಸೆಳೆಯುತ್ತಿದೆ....
20 ವರ್ಷ, ಐದು ಚುನಾವಣೆ, ಹತ್ತು ಮುಖ್ಯಮಂತ್ರಿಗಳು
20 ವರ್ಷ, ಐದು ಚುನಾವಣೆ, ಹತ್ತು ಮುಖ್ಯಮಂತ್ರಿಗಳು
Updated on
ಬೆಂಗಳೂರು: ಕಳೆದ ಎರಡು ವಾರಗಳಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಬೀಸಿರುವ ಅಸ್ಥಿರತೆಯ ಚಂಡಮಾರುತ ಇಡೀ ದೇಶದ ಗಮನ ಸೆಳೆಯುತ್ತಿದೆ. 
ಪ್ರತಿಸಮಯದಲ್ಲೂ ಎಚ್.ಎಎಲ್ ವಿಮಾನ ನಿಲ್ದಾಣದದಿಂದ ಒಬ್ಬರ ಹಿಂದೆ ಒಬ್ಬ ಅತೃಪ್ತ ಶಾಸಕರು ವಿಮಾನ ಹತ್ತಿ ಹಾರುತ್ತಿದ್ದಾರೆ. ಸಿಎಂ ಕುಮಾರಸ್ವಾಮಿ ಅವರ ಮುಳುಗುತ್ತಿರುವ ಹಡಗಿನಲ್ಲಿ ರಂದ್ರ ಉಂಟಾಗಿದೆ, ಹೀಗಾಗಿ ಯಾವ ಸಮಯದಲ್ಲಿ ಹಡಗು ಮುಳುಗುತ್ತದೆ ಎಂದು ಸ್ಪಷ್ಟವಾಗಿ ಹೇಳಲಾಗುತ್ತಿಲ್ಲ, 
ಇದು ಭವಿಷ್ಯದಲ್ಲಿಯೂ ಈ ಹೈಡ್ರಾಮಾ ಭವಿಷ್ಯದಲ್ಲಿಯೂ ಮುಂದುವರಿಯಲಿದೆ.ಆದರೆ ಯಾರೋಬ್ಬರು ಕೂಡ  ಇದಕ್ಕೆ ಸಹಾಯ ಮಾಡಲಾಗದು, ಆದರೆ ಹಿಂದಿನದನ್ನು ಸ್ಮರಿಸಬಹುದಾಗಿದೆ.ಕರ್ನಾಟಕಕ್ಕೆ ಈ ಅಸ್ಥಿರತೆಯ ವಿದ್ಯನಾಮ ಹೊಸದು.
ಕಳೆದ 20 ವರ್ಷಗಳ ರಾಜಕೀಯವನ್ನು ಒಮ್ಮೆ ತಿರುವಿ ಹಾಕಿದರೇ, 20 ವರ್ಷಗಳಲ್ಲಿ 5 ಚುನಾವಣೆ ನಡೆದಿದೆ,  ಎರಡು ಚುನಾವಣೆಗಳಲ್ಲಿ ಸ್ಪಷ್ಟ ಬಹುಮತ ದೊರೆತಿದೆ, 2 ಬಾರಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿತ್ತು, ನಂಬಿ ಅಥವಾ ಬಿಡಿ ಈ ಅವಧಿಯಲ್ಲಿ ಸುಮಾರು 10 ಮಂದಿ ಮುಖ್ಯಮಂತ್ರಿಗಳು ಅಧಿಕಾರಕ್ಕೆ ಬಂದು ಹೋದರು,.
ಚುನಾವಣೆಯಲ್ಲಿ ರಾಜ್ಯದ ಜನತೆ ಯಾವಾಗಲೂ ಸರ್ಕಾರ ವಿರೋಧಿಸಿ ಮತ ಹಾಕುವುದು ಸಾಮಾನ್ಯವಾಗಿದೆ. 
ಕರ್ನಾಟಕ ರಾಜ್ಯವಾಗಿ ಪರಿಗಣಿತವಾದ ಮೇಲೆ 1972 ರಲ್ಲಿ ಡಿ,ದೇವರಾಜ್ ಅರಸ್ ಮತ್ತು 2013 ರಲ್ಲಿ ಸಿದ್ದರಾಮಯ್ಯ  ಇಬ್ಬರು ಮುಖ್ಯಮಂತ್ರಿಗಳು ಮಾತ್ರವೇ ಪೂರ್ಣಾವಧಿ ಐದು ವರ್ಷ ಆಡಲಿತ ಪೂರೈಸಿರುವ ಸಿಎಂ ಗಳಾಗಿದ್ದಾರೆ,.
ಒಟ್ಟಿನಲ್ಲಿ 18 ಸಿಎಂ ಗಳು ಕರ್ನಾಟಕದಲ್ಲಿ ಆಡಳಿತ ನಡೆಸಿದ್ದು, ಎಸ್ ಎಂ ಕೃಷ್ಣ 4 ವರ್ಷ 230 ದಿನಗಳು ಅಧಿಕಾರದಲ್ಲಿದ್ದರು. ಯಾವೊಂದು ಪಕ್ಷಕ್ಕೂ ಸ್ಪಷ್ಟ ಜನಾದೇಶ ಇಲ್ಲದಿರುವ ಕಾರಣ ರೆಸಾರ್ಟ್ ರಾಜಕೀಯ ತಲೆದೋರಿದೆ, ಜೊತೆಗೆ ಪಕ್ಷಗಳ ಆಂತರಿಕ ಜಗಳ, ಭ್ರಷ್ಟಾಚಾರ ಆರೋಪ, ನಿರಂತರ ಬದಲಾವಣೆಯಿಂದಾಗಿ ಕರ್ನಾಟಕ ಇಂದು ಈ ಸ್ಥಿತಿ ತಲುಪಿದೆ.
ಕಳೆದ 20 ವರ್ಷಗಳಲ್ಲಿ ಜೆಡಿಎಸ್ ಮೂರು ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿತ್ತು, ಎರಡು ಬಾರಿ ಕಾಂಗ್ರೆಸ್ ಹಾಗೂ ಒಂದು ಬಾರಿ ಬಿಜೆಪಿ, ಒದರೆ ಒಂದು ಬಾರಿ ಮಾತ್ರ ಜೆಡಿಎಸ್ ಅಧಿಕಾರ ಅನುಭವಿಸಿದೆ.
ತನ್ನ ಸ್ವ ಸಾಮರ್ಥ್ಯದಿಂದ ಅಧಿಕಾರಕ್ಕೆ ಬರಲು ಜೆಡಿಎಸ್ ವಿಫಲವಾದ ಕಾರಣ ಮೈತ್ರಿ ಮಾಡಿಕೊಂಡಿತ್ತು.ಎಸ್ ಎಂ ಕೃಷ್ಣ ಮತ್ತು ಸಿದ್ದರಾಮಯ್ಯ ಸರ್ಕಾರಗಳು ಮಾತ್ರವೇ ರಾಜ್ಯದಲ್ಲಿ ಸ್ಥಿರ ಆಡಳಿತ ನಡೆಸಿದ್ದು, ಅದಾದ ನಂತರ ಉತ್ತಮ ಆಡಳಿತ ನೀಡಲು  ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ  ಮತದಾರರು ಸ್ಪಷ್ಟ ಜನಾದೇಶ ನೀಡಿಲ್ಲ ಎಂದು ರಾಜಕೀಯ ವಿಶ್ಲೇಷಕ ಸಂದೀಪ್ ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ.
ಉಳಿದ ಸರ್ಕಾರಗಳು ರಾಜಕೀಯ ಅಸ್ಥಿರತೆಯಿಂದಾಗಿ  ಎಡವಿ ಬಿದ್ದವು, ಉಳಿದ ಸಮಯದಲ್ಲಿ ರಾಜಕೀಯ. ಅವಶ್ಯಕತೆಗಾಗಿ ಒಂದಾಗಿದ್ದವು, ಯಾವುವು ಸ್ವಾಭಾವಿಕ ಮೈತ್ರಿ ಯಾಗಿರಲಿಲ್ಲ,. ಅಧಿಕಾರದಲ್ಲಿದ್ದಾಗಲೆಲ್ಲಾ ಸರ್ಕಾರ ಉಳಿಸಿಕೊಳ್ಳಲು ಸರ್ಕಸ್ ಮಾಡಬೇಕಾಯಿತು ಎಂದು ಹೇಳಿದ್ದಾರೆ.
2004 ರಲ್ಲಿ ಮೊದಲ ಸಮಿಶ್ರ ಸರ್ಕಾರ ರಚನೆಯಾಯಿತು, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಲ್ಲಿ ಧರ್ಮಸಿಂಗ್ ಮುಖ್ಯಮಂತ್ರಿಯಾಗಿ ಕೇವಲ 250 ದಿನಗಳು ಮಾತ್ರ ಅಧಿಕಾರದಲ್ಲಿದ್ದರು, ಮೈತ್ರಿ ಪಕ್ಷಗಳ ಕಿತ್ತಾಟದಿಂದಾಗಿ, ಜೆಡಿಎಸ್ ಬಿಜೆಪಿ ಜೊತೆ ಸೇರಿ 20:20 ಸರ್ಕಾರ ರಚಿಸಿತು. ಮೊದಲ ಕಂಚಿನಲ್ಲಿ ಕುಮಾರಸ್ವಾಮಿ ಸಿಎಂ ಆಗಿ ಪದಗ್ರಹಣ ಮಾಡಿದ್ದರು.,
20 ತಿಂಗಳ ನಂತರ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಬೇಕಿತ್ತು,. ಆದರೆ ಜೆಡಿಎಸ್ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ವಿರೋಧ ವ್ಯಕ್ತ ಪಡಿಸಿತ್ತು, ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳಲು ಅಗತ್ಯ ಶಾಸಕರ ಸಂಖ್ಯೆ ಇರಲಿಲ್ಲ, ಹೀಗಾಗಿ ಬಲವಂತವಾಗಿ ರಾಷ್ಟ್ರ ಪತಿ ಆಳ್ವಿಕೆ ಹೇರಿಕೆಯಾಯಿತು. 2008 ರಲ್ಲಿ ಮತ್ತೆ ವಿಧಾನಸಭೆ ಚುನಾವಣೆ ಘೋಷಣೆಯಾಯಿತು,.
2008ರಲ್ಲಿ ಯಡಿಯೂರಪ್ಪ ಅನುಕಂಪದ ಅಲೆಯ ಮೇಲೆ ಅಧಿಕಾರಕ್ಕೆ ಬಂದರು. 110 ಸೀಟುಗಳಲ್ಲಿ ಬಿಜೆಪಿ ಜಯ ಸಾಧಿಸಿತು. ಬಹುಮತಕ್ಕೆ ಮೂರು ಕೊರತೆಯಾಯಿತು, ಮೊದಲ ಬಾರಿಗೆ ಕರ್ನಾಟಕದಲ್ಲಿ ಪಕ್ಷೇತರ ಶಾಸಕರ ಬೆಲೆ ತಿಳಿಯಿತು. ಪಕ್ಷೇತರ ಶಾಸಕರನ್ನು ಬಿಜೆಪಿ ರೆಸಾರ್ಟ್ ಗೆ ಕರೆದೊಯ್ದು ಬಹಮತಕ್ಕೆ ಅಗತ್ಯವಾದ ಬೆಂಬಲ ನೀಡುವ ಶಾಸಕರನ್ನು ಖರೀದಿಸಿತ್ತು.
ಆದರೆ ಒಂದೇ ಪಕ್ಷದ ಐದು ವರ್ಷದ ಆಡಳಿತವಾಧಿಯಲ್ಲಿ ಮೂರು ಸಿಎಂಗಳಾದದ್ದು ದುರಂತ. 1983, 2004, ಹಾಗೂ 2008 ರಲ್ಲಿ ನಡೆದು ವಿಧಾನಸಭೆ ಚುನಾವಣೆಗಳಲ್ಲಿ ಸ್ಪಷ್ಟ ಜನಾದೇಶ ಸಿಗಲಿಲ್ಲ ಎಂದು ಶಾಸ್ತ್ರಿ ಉಲ್ಲೇಖಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com