ಗುಸುಗುಸು ಸುದ್ದಿ: ಹೈಪ್ರೊಫೈಲ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಪ್ಲ್ಯಾನ್?

ಹೈ ಪ್ರೊಫೈಲ್ ಅಭ್ಯರ್ಥಿಗಳಿಗಾಗಿ ಬಿಜೆಪಿ ಪ್ಲಾನ್ ಮಾಡಿದ್ದು ಕ್ಯಾಂಡಿಡೇಟ್ ಗಳಿಗಾಗಿ ಬೇಟೆ ಆರಂಭಿಸಿದೆ, ಇನ್ ಫೊಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ...
ನಂದನ್ ನಿಲೇಕಣಿ, ಸುಧಾಮೂರ್ತಿ ಮತ್ತು ಮೋಹನ್ ದಾಸ್ ಪೈ
ನಂದನ್ ನಿಲೇಕಣಿ, ಸುಧಾಮೂರ್ತಿ ಮತ್ತು ಮೋಹನ್ ದಾಸ್ ಪೈ
ಬೆಂಗಳೂರು: ಹೈ ಪ್ರೊಫೈಲ್ ಅಭ್ಯರ್ಥಿಗಳಿಗಾಗಿ ಬಿಜೆಪಿ ಪ್ಲಾನ್ ಮಾಡಿದ್ದು ಕ್ಯಾಂಡಿಡೇಟ್ ಗಳಿಗಾಗಿ ಬೇಟೆ ಆರಂಭಿಸಿದೆ, ಇನ್ ಫೊಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಹೆಸರು ಬಿಜೆಪಿ ಪಾಳೆಯದಲ್ಲಿ ಹರಿದಾಡುತ್ತಿದೆ,
ನಂದನ್ ನಿಲೇಕಣಿ  ಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ 2014 ರಲ್ಲಿ ಬಿಜೆಪಿಯ ಅನಂತ್ ಕುಮಾರ್ ವಿರುದ್ಧ ಕಾಂಗ್ರೆಸ್ ನಿಂದ ಸ್ಪರ್ಧಿಸಿ 2,28 ಲಕ್ಷ ಮತಗಳಿಂದ ಸೋಲನುಭವಿಸಿದ್ದರು. ಈಗ ಅದೇ ನಂದನ್ ನಿಲೇಕಣಿ ಅವರನ್ನು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ  ಬಿಜೆಪಿ ಟಿಕೆಟ್ ನಲ್ಲಿ ಸ್ಪರ್ಧಿಸುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ, ಆದರೆ ತೇಜಸ್ವಿನಿ ಅನಂತ್ ಕುಮಾರ್ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
2014 ರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ  ನಿಲೇಕಣಿ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದರು,7,700 ಕೋಟಿ ರು ಆಸ್ತಿ ಘೋಷಿಸಿಕೊಂಡಿದ್ದರು,  ನಿಲೇಕಣಿ ಅವರನ್ನು ಚುನಾವಣೆಗೆ ಕರೆ ತರುವ ಸಂಬಂಧ ಮಾತುಕತೆಗಳು ನಡೆದಿದ್ದವು ಆದರೆ ಯಾವುದೀ ಇನ್ನೂ ಫಲಪ್ರದವಾಗಿಲ್ಲ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.
ತಾವು ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆ ಸ್ಪರ್ಧಿಸಲು ನಿಲೇಕಣಿ ಷರತ್ತೊಂದನ್ನು ಮುಂದಿಟ್ಟಿದ್ದರಂತೆ, ಮೋಹನ್ ದಾಸ್ ಪೈ ಅವರನ್ನ ದಕ್ಷಿಣ ಕನ್ನಡದಿಂದ ಕಣಕ್ಕಿಳಿಸುವ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ, ಆದರೆ ತಮ್ಮನ್ನು ಯಾರು ಸಂಪರ್ಕಿಸಿಲ್ಲ ಎಂದು ಮೋಹನ್ ದಾಸ್ ಪೈ ಸ್ಪಷ್ಟ ಪಡಿಸಿದ್ದಾರೆ.
ನಂದನ್ ನಿಲೇಕಣಿ ಮತ್ತು ಮೋಹನ್ ದಾಸ್ ಪೈ ನಿರಾಕರಿಸಿದರೇ ಇನ್ ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಅವರನ್ನು ಕಣಕ್ಕಿಲಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ ಎಂದು ಹೇಳಲಾಗುತ್ತಿದೆ, 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com