ಕುಮಾರಸ್ವಾಮಿ ಈಗಲೇ ರಾಜೀನಾಮೆ ನೀಡಿ ಖರ್ಗೆಗೆ ಸಿಎಂ ಸ್ಥಾನ ಬಿಟ್ಟುಕೊಡಲಿ: ಬಿಎಸ್‌ವೈ ಸವಾಲು

ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಮುಖ್ಯಮಂತ್ರಿಯಾಗಲಿಲ್ಲ ಎಂಬ ನೋವು ನಮಗೂ ಇದೆ ಎಂದು ಹೇಳಿದ...
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ
Updated on: 
ಕಲಬುರಗಿ: ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಮುಖ್ಯಮಂತ್ರಿಯಾಗಲಿಲ್ಲ ಎಂಬ ನೋವು ನಮಗೂ ಇದೆ ಎಂದು ಹೇಳಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು, ಕುಮಾರಸ್ವಾಮಿ ಈಗಲೇ ರಾಜೀನಾಮೆ ನೀಡಿ ಖರ್ಗೆಗೆ ಸಿಎಂ ಸ್ಥಾನ ಬಿಟ್ಟುಕೊಡಲಿ ಎಂದು ಸವಾಲು ಹಾಕಿದ್ದಾರೆ.
ಚಿಂಚೋಳಿ ದತ್ತು ಪಡೆಯುತ್ತೇನೆ ಎನ್ನುವ ಸಿಎಂ ಹೇಳಿಕೆಗೂ ತಿರುಗೇಟು ನೀಡಿದ ಬಿಎಸ್ ವೈ, ಇದುವರೆಗೂ ಚಿಂಚೋಳಿಯ ಕಡೆಗೆ ತಿರುಗಿಯೂ ನೋಡದ ಕುಮಾರಸ್ವಾಮಿ, ಚುನಾವಣೆ ಇದೆ ಅಂತ ಏನೇನೋ ಭರವಸೆ ಕೊಟ್ಟು ಹೋಗುತ್ತಿದ್ದಾರೆ. ಚಿಂಚೋಳಿ ದತ್ತು ಪಡೆಯುವುದಾದರೆ ಇಷ್ಟು ದಿನ ಸಿಎಂ ಏನು ಮಾಡುತ್ತಿದ್ದರು?' ಎಂದು ಪ್ರಶ್ನಿಸಿದರು.
ನಿನ್ನೆ ಚಿಂಚೋಳಿಯಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದ ಸಿಎಂ ಕುಮಾರಸ್ವಾಮಿ, 'ಖರ್ಗೆಯಂತಹ ದೊಡ್ಡ ನಾಯಕರನ್ನು ಕಳೆದುಕೊಳ್ಳಬೇಡಿ. ಅವರು ಎಂದೋ ಮುಖ್ಯಮಂತ್ರಿಯಾಗಬೇಕಿದ್ದವರು. ಕಾಂಗ್ರೆಸ್ ಹೈಕಮಾಂಡ್ ಮನಸ್ಸು ಮಾಡಿದ್ದರೆ ಸಮ್ಮಿಶ್ರದ ಸರ್ಕಾರದ ಮುಖ್ಯಮಂತ್ರಿ ಅವರೇ ಆಗುತ್ತಿದ್ದರು ಎಂದಿದ್ದರು. 
ಇಂದು ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ವೇದಿಕೆ ಮೇಲಿನಿಂದ ಮೊಸಳೆ ಕಣ್ಣೀರು ಸುರಿಸುವ ಕುಮಾರಸ್ವಾಮಿ, ಈಗಲೇ ರಾಜೀನಾಮೆ ಕೊಟ್ಟು ಖರ್ಗೆಯವರನ್ನು ಮುಖ್ಯಮಂತ್ರಿ ಮಾಡಲಿ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com