ಉಪಚುನಾವಣೆ: ಕಾಗವಾಡ, ಗೋಕಾಕ್'ನಲ್ಲಿ ಡಿಕೆ.ಶಿವಕುಮಾರ್, ಸಿದ್ದರಾಮಯ್ಯ ನಡುವೆ ಮನಸ್ತಾಪ?

ಉಪಚುನಾವಣೆ ಹತ್ತಿರಬರುತ್ತಿದ್ದು, ಪಕ್ಷದ ಟಿಕೆಟ್ ನೀಡುವಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ವೈಮನಸ್ಸು ಮೂಡಿದೆ ಎಂದು ಹೇಳಲಾಗುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಉಪಚುನಾವಣೆ ಹತ್ತಿರಬರುತ್ತಿದ್ದು, ಪಕ್ಷದ ಟಿಕೆಟ್ ನೀಡುವಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ವೈಮನಸ್ಸು ಮೂಡಿದೆ ಎಂದು ಹೇಳಲಾಗುತ್ತಿದೆ. 

ಬಿಜೆಪಿ ಬಂಡಾಯ ಶಾಸಕರಾದ ರಾಜು ಕಾಗೆಯವರನ್ನು ಕಾಗವಾಡದಲ್ಲಿ ಹಾಗೂ ಅಶೋಕ್ ಪೂಜಾರಿಯನ್ನು ಗೋಕಾಕ್ ನಲ್ಲಿ ಕಣಕ್ಕಿಳಿಸುವಂತೆ ಹಲವು ನಾಯಕರು ಒತ್ತಡ ಹೇರುತ್ತಿದ್ದಾರೆ. 

ಈ ನಡುವೆ ಬೆಳಗಾವಿ ರಾಜಕೀಯದಲ್ಲಿ ಡಿಕೆ.ಶಿವಕುಮಾರ್ ಎಂಟ್ರಿ ಕೊಟ್ಟಿರುವುದು ಜಾರಕಿಹೊಳಿಗೆ ಬೇಸರವನ್ನು ತರಿಸಿದೆ. ಅನರ್ಹ ಶಾಸಕ ರಮೇಶ್ ಜಾರಕಿಹೊಳಿಯವರ ರಾಜಕೀಯ ಭವಿಷ್ಯವನ್ನು ನೆಲಕಚ್ಚುವಂತೆ ಮಾಡಲು ಡಿಕೆ.ಶಿವಕುಮಾರ್ ಅವರು ಅಶೋಕ್ ಪೂಜಾರಿಯನ್ನು ಕಣಕ್ಕಿಳಿಸಲು ನಿರ್ಧರಿಸಿದ್ದಾರೆ. ಆದರೆ, ಸತೀಶ್ ಜಾರಕಿಹೊಳಿ ಈಗಾಗಲೇ ಸಹೋದರ ಲಖನ್ ಜಾರಕಿಹೊಳಿಯನ್ನು ನಿಲ್ಲಿಸಲು ನಿರ್ಧರಿಸಿದ್ದು, ಈಗಾಗಲೇ ಕಾಂಗ್ರೆಸ ಕೂಡ ಲಖನ್ ಜಾರಿಕಿಹೊಳಿಗೆ ಟಿಕೆಟ್ ನೀಡಿದೆ. ಇದೀಗ ಡಿ.ಕೆ.ಶಿವಕುಮಾರ್ ಅವರ ಮೇಲೆ ಬೇಸರಗೊಂಡಿರುವ ಸತೀಶ್ ಅವರು ಡಿಕೆಶಿ ಆಯೋಜಿಸಿದ್ದ ಸಭೆಯಿಂದರೂ ದೂರ ಉಳಿದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com