ಉಪಚುನಾವಣಾ ಸಮರ: ಘಟಾನುಘಟಿಗಳಿಂದ ಸೋಮವಾರ ನಾಮಪತ್ರ ಸಲ್ಲಿಕೆ

ಸೋಮವಾರ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಕಾಂಗ್ರೆಸ್,ಬಿಜೆಪಿ,ಜೆಡಿಎಸ್ ಈ ಮೂರುಪಕ್ಷಗಳ ಘಟನಾಘಟಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ.
ಎಂಟಿಬಿ ನಾಗರಾಜ್
ಎಂಟಿಬಿ ನಾಗರಾಜ್

ಬೆಂಗಳೂರು: ಸೋಮವಾರ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಈ ಮೂರುಪಕ್ಷಗಳ ಘಟನಾಘಟಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ.

ಹದಿನೈದು ಕ್ಷೇತ್ರಗಳ ಚುನಾವಣಾ ಕಣಕ್ಕೆ ಅಖಾಡ ಸಜ್ಜಾಗುತ್ತಿದ್ದು, ಡಿಸೆಂಬರ್ 5 ರಂದು ಉಪಕಣಕ್ಕೆ ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸಲು ನ.18 ಕೊನೆಯ ದಿನವಾಗಿರುವುದರಿಂದ ಕಾಂಗ್ರೆಸ್,ಜೆಡಿಎಸ್ ಹಾಗೂ ಬಿಜೆಪಿಯ ಘಟಾನುಘಟಿ ನಾಯಕರು ನಾಮಪತ್ರ ಸಲ್ಲಿಸಲಿದ್ದಾರೆ.

ನವೆಂಬರ್ 16ವರೆಗೆ 96 ಅಭ್ಯರ್ಥಿಗಳು 116 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ರಾಷ್ಟ್ರೀಯ ಪಕ್ಷಗಳ 27 ಅಭ್ಯರ್ಥಿಗಳಿಂದ 34 ನಾಮಪತ್ರ ಸಲ್ಲಿಸಿದ್ದು, ಎರಡು ರಾಜ್ಯ ಪಕ್ಷಗಳಿಂದ 2 ನಾಮಪತ್ರ ಸಲ್ಲಿಸಿದ್ದು,ನೊಂದಾಯಿತ ಮಾನ್ಯತೆ ರಹಿತ 25 ಅಭ್ಯರ್ಥಿ ಗಳಿಂದ 30 ನಾಮಪತ್ರ,42 ಪಕ್ಷೇತರ ಅಭ್ಯರ್ಥಿಗಳಿಂದ 50 ನಾಮಪತ್ರಗಳು ಇದುವರೆಗೆ ಸಲ್ಲಿಕೆಯಾಗಿವೆ. ಹಿರೆಕೆರೂರು ವಿಧಾನಸಭಾ ಕ್ಷೇತ್ರದಿಂದ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com