ಬಿಎಸ್ ವೈ ಸಂಪುಟ ಸಚಿವ ಮಾಧುಸ್ವಾಮಿ ವಿರುದ್ಧ ನೆಟ್ಟಿಗರು ಗರಂ!

ಸಿಎಂ ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿನ ಸಚಿವರಾದ ಜೆ.ಸಿ.ಮಾಧುಸ್ವಾಮಿ ವಿರುದ್ಧ ನೆಟ್ಟಿಗರು ಸಿಡಿದೆದ್ದಿದ್ದಾರೆ. #removefromcabinetjcmadhuswamy, ಎಂಬ ಹ್ಯಾಶ್ ಟ್ಯಾಗ್ ಒಂದು ಟ್ವಿಟ್ಟರ್ ಹಾಗೂ ಸಾಮಾಜಿಕ ತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. 
ಜೆ.ಸಿ.ಮಾಧುಸ್ವಾಮಿ
ಜೆ.ಸಿ.ಮಾಧುಸ್ವಾಮಿ
Updated on

ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿನ ಸಚಿವರಾದ ಜೆ.ಸಿ.ಮಾಧುಸ್ವಾಮಿ ವಿರುದ್ಧ ನೆಟ್ಟಿಗರು ಸಿಡಿದೆದ್ದಿದ್ದಾರೆ. #removefromcabinetjcmadhuswamy, ಎಂಬ ಹ್ಯಾಶ್ ಟ್ಯಾಗ್ ಒಂದು ಟ್ವಿಟ್ಟರ್ ಹಾಗೂ ಸಾಮಾಜಿಕ ತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಹ್ಯಾಶ್ ಟ್ಯಾಗ್ ನೊಂದಿಗೆ ನೆಟ್ಟಿಗರು ಮಾಧುಸ್ವಾಮಿ ಅವರ ಕುರಿತಂತೆ ವಿವಿಧ ಬಗೆಯ ಪ್ರತಿಕೂಲ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮಾಧುಸ್ವಾಮಿ ಕುರಿಬ ಸಮುದಾಯವನ್ನು ಅವಮಾನಿಸಿದ್ದಾರೆ ಎಂಬ ಕಾರಣಕ್ಕೆ ಆ ಸಮುದಾಯದ ಮುಖಂಡರು ಹಾಗೂ ಸದಸ್ಯರುಗಳು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ವಿರುದ್ಧ ಮುಗಿಬಿದ್ದಿದ್ದಾರೆ. 

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಶಾಸಕರನ್ನು ಕ್ಯಾಬಿನೆಟ್‌ನಿಂದ ತೆಗೆದುಹಾಕಬೇಕೆಂದು ಒತ್ತಡಗಳು ಹೆಚ್ಚುತ್ತಿದ್ದು ಚಿಕ್ಕನಾಯಕನಹಳ್ಳಿಯ ಹುಳಿಯಾರ್ ವೃತ್ತದಿಂದ ಕನಕದಾಸ’ರ ಹೆಸರು ಕೈಬಿಟ್ಟಿರುವುದು ಈ ಸಮಸ್ಯೆಗಳೆಲ್ಲದರ ಮೂಲವಾಗಿದೆ. ಈ ನಿರ್ಧಾರದ ಹಿಂದೆ ಮಾಧುಸ್ವಾಮಿ ಹಾಗೂ ಅವರ ಬೆಂಬಲಿಗರಿದ್ದಾರೆ ಎಂದು ಆರೋಪಿಸ;ಲಾಗಿದೆ.

ಕಳೆದ 13 ವರ್ಷಗಳಿಂದ ಕನಕದಾಸ ವೃತ್ತ ಎಂದು ಹೆಸರಿಸಲ್ಪಟ್ಟಿದ್ದ ಹುಳಿಯಾರ್ ಸರ್ಕಲ್ ಅನ್ನು ಮಾಧುಸ್ವಾಮಿ ಬದಲಿಸಿದ್ದಾರೆ.  ಎಂದು ಆರೋಪಿಸಲಾಗಿದೆ. ಅದನ್ನು ಬದಲಾಯಿಸದಂತೆ ಕುರುಬ ನಾಯಕರು ಒತ್ತಾಯಿಸಿದಾಗ ಸಹ ಕ್ಷಮೆಯಾಚನೆಗೆ ಮಾಧುಸ್ವಾಮಿ ನಿರಾಕರಿಸಿದ್ದಾರೆ. ಆದರೆ ಸಚಿವರು ಶಾಂತಿ ಸಭೆ ಕರೆದಿದ್ದು ಸಹ ವ್ಯರ್ಥವಾಗಿದೆ.

ಈ ವಿಷಯವನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ ಅವರಿಗೆ ತಿಳಿಸಲಾಗಿ ಅವರು ಮಾಧುಸ್ವಾಮಿಯವರನ್ನು ಕರೆದು ಕ್ಷಮೆಯಾಚಿಸಿ ಈ ವಿಷಯವನ್ನು ಕೊನೆಗೊಳಿಸುವಂತೆ ಒತ್ತಾಯಿಸಿದರು. ಆದರೆ ಮಾಧುಸ್ವಾಮಿ ಅದಕ್ಕೆ ಸಹ ಕಿವಿಗೊಡಲಿಲ್ಲ. ಪತ್ರಿಕೆ ಮಾಧುಸ್ವಾಮಿಯವರನ್ನು ಈ ಕುರಿತು ಸ್ಪಷ್ಟನೆ ಕೇಳಲು ಕರೆ ಮಾಡಿದರೆ ಸಹ ಅವರು ಮಾತಿಗೆ ಸಿಕ್ಕಲಿಲ್ಲ.ಕುರುಬ ಸಮುದಾಯದ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ಮಾಧುಸ್ವಾಮಿಯವರನ್ನು ಸಂಪುಟದಿಂದ ಕೈಬಿಡಬೇಕೆಂದು ಅನೇಕ ಕುರುಬ ಸಮುದಾಯದ ಮುಖಂಡರು ಮತ್ತು ಕುರುಬಕೊ.ಇನ್ ಸಮುದಾಯದ ಟ್ವಿಟರ್ ಹ್ಯಾಂಡಲ್ ರಾಜ್ಯಪಾಲ ವಾಜುಭಾಯ್ ವಾಲಾ ಮತ್ತು ಯಡಿಯೂರಪ್ಪ ಅವರನ್ನು ಒತ್ತಾಯಿಸಿದೆ.

ಕುರುಬ ಸಮುದಾಯದ ಮಠವಾದ  ಹಾಲುಮತ ಮಹಾಸಭಾ ಮೈಸೂರು ಡಿಸಿ ಕಚೇರಿಯ ಹೊರಗೆ ಪ್ರತಿಭಟನಾ ಸಭೆ ನಡೆಸಬೇಕೆಂದು ಕರೆ ನೀಡಿದ್ದು, ಮಾಧುಸ್ವಾಮಿಯವರನ್ನು "ಜಾತಿವಾದಿ" ಎಂದು ಆರೋಪಿಸಿಅವರನ್ನು ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com