ಮಗನ ನೋವು, ಕಣ್ಣೀರು, ಸಂಕಟ ನೋಡಿ ಪ್ರತಿದಿನ ಊಟ ಮಾಡುತ್ತಿದ್ದೆ: ದೇವೇಗೌಡ

ಕಾಂಗ್ರೆಸ್ ನಾಯಕರು ಕೊಟ್ಟ ಹಿಂಸೆಗೆ ತಮ್ಮ ಪುತ್ರ ಹೆಚ್ ಡಿ ಕುಮಾರಸ್ವಾಮಿ ಪ್ರತಿದಿನ ಕಣ್ಣೀರು ಹಾಕುತ್ತಿದ್ದರು, ತಾವು ಮಗನ ಸಂಕಟ, ನೋವನ್ನು ನುಂಗಿಕೊಂಡು ಪ್ರತಿದಿನ ಊಟ ಮಾಡಬೇಕಾದ ಪರಿಸ್ಥಿತಿ ಮೈತ್ರಿ ಸರ್ಕಾರದಲ್ಲಿತ್ತು ಎಂದು

Published: 23rd August 2019 01:23 PM  |   Last Updated: 23rd August 2019 01:23 PM   |  A+A-


Siddaramaih And Kumaraswamy

ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ

Posted By : Shilpa D
Source : UNI

ಬೆಂಗಳೂರು: ಕಾಂಗ್ರೆಸ್ ನಾಯಕರು ಕೊಟ್ಟ ಹಿಂಸೆಗೆ ತಮ್ಮ ಪುತ್ರ ಹೆಚ್ ಡಿ ಕುಮಾರಸ್ವಾಮಿ ಪ್ರತಿದಿನ ಕಣ್ಣೀರು ಹಾಕುತ್ತಿದ್ದರು, ತಾವು ಮಗನ ಸಂಕಟ, ನೋವನ್ನು ನುಂಗಿಕೊಂಡು ಪ್ರತಿದಿನ ಊಟ ಮಾಡಬೇಕಾದ ಪರಿಸ್ಥಿತಿ ಮೈತ್ರಿ ಸರ್ಕಾರದಲ್ಲಿತ್ತು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ

ಜೆ.ಪಿ.ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಅವರಿಗೆ ಸಿದ್ದರಾಮಯ್ಯ ನೀಡಿದ್ದ ಕಾಟಗಳೆಷ್ಟು? ಯಾವ ಕಾಂಗ್ರೆಸ್ ನಾಯಕರು ಹೇಗೆ ಹಿಂಸೆ ನೀಡಿದ್ದರು ಎಂಬುದು ತಮಗೆ ಮಾತ್ರ ಚೆನ್ನಾಗಿ ಗೊತ್ತು. ಸಿದ್ದರಾಮಯ್ಯ ನೀಡಿದ ಕಾಟವನ್ನು ಸಹಿಕೊಳ್ಳಲಾಗದೇ ಕುಮಾರಸ್ವಾಮಿ ಕಣ್ಣೀರು ಹಾಕುತ್ತಾ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ತಮ್ಮ ಬಳಿ ಬಂದಿದ್ದರು. ಕುಮಾರಸ್ವಾಮಿ ಅವರ ರಾಜೀನಾಮೆಗೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‍ ನಾಯಕರೇ ಕಾರಣ ಎಂದು ಆರೋಪಿಸಿದರು.

ಮೈತ್ರಿ ಸರ್ಕಾರವನ್ನು ಉರುಳಿಸಿದ ಸಿದ್ದರಾಮಯ್ಯ ಇದೀಗ ತಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ನೀಡುತ್ತಿದ್ದ ಹಿಂಸೆಯನ್ನು ಸರ್ಕಾರದಲ್ಲಿದ್ದಾಗ ಹೇಳಲಾಗಲಿಲ್ಲ. ನೋವನ್ನು ಸಹಿಸಿಕೊಂಡೇ ಇರಬೇಕಾದ ಪರಿಸ್ಥಿತಿಯಿತ್ತು. ಪ್ರಾದೇಶಿಕ ಪಕ್ಷವಾಗಿ  ಸರ್ಕಾರದಿಂದ ಹೊರಬಂದರೆ ತಪ್ಪು ಸಂದೇಶ ಹೋಗುತ್ತದೆ ಎಂಬ ಕಾರಣಕ್ಕಾಗಿ ನೋವನ್ನು  ಸಹಿಸಿಕೊಂಡು ಹೋಗು ಎಂದು ಕುಮಾರಸ್ವಾಮಿಗೆ ಹೇಳಿದ್ದೆ. ಈಗ ಮೈತ್ರಿ ಇಲ್ಲ. ಹೀಗಾಗಿ ನೋವನ್ನು ಬಹಿರಂಗಪಡಿಸುತ್ತಿರುವುದಾಗಿ ದೇವೇಗೌಡರು ಹೇಳಿದರು.

Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp