ಕರ್ನಾಟಕದಲ್ಲಿ'ಕೇಸರಿ' ಬಾತ್: ಯಡಿಯೂರಪ್ಪ ಸರ್ಕಾರ ಸೇಫ್

ರಾಜ್ಯದ 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ 12 ರಲ್ಲಿ ಗೆದ್ದು  ಕೇಸರಿ ಪಾಳಯ ಬೀಗುತ್ತಿದೆ.  ಉಪ ಚುನಾವಣೆಯಲ್ಲಿ  ಬಿಜೆಪಿಗೆ ಸ್ಪಷ್ಟ ಜನಾದೇಶ ದೊರಕಿದ್ದು ಮುಂದಿನ ಮೂರುವರೆ ವರ್ಷ ಯಡಿಯೂರಪ್ಪ ಸರ್ಕಾರ ಸೇಫ್ ಆಗಿರುತ್ತದೆ ಎಂದು ಹೇಳಲಾಗುತ್ತಿದೆ
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ 12 ರಲ್ಲಿ ಗೆದ್ದು  ಕೇಸರಿ ಪಾಳಯ ಬೀಗುತ್ತಿದೆ.  ಉಪ ಚುನಾವಣೆಯಲ್ಲಿ  ಬಿಜೆಪಿಗೆ ಸ್ಪಷ್ಟ ಜನಾದೇಶ ದೊರಕಿದ್ದು ಮುಂದಿನ ಮೂರುವರೆ ವರ್ಷ ಯಡಿಯೂರಪ್ಪ ಸರ್ಕಾರ ಸೇಫ್ ಆಗಿರುತ್ತದೆ ಎಂದು ಹೇಳಲಾಗುತ್ತಿದೆ.

ಇನ್ನು ಉಪ ಚುನಾವಣೆಯಲ್ಲಿ ಗೆದ್ದಿರುವ ಎಲ್ಲಾ ಶಾಸಕರಿಗೂ ಬಿಜೆಪಿ ಸಚಿವ ಸ್ಥಾನ ನೀಡಲಿದೆ, ಕಾಂಗ್ರೆಸ್ 2 ಸ್ಥಾನ ಗಳಿಗೆ ತೃಪ್ತಿ ಪಟ್ಟರೆ ಜೆಡಿಎಸ್ ಶೂನ್ಯ ಸಂಪಾದನೆ ಮಾಡಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ ಕೂಡ ಗೆದ್ದು ಬೀಗಿದ್ದಾರೆ. ಒಕ್ಕಲಿಗರ ಭಧ್ರಕೋಟೆಯಲ್ಲಿ ಜೆಡಿಎಸ್ ಎಡವಿ ಬಿದ್ದಿದೆ,

ಹುಣಸೂರು ಮತ್ತು ಹೊಸಕೋಟೆಯಲ್ಲಿ ಕ್ರಮವಾಗಿ ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಸೋತಿದ್ದಾರೆ, ಶಿವಾಜಿ ನಗರದಲ್ಲಿ ರಿಜ್ವಾನ್ ಅರ್ಷದ್  ಮೊದಲ ಬಾರಿಗೆ ಗೆದ್ದಿದ್ದಾರೆ.

ಅನರ್ಹ ಶಾಸಕರಿಗೆ ಸೂಕ್ತ ಪಾಠ ಕಲಿಸುವುದಾಗಿ ಹೇಳಿದ್ದ ಕಾಂಗ್ರೆಸ್ ಅಹಿಂದ ವನ್ನು  ಮತ್ತು ಜೆಡಿಎಸ್ ಒಕ್ಕಲಿಗ ಕಾರ್ಡ್ ಪ್ಲೇ ಮಾಡಿದ್ದು ಪ್ರಯೋಜನಕ್ಕೆ ಬಾರಲಿಲ್ಲ, ಈ ಉಪ ಚುನಾವಣೆಯಲ್ಲಿ ಜನತೆ ಕೇವಲ ಬಿಜೆಪಿಯನ್ನು ಮಾತ್ರ ಬೆಂಬಲಿಸಿಲ್ಲ,  ಅಭ್ಯರ್ಥಿಗಳನ್ನು ವಯಕ್ತಿಕವಾಗಿ ಸಪೋರ್ಟ್ ಮಾಡಿದೆ.  ಕಾಂಗ್ರೆಸ್ ಮತ್ತು ಜೆಡಿಸ್ ಗಿಂತ ಬಿಜೆಪಿಗೆ ಹೆಚ್ಚು ಮತಗಳ ಹಂಚಿಕೆಯಾಗಿದೆ. 

ಅತ ದೊಡ್ಡ ಗೆಲುವು ಎಂದರೇ ಕೆ.ಆರ್ ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು,  ಜೆಡಿಎಸ್  ಭದ್ರಕೋಟೆಯಾಗಿದ್ದ ಮಂಡ್ಯದಲ್ಲಿ  ಮೊದಲ ಬಾರಿಗೆ ಬಿಜೆಪಿ ತನ್ನ ಖಾತೆ ತೆರೆದಿದೆ,  ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಕೆ.ಆರ್ ಪೇಟೆ ಗೆಲುವಿಗಾಗಿ ರಣತಂತ್ರ ಹೆಣೆದಿದ್ದರು,   ಉಪ ಚುನಾವಣೆ ಬಿಜೆಪಿಯ ಎರಡನ್ ಸುತ್ತಿನ ನಾಯಕರಾದ ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ ಅವರಿಗೆ ಸತ್ವ ಪರೀಕ್ಷೆಯಾಗಿತ್ತು. ಈ ಪರೀಕ್ಷೆಯಲ್ಲಿ ಇಬ್ಬರು ಯಶಸ್ವಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com